ಪುತ್ತೂರು : ರಾಜ್ಯಾದ್ಯಂತ ಆಚರಣೆ ಮಾಡಲಾಗುವ ಈದ್‌ಮಿಲಾದ್ ಹಬ್ಬದ ಸಾರ್ವಜನಿಕ ರಜಾ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ.
ಕರಾವಳಿ ಭಾಗದ ಪ್ರಮುಖ ಜಿಲ್ಲೆಗಳಾದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಿಗೆ ನಾಳೆಯೇ (ಆ.25) ಸಾರ್ವಜನಿಕ ರಜೆ ಘೋಷಿಸಿ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ. ಉಳಿದಂತೆ ಇತರೆ ಎಲ್ಲಾ ಜಿಲ್ಲೆಗಳಲ್ಲಿ ಬುಧವಾರ (ಆ.26) ರಜೆ ಮುಂದುವರಿಯಲಿದೆ.
























