ಕೋಡಿಂಬಾಡಿ: ದಕ್ಷಿಣ ಕನ್ನಡದವರು ಸೇನೆಗೆ ಸೇರಲು ಹೆಚ್ಚಿನ ಒಲವು ತೋರಿಸಬೇಕು ಪುಣೆಯ ಇಂಟೆಲಿಜೆನ್ಸ್ ತರಬೇತಿ ಶಾಲೆಯ ಯೋಧ ಸುಧೀರ್ ಶೆಟ್ಟಿ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಂಬಾಡಿ (ಕೆ ಪಿ ಎಸ್) ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೇರವೇರಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ ನಮ್ಮ ದೇಶದ ಜನರ ತ್ಯಾಗ ಬಲಿದಾನದ ಪ್ರತೀಕ ತ್ರಿವರ್ಣಧ್ವಜ. ಇದನ್ನು ಜತನದಿಂದ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಯೋಧನಾಗಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ. ಯಾರದೋ ತಾಯಿಯ ಮಗ ಪತ್ನಿಯ ಗಂಡ ತಮ್ಮನೋ ಅಣ್ಣನೋ ದೇಶಕ್ಕಾಗಿ ಪ್ರಾಣ ಕೊಡುತ್ತಾರೆಂದರೆ ಅದಕ್ಕಿಂತ ಶ್ರೇಷ್ಠವಾದುದು ಬೇರೋಂದಿಲ್ಲ. ತಾನು ಜಮ್ಮುಕಾಶ್ಮೀರ ದ ಕಣಿವೆಯಲ್ಲಿ ಸೇವೆ ಯಲ್ಲಿದ್ದಾಗ ನಡೆದ ಭಯೋತ್ಪಾದಕ ಆಪರೇಷನ್ ಪ್ರತ್ಯಕ್ಷ ಸೈನಿಕರ ಸಾವು ನೋವುಗಳು ತಾನು ಜೀವಂತವಾಗಿ ಬದುಕುಳಿದ ಅನುಭವ ಗಳನ್ನು ಹಂಚಿಕೊಂಡು ಮಕ್ಕಳಿಗೆ ದೇಶದ ಬಗ್ಗೆ ಹೇಗೆ ಅಭಿಮಾನ ಬೆಳೆಸಿ ಕೊಳ್ಳಬೇಕೆಂಬುದನ್ನು ತಿಳಿಸಿದರು.
ಸಮಾರಂಭದಲ್ಲಿ ಇನ್ನೋರ್ವ ಹಿರಿಯರಾದ ಧ್ವಜಸ್ತಂಭ ಕಟ್ಟೆಯ ದಾನಿ ಮತ್ತು ನಾಟಿ ವೈದ್ಯೆ ಶ್ರೀಮತಿ ವಾರಿಜಾ ಎಂ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಅತಿಥಿ ಗಳಾಗಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಮುರಳೀಧರ ರೈ ಮತ್ತು ಶ್ರೀ ಹುಸೈನ್ ಕೆ. ಬಿ. ಕೆ. ದಾನಿಗಳು ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಲಕ್ಷ್ಮೀ ರೈ. ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಶ್ರೀಮತಿ ಸ್ಪೂರ್ತಿ ರಾಜಮಣಿ ರೈ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳಿಂದ ಭಾಷಣ ದೇಶಭಕ್ತಿ ಗೀತೆ ಕಾರ್ಯ ಕ್ರಮ ನಡೆಯಿತು. ಪ್ರ ಮು ಶಿಕ್ಷಕಿ ಭಾರತಿ ಸ್ವರಮನೆ ಮತ್ತು ಶಿಕ್ಷಕಿ ಶ್ರೀಮತಿ ಪಾವನಾ ಅತಿಥಿ ಗಳನ್ನು ಸ್ವಾಗತಿಸಿ ಶ್ರೀಮತಿ ಅಶ್ವಿನಿ ವಂದಿಸಿ ಶ್ರೀಮತಿ ನಿರ್ಮಲ ಮತ್ತು ಕವಿತಾ ಕಾರ್ಯ ಕ್ರಮ ನಿರೂಪಿಸಿದರು. ಮಾಜಿ ಎಸ್ಡಿ ಎಂಸಿ ಅಧ್ಯಕ್ಷ ರಾದ ಶೇಖರ ಪೂಜಾರಿ ಸನ್ಮಾನ ಪತ್ರವಾಚಿಸಿದರು ಶಿಕ್ಷಕಿ ಯರಾದ ಶ್ರೀಮತಿ ಅರುಣಾ, ಅಶ್ವಿತಾ ಶ್ರೀಮತಿ ವಿಜಯ ಪ್ರಭು ಮತ್ತು ಆಯಾ ಶ್ರೀಮತಿ ವಿದ್ಯಾ ಸಹಕರಸಿದರು. ಮಕ್ಕಳಿಗೆ ಸಿಹಿತಿಂಡಿ ಹಂಚುವುದರೊಂದಿಗೆ ಕಾರ್ಯ ಕ್ರಮ ಮುಕ್ತಾಯ ಗೊಂಡಿತು.
























