ಪುತ್ತೂರು: ಡಿಸೆಂಬರ್ ತಿಂಗಳಲ್ಲಿ ಮಹಾಲಿಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿರುವ ಗಿರಿಜಾ ಕಲ್ಯಾಣೋತ್ಸವದ ಪೂರ್ವಭಾವಿ ಸಭೆಯಲ್ಲಿ ಸಂಪೂರ್ಣ ಗಿರಿಜಾ ಕಲ್ಯಾಣೋತ್ಸವ ಸಮಿತಿಯನ್ನು ಘೋಷಿಸಲಾಯಿತು.
ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ಡಿಸೆಂಬರ್‌ನಲ್ಲಿ ಶ್ರೀ ಮಹಾಲಿಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿರುವ ‘ಗಿರಿಜಾ ಕಲ್ಯಾಣೋತ್ಸವ’ ಸಮಿತಿ ಅಧ್ಯಕ್ಷರಾಗಿ ಡಾ. ಅಖಿಲೇಶ್ ಪಾಣಾಜೆ, ಸಂಚಾಲಕರಾಗಿ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಯಾಗಿ ಅನಿಲ್ ತೆಂಕಿಲ, ಕಾರ್ಯಧ್ಯಕ್ಷರಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ ಹಾಗೂ ಕೋಶಾಧಿಕಾರಿಯಾಗಿ ಉದಯ ಕುಮಾರ್ ರೈ ಆಯ್ಕೆ ಮಾಡಲಾಯಿತು.
ಸೆ.27ರಂದು ಮುಕ್ರಂಪಾಡಿ ಸುಭದ್ರಾ ಕಲಾ ಮಂದಿರದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಹಿರಿಯ ಆರ್‌ಎಸ್‌ಎಸ್ ಮುಖಂಡ ಬಾಲಕೃಷ್ಣ ರೈ ಮೊಗರೋಡಿ, ಕ್ಯಾನ್ಸರ್ ತಜ್ಞ ಡಾ. ರಘು ಬೆಳ್ಳಿಪ್ಪಾಡಿ, ಪ್ರಗತಿ ಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಉದ್ಯಮಿ ಸುಜೀರ್ ಗಣಪತಿ ನಾಯಕ್ ಉಪ್ಪಿನಂಗಡಿ, ನಿವೃತ್ತ ಕಂದಾಯ ನಿರೀಕ್ಷಕ, ಕೃಷಿಕರಾಗಿರುವ ಮೋನಪ್ಪ ಪುರುಷ ಮುಗೇರಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ವಿವಿಧ ಉಪಸಮಿತಿಗಳಾಗಿ ಆಹಾರ ಸಮಿತಿ ಸಂಚಾಲಕರಾಗಿ ಮಹೇಂದ್ರ ವರ್ಮ, ಸಹಸಂಚಾಲಕರಾಗಿ ರಾಜೇಶ್ ಬೊಳುವಾರು, ಹರೀಶ್ ಬಿ.ಕೆ.,ಅಲಂಕಾರ ಸಮಿತಿ ಸಂಚಾಲಕರಾಗಿ ದಿರೇನ್ ದರ್ಬೆ ಸಹ ಸಂಚಾಲಕರಾಗಿ ಗಣೇಶ್ ಮುಕ್ರಂಪಾಡಿ, ಗಿರೀಶ್ ಕರ್ಗಲ್ಲು, ಆಮಂತ್ರಣ ಸಮಿತಿ ಸಂಚಾಲಕರಾಗಿ ರವಿ ಕುಮಾರ್ ರೈ, ಸಹ ಸಂಚಾಲರಾಗಿ ಮನೀಶ್ ಕುಲಾಲ್, ಹರೀಶ್ ಭಟ್ ಪುಣಚ, ಆರ್ಥಿಕ ಸಮಿತಿ ಸಂಚಾಲಕರಾಗಿ ನಾರಾಯಣ ಪ್ರಕಾಶ್, ಶ್ಯಾಮ್ ಪ್ರಕಾಶ್ ಬೆಂಗಳೂರು, ಸಹ ಸಂಚಾಲಕರಾಗಿ ರಾಜು ಶೆಟ್ಟಿ, ಶ್ರೀಕಾಂತ ಆಚಾರ್, ಪ್ರಚಾರ ಸಮಿತಿ ಸಂಚಾಲಕರಾಗಿ ನವೀನ್ ರೈ, ಸಹ ಸಂಚಾಲಕರಾಗಿ ಪ್ರತೀಕ ಪುತ್ತಿಲ, ಸಂದೀಪ್ ಪಾಣಾಜೆ, ಹೊರೆಕಾಣಿಕೆ ಸಮಿತಿ ಸಂಚಾಲಕರಾಗಿ ಪದ್ಮನಾಭ ಗೌಡ, ಸತ್ಯಪ್ರಕಾಶ್ ಕೊಳ್ತಿಗೆ, ಸಹ ಸಂಚಾಲಕರಾಗಿ ಧರ್ಣಪ್ಪ ನಾಯ್ಕ, ಪ್ರದೀಪ್ ಪಾಣಾಜೆ, ಮಹಿಳಾ ಸಮಿತಿ ಸಂಚಾಲಕರಾಗಿ ಅನ್ನಪೂರ್ಣ ಬಲ್ಲಾಳ್, ಸಹ ಸಂಚಾಲಕರಾಗಿ ರಜತಾ ಭಟ್, ಪವಿತ್ರ ದೊಡ್ಡಡ್ಕ, ಸ್ವಯಂ ಸೇವಕ ಸಮಿತಿ ಸಂಚಾಲಕರಾಗಿ ಪ್ರೇಮ್‌ರಾಜ್ ಆರ್ಲಪದವು, ಸಹ ಸಂಚಾಲಕರಾಗಿ ಧನಂಜಯ, ನಾರಾಯಣ ನಾಯ್ಕ, ವೈದಿಕ ಸಮಿತಿ ಸಂಚಾಲಕರಾಗಿ ಬ್ರಹ್ಮಶ್ರೀಗುರುತಂತ್ರಿ, ಶಂಬು ಭಟ್, ಸಹ ಸಂಚಾಲಕರಾಗಿ ಅಶೋಕ್ ಪುತ್ತಿಲ, ಪ್ರದೀಪ್ ಶಗ್ರಿತ್ತಾಯ, ಸ್ವಾಗತ ಸಮಿತಿ ಸಂಚಾಲಕರಾಗಿ ಗಣೇಶ್ಚಂದ್ರ ಭಟ್, ಪ್ರಶಾಂತ್ ನೆಕ್ಕಿಲಾಡಿ. ಸಹ ಸಂಚಾಲಕರಾಗಿ ವೆಂಕಟ್ರಮಣ ಕಡಬ, ರೂಪೇಶ್ ನಾೖಕ್, ಜಯಮರಾಮ ಪೂಜಾರಿ ಅವರನ್ನು ಘೋಷಣೆ ಮಾಡಲಾಯಿತು.

























