ಪುತ್ತೂರು ಬಿಜೆಪಿ ಮುಖಂಡರ ನಡುವೆ ಹೊಡೆದಾಟ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರ ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ. ಎಂಎಲ್ ಸಿ ಕಿಶೋರ್ ಬೊಟ್ಯಾಡಿಯಿಂದ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಿಗೆ ಹಲ್ಲೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಇದು ಯಾವ ಕಾರಣಕ್ಕೆ ಈ ರೀತಿಯ ಸುಳ್ಳು ಸುದ್ದಿ ಹರಿದಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ.
ಇವತ್ತು ಪುತ್ತೂರಿನಲ್ಲಿ ತಿರಂಗ ಯಾತ್ರೆ ಕಾರ್ಯಕ್ರಮ ನಡೀತಾ ಇದೆ.ಹೀಗಿರುವಾಗ ತಿರಂಗ ಯಾತ್ರೆ ಕಾರ್ಯಕ್ರಮ ಯಶಸ್ವಿ ಆಗೋದನ್ನ ತಡೆಯಲು ಈ ರೀತಿಯ ಷಡ್ಯಂತ್ರವನ್ನ ಮಾಡ್ತಾ ಇದ್ದಾರೆ.ಯಾರು ಸಾಮಾಜಿಕ ಜಾಲತಾಣದಲ್ಲಿ ಹೀಗೆಲ್ಲ ವಿಚಿತ್ರವಾಗಿ ವರ್ತಿಸುತ್ತಾರೋ ಇದು ಸರಿಯಲ್ಲ. ಕಿಶೋರ್ ಬೊಟ್ಯಾಡಿ ಮತ್ತು ನನ್ನ ಗೆಳೆತನ ಬಾಲ್ಯದ ಗೆಳೆತನ.
ನಾವಿಬ್ಬರು ಬಿಜೆಪಿ ಪಕ್ಷಕ್ಕಾಗಿ ಯಾವ ರೀತಿ ಬೇಕಾದ್ರೂ ಕೆಲಸ ಮಾಡುತ್ತೇವೆ. ತಿರಂಗ ಕಾರ್ಯಕ್ರಮದಲ್ಲೂ ನಾವಿಬ್ಬರು ಜೊತೆಯಾಗಿ ಕೆಲಸ ಮಾಡ್ತಾ ಇದ್ದೇವೆ ಬಿಜೆಪಿ ಮುಖಂಡರ ನಡುವೆ ಹೊಡೆದಾಟ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿ ಸುಳ್ಳು ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರ್ ಹೇಳಿಕೆ ನೀಡಿದ್ದಾರೆ.























