ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು–ಬನ್ನೂರು ಘಟಕ, ರೋಟರಿ ಕ್ಲಬ್ ಪುತ್ತೂರು (ಈಸ್ಟ್) ಹಾಗೂ ನವೋದಯ ಯುವಕ ಮತ್ತು ಯುವತಿ ಮಂಡಲ ಬನ್ನೂರು ಇವರ ಆಶ್ರಯದಲ್ಲಿ ಇಂದು ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು.
ಬನ್ನೂರಿನ ನವೋದಯ ಯುವಕ ಮಂಡಲದ ಕಟ್ಟಡದಲ್ಲಿ ಬೆಳಗ್ಗೆ 9 ಗಂಟೆಯಿಂದ ಶಿಬಿರ ಆರಂಭವಾಯಿತು.ಶ್ರೀ ಸತ್ಯನಾರಾಯಣ ಸೇವಾ ಸಮಿತಿ, ಈಶ್ವರಾಂಬೆ ಟ್ರಸ್ಟ್, ನಿಟ್ಟೆ ಎನ್.ಜೆ. ಶೆಟ್ಟಿ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಯೆನೆಪೋಯ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಸಹಯೋಗ ನೀಡಿದರು.
ಶಿಬಿರದಲ್ಲಿ ಕಿವಿ, ಮೂಗು, ಗಂಟಲು (ಇಎನ್‌ಟಿ) ತಪಾಸಣೆ, ಕಣ್ಣಿನ ಪರೀಕ್ಷೆ ಹಾಗೂ ಉಚಿತ ಕನ್ನಡಕ ವಿತರಣೆ, ಸಕ್ಕರೆ ಕಾಯಿಲೆ ತಪಾಸಣೆ, ರಕ್ತದಾನ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳು ಲಭ್ಯವಿತ್ತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಗನ್ನಾಥ ರೈ. ಅರುಣ್ ಕುಮಾರ್ ಪುತ್ತಿಲ, ಶ್ರೀರಾಮ್ ಭಟ್ ಪಾತಾಳ, ದೇವಾನಂದ ರೈ, ಅನಿಲ್ ತೆಂಕಿಲ, ರವಿ ಕುಮಾರ್ ರೈ, ರಾಧಾಕೃಷ್ಣ ಶೆಟ್ಟಿ, ಆಶಾ ಶೆಟ್ಟಿ, ಚಂದ್ರಹಾಸ ಶೆಟ್ಟಿ ಆನೆಮಜಲು ಉಪಸ್ಥಿತರಿದ್ದರು.
ಒಟ್ಟು 260ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ದರು ಮತ್ತು 25ಯೂನಿಟ್ ರಕ್ತದಾನ ನೀಡಲಾಯಿತು ಹಾಗೂ 95ಕ್ಕೂ ಹೆಚ್ಚೂ ಶಿಬಿರಾರ್ಥಿಗಳು ಕಣ್ಣಿನ ತಪಾಸಣಾ ಮಾಡಿಕೊಂಡರು ಹಾಗೂ 65ಕ್ಕೂ ಹೆಚ್ಚು ಶಿಬಿರಾರ್ಥಿಗಳು ದಂತ ಚಿಕಿತ್ಸಾ ತಪಾಸಣೆ ಮಾಡಿಕೊಂಡರು.

























