ಪುತ್ತೂರು: ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ವಿಶ್ವನಾಥ್ ಶೇರಿಗಾರ್ ಪುತ್ತೂರು (75) ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ನಿಧಾನರಾದರು.
ವಿಶ್ವನಾಥ್ ಶೇರಿಗಾರ್ ಅವರು ಮಂಗಳೂರಿನ ಕುಡುಪುವಿನ ಅನಂತಪದ್ಮನಾಭ ದೇವಾಲಯದಲ್ಲಿ 3 ದಶಕಗಳ ಕಾಲ ಸ್ಯಾಕ್ಸೋಫೋನ್ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ನಾಡಿನ ಹಲವೆಡೆ ಸ್ಯಾಕ್ಸೋಫೋನ್ ಕಛೇರಿ ನಡೆಸಿ ಕೊಟ್ಟಿದ್ದರು.
ಮೃತರು ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
























