ಸುಳ್ಯ: ಸೆ 18 ಮಂಗಳೂರು ಸ್ಕೌಟ್ಸ್ & ಗೈಡ್ಸ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗೀತಾ ಗಾಯನ ಸ್ಪರ್ಧೆಯಲ್ಲಿ ಜಾಲ್ಸೂರು ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಪುಟಾಣಿ ಬುಲ್ ಬುಲ್ ತಂಡ ತೃತೀಯ ಬಹುಮಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದೆ.ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ತರಬೇತುದಾರರಿಗೆ,ಆಡಳಿತ ಮಂಡಳಿ, ಪೋಷಕ ವೃಂದ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದರು.
























