ಪುತ್ತೂರು : ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧಿಕೃತ ಲೋಗೋ ಬಳಸಿ, ಟ್ರಸ್ಟಿನ ಸಂಚಾಲಕ ಅರುಣ್ ಕುಮಾರ್ ಪುತ್ತಿಲರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯನ್ನು ಹಂಚಿರುವ ಕುರಿತು ಇಬ್ಬರು ವ್ಯಕ್ತಿಗಳ ವಿರುದ್ಧ ಟ್ರಸ್ಟ್‌ನ ಪದಾಧಿಕಾರಿಗಳು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅರುಣ್ ಕುಮಾರ್ ಪುತ್ತಿಲರು ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಸುಮಾರು 62.458 ಮತ ಪಡೆದು 2 ನೇ ಸ್ಥಾನ ಪಡೆದಿರುವ ಇವರ ಬಗ್ಗೆ ಫೇಸ್ ಬುಕ್ ನಲ್ಲಿ ಶರತ್ ಗೌಡ ಎಂಬ ವ್ಯಕ್ತಿ ಹೆಸರಿನಲ್ಲಿ ಆರುಣ್ ಕುಮಾರ್ ಪುತ್ತಿಲ ಅವರ ಫೋಟೋ ಹಾಕಿ ಮತ್ತು ಪುತ್ತಿಲ ಪರಿವಾರ ಟ್ರಸ್ಟ್ ನ ಲೋಗೋ ಹಾಕಿ ದಿನಾಂಕ: 18-06-2026 ರಂದು ಕಣ ಕಣದಲ್ಲೂ ಕೇಸರಿ.. ಅಣ್ಣನಿಗೆ ಜೈ.. ಎಂದು ಹಾಗೂ ಫೋಟೋದಲ್ಲಿ ನಮ್ಮ ಮೊದಲ ಆದ್ಯತೆ ದುಡ್ಡು ನಮ್ಮ ಕೊನೆಯ ಆದ್ಯತೆಯೂ ದುಡ್ಡು ಮಾಡುವುದು… ಎಂದು ಹಾಗೂ ಫೋಟೋದ ಹಿಂಭಾಗದಲ್ಲಿ ದೇವಸ್ಥಾನದ ಫೋಟೋ ಹಾಗೂ ತ್ರಿಶೂಲ ಶಂಖ ವನ್ನು ಚಿತ್ರಿಸಿ ಪೋಸ್ಟ್ ಮಾಡಿರುತ್ತಾರೆ. ಈ ಪೋಸ್ಟ್ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಉಂಟು ಮಾಡುವ ಉದ್ದೇಶದಿಂದ ಪ್ರಕಟಿಸಲ್ಪಟ್ಟಿದ್ದು ಟ್ರಸ್ಟ್ ನ ಹಾಗೂ ವ್ಯಕ್ತಿಯ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆ ಉಂಟುಮಾಡಿದೆ. ಹಾಗೂ ಅರುಣ್ ಕುಮಾರ್ ಪುತ್ತಿಲ ಅವರ ಹಾಗೂ ಟ್ರಸ್ಟ್ ನ ಮಾನ ಹಾನಿ ಸುಳ್ಳು ಮಾಹಿತಿ ಪ್ರಸಾರ ಹಾಗೂ ಸಮಾಜದಲ್ಲಿ ದ್ವೇಶ ಹಾಗೂ ಗೊಂದಲ ಉದ್ದೇಶ ಹೊಂದಿರುವುದಾಗಿ ಕಂಡು ಬರುತ್ತದೆ. ಆದ್ದರಿಂದ ಮೇಲ್ಕಂಡ ಪೋಸ್ಟ್ ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಸೂಕ್ತ ತನಿಖೆ ನಡೆಸಿ ಭಾರತೀಯ ನ್ಯಾಯ ಸಂಹಿತೆ 2023 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಪ್ರವೀಣ್ ಆಚಾರ್ಯ ಎಂಬ ವ್ಯಕ್ತಿ ಮಾನ ಹಾನಿಕರ ಕಮೆಂಟ್ ಮಾಡಿದ್ದು ಈ ಕಮೆಂಟ್ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಉಂಟು ಮಾಡುವ ಉದ್ದೇಶದಿಂದ ಹಾಕಿದ್ದು ಇದರಿಂದ ಆರುಣ್ ಕುಮಾರ್ ಪುತ್ತಿಲ ಅವರ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆ ಉಂಟುಮಾಡಿದೆ. ಹಾಗೂ ಆರುಣ್ ಕುಮಾರ್ ಪುತ್ತಿಲ ಅವರ ಮಾನ ಹಾನಿ ಸುಳ್ಳು ಮಾಹಿತಿ ಪ್ರಸಾರ ಹಾಗೂ ಸಮಾಜದಲ್ಲಿ ದ್ವೇಶ ಹಾಗೂ ಗೊಂದಲ ಉದ್ದೇಶ ಹೊಂದಿರುವುದಾಗಿ ಕಂಡು ಬರುತ್ತದೆ. ಆದ್ದರಿಂದ ಅರುಣ್ ಕುಮಾರ್ ಪುತ್ತಿಲ ಫ್ಯಾನ್ಸ್ ಕ್ಲಬ್ ಎಂಬ ಖಾತೆಯಿಂದ ಮಾಡಿದ ಪೋಸ್ಟ್ ಗೆ ಮಾನ ಹಾನಿ ಕಮೆಂಟ್ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ತನಿಖೆ ನಡೆಸಿ ಭಾರತೀಯ ನ್ಯಾಯ ಸಂಹಿತೆ 2023 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರಂತೆ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ ಭಟ್, ಸಂಘಟನಾ ಕಾರ್ಯದರ್ಶಿ ಅನಿಲ್ ತೆಂಕಿಲ, ಕೋಶಾಧಿಕಾರಿ ರೂಪೇಶ್ ನಾೖಕ್, ಮಾಜಿ ಅಧ್ಯಕ್ಷ ಮಹೇಂದ್ರ ವರ್ಮ ದೂರು ನೀಡುವ ಸಂದರ್ಭ ಉಪಸ್ಥಿತರಿದ್ದರು.























