ಆರ್ಯಾಪು ಗ್ರಾಮದ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ, ಗಿರಿಜಾ ಕಲ್ಯಾಣೋತ್ಸವ ಮತ್ತು ಸಂತರ ಉಪಸ್ಥಿತಿಯಲ್ಲಿ ನಡೆಯುವ ಕೇಸರಿ ಸಂಗಮ ಮತ್ತು ಸಾಮೂಹಿಕ ವಿವಾಹ ಕಾರ್ಯ್ರಮದ ಪೂರ್ವಭಾವಿಯಾಗಿ ನಡೆದ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ ಡಾ। ಸುರೇಶ್ ಪುತ್ತೂರಾಯ, ಹಿಂದೂ ಸಮಾಜದ ಮುಂದೆ ಇರುವ ಸವಾಲುಗಳು, ನಮ್ಮ ಸಂಸ್ಕೃತಿಯನ್ನು ಉಳಿಸುವ ಬದ್ಧತೆ ಮುಖ್ಯವಾಗಿ ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿಯಾಗಿರುವ ಹಿಂದೂ ಯುವಕರಿಗೆ ಕ್ಷಾತ್ರಾತೇಜಸ್ಸನ್ನು ತುಂಬುವ ದೃಷ್ಟಿಯಿಂದ, ಕಳೆದ ಮೂರು ವರ್ಷಗಳಿಂದಲೂ ಶ್ರೀನಿವಾಸ ಕಲ್ಯಾಣೋತ್ಸವದಂತಹ ದೊಡ್ಡ ಕಾರ್ಯಕ್ರಮವನ್ನು ಮಾಡಿ, ಲಕ್ಷಾಂತರ ಹಿಂದೂ ಬಂಧುಗಳ ಒಗ್ಗೂಡಿಸುವ ಕಾರ್ಯ ನಡೆದಿದೆ. ಈ ಬಾರಿ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಗಿರಿಜಾ ಕಲ್ಯಾಣೋತ್ಸವ ಆಯೋಜನೆ ಆಗಿರುವುದು ಹಿಂದೂಗಳಾದ ನಮ್ಮೆಲ್ಲರ ಸೌಭಾಗ್ಯ. ಶಿವ ಪಾರ್ವತಿಯ ಕಲ್ಯಾಣವನ್ನು ಕಣ್ತುಂಬಿಕೊಳ್ಳಲು ಅವಕಾಶವನ್ನು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ, ಜೊತೆಗೆ ನಡೆಯುವ ಸಾಮೂಹಿಕ ವಿವಾಹದಲ್ಲೂ ಕೂಡ ನಾವೆಲ್ಲರು ಪಾಲ್ಗೊಳ್ಳಬೇಕು. ಈ ಮೂಲಕ ಹಿಂದೂ ಸಮಾಜದ ಶಕ್ತಿ ಪ್ರದರ್ಶನವಾಗಬೇಕು ಎಂದು ನುಡಿದರು.
ಕ್ಷೇತ್ರದ ತಂತ್ರಿಗಳಾದ ಪ್ರೀತಂ ಪುತ್ತೂರಾಯ ಮಾತನಾಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ನಾವೆಲ್ಲ ಪಾಲ್ಗೊಂಡಾಗ ಮಾತ್ರ ನಮಗೆಲ್ಲ ಭಗವಂತನ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯ, ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ವೇದಿಕೆಯಲ್ಲಿ ಸಮಿತಿಯ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಆಮಂತ್ರಣ ಪತ್ರಿಕೆ ಪ್ರಮುಖರಾದ ರವಿಕುಮಾರ್ ರೈ, ಕೋಶಾಧಿಕಾರಿ ಉದಯ ರೈ. ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಘಾಟೆ, ಅನಿಲ್ ತೆಂಕಿಲ, ಕಾರ್ಯಾಧ್ಯಕ್ಷರಾದ ಅನಿಲ್ ಕಣ್ಣಾರ್ನೂಜಿ, ಉಪಸ್ತಿತರಿದ್ದರು. ಸಭೆಯಲ್ಲಿ ನೂರಾರು ಹಿಂದೂ ಬಂಧುಗಳು ಉಪಸ್ತಿತರಿದ್ದರು ,ಉದಯಕುಮಾರ್ ಸ್ವಾಗತಿಸಿ, ಅನಿಲ್ ತೆಂಕಿಲ ವಂದಿಸಿದರು.
























