ಇತಿಹಾಸ ಪ್ರಸಿದ್ಧವಾಗಿ ಮಾತು ಬಿಡ ಮಂಜುನಾಥ ಖ್ಯಾತಿಯ ಧರ್ಮಸ್ಥಳ ಕ್ಷೇತ್ರಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ದೇವರ ಆಶೀರ್ವಾದ ಪಡೆದ ನಂತರ ಮಾತಾನಾಡಿದ ಉಪಮುಖ್ಯಮಂತ್ರಿ ರಾಜ್ಯಕ್ಕೆ ಒಳ್ಳೆಯ ಮಳೆಯಾಗಲಿ ರಾಜ್ಯ ಶಾಂತಿ ನೆಮ್ಮದಿಯಿಂದಿರಲಿ ಎಂದು ದೇವರಲ್ಲಿ ಸಿದ್ದರಾಮಯ್ಯರವರು ರಾಜ್ಯದ ಜನತೆ ಪರವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೇ ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯ ಸಭಾ ಸದಸ್ಯರು ಆಗಿರುವ ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತಾಡಿದ್ದು ಕರ್ನಾಟಕದ ಹಲವು ಭಾಗ್ಯಗಳಲ್ಲಿ ಶಕ್ತಿ ಭಾಗ್ಯವು ಒಂದು ಇದರಿಂದ ತುಂಬಾ ಪ್ರಯೋಜನವಾಗಿದೆ.
ಬೆಳಗಾಂ,ಹುಬ್ಬಳ್ಳಿ,ಗುಲ್ಬರ್ಗ
ಭಾಗದಿಂದ ಬಹಳಷ್ಟು ಭಕ್ತರು ಆಗಮಿಸುತ್ತಿದ್ದಾರೆ ಇದರ ಪ್ರಯೋಜನ ಪಡೆದುಕೊಂಡು ಸಾವಿರಾರು ಜನ ಭಕ್ತರು ಆಗಮಿಸಿ ಕ್ಷೇತ್ರಕ್ಕೂ ಒಳ್ಳೆಯಾದಗಿದೆ ಎಂದು ಸಂತಸ ಹಚ್ಚಿಕೊಂಡರು ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಲ್ಲದೆ, ಗೃಹಜ್ಯೋತಿ,ಅನ್ನಭಾಗ್ಯ,ಗೃಹ ಲಕ್ಷ್ಮೀ ಯೋಜನೆಯಿಂದ ರಾಜ್ಯದ ಜನ ಸಂತಸದಲ್ಲಿದ್ದು ಮತ್ತೆ ಯಶಸ್ವಿಯಾಗಿ ಸರಕಾರ ನಡೆಸುವಂತೆ ಮಂಜುನಾಥ ಅನುಗ್ರಹಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಉಪ ಮುಖ್ಯ ತಿಳಿಸಿದರು.
ಅಲ್ಲದೇ ಕರ್ನಾಟಕ ರಾಜ್ಯದಲ್ಲಿ ಒಂದು ವರ್ಷದ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡು ಶಕ್ತಿಯೋಜನೆ ಆರಂಭವಾದಗ ಹೆಗ್ಗಡೆಯವರು ಪತ್ರ ಮುಖೇನ ಸರಕಾರವನ್ನು ಅಭಿನಂದನೆ ಸಲ್ಲಿಸಿದ್ದನ್ನು ನೆನಪಿಸಿಕೊಳ್ಳುಬಹುದಾಗಿದೆ.