ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಷ್ಮಾ ರಾಜ್. ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೋ ವೈರಲ್
ಕರಾವಳಿಯ ಹೆಣ್ಣು ಎಂದೇ ಖ್ಯಾತಿ ಪಡೆದಿರುವ ಸುಷ್ಮಾ ರಾಜ್ ಮೂಲತಃ ಉಡುಪಿಯವರು. ಅಶೋಜ್ ರಾಜ್- ರಾಧಾ ದಂಪತಿಯ ಮುದ್ದು ಮಗಳು.
ಪ್ಯಾಟೆ ಹುಡುಗಿ ಹಳ್ಳಿ ಲೈಟ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿರುವ ಸುಷ್ಮಾ ರಾಜ್ ಅವರ ತಂದೆ ಕಳೆದ 35 ವರ್ಷಗಳಿಂದ ಹುಲಿಕುಣಿತ ತರಬೇತಿ ನೀಡುತ್ತಿದ್ದರು.

ಜಾಹೀರಾತು
ಹುಟ್ಟೂರಿನಲ್ಲಿ ಸುಷ್ಮಾ ಮತ್ತು ನಿಶಾನ್ ನರೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದರು.
ನಿಶಾನ್ ನರೇಂದ್ರ ಅವರಿಗಿಂತ ಎರಡು ವರ್ಷ ದೊಡ್ಡವರು ಸುಷ್ಮಾ ರಾಜ್. ಕಳೆದ ವರ್ಷ ತಮ್ಮ ಪ್ರೀತಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು.
ಅದ್ಧೂರಿಯಾಗಿ ಮೆಹೇಂದಿ, ಆರತಕ್ಷತ ಮತ್ತು ಮದುವೆ ನಡೆದಿದೆ. ಮದುವೆಯ ದಿನ ತಮ್ಮ 5 ಶ್ವಾನಗಳನ್ನು ಪುಟ್ಟ ಮಕ್ಕಳಂತೆ ರೆಡಿ ಮಾಡಿದ್ದರು.
ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಚಿತ್ರದಲ್ಲಿ ನಟಿಸಿರುವ ಸುಷ್ಮಾ ರಾಜ್ ‘ಹುಬ್ಬಳ್ಳಿ ಹುಡುಗ ಮಂಗಳೂರು ಹುಡುಗಿ’ ಧಾರಾವಾಹಿಯಲ್ಲೂ ನಟಿಸಿದ್ದಾರೆ.

ಜಾಹೀರಾತು

ಜಾಹೀರಾತು