• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಅತಂತ್ರ ಸ್ಥಿತಿಯಲ್ಲಿದ್ದ ತೀರಾ ಬಡತನದ ಕುಟುಂಬಕ್ಕೆ ಬೆಳಕಾದ ಉದ್ಯಮಿ ನಟೇಶ್ ಪೂಜಾರಿ 

ಅತಂತ್ರ ಸ್ಥಿತಿಯಲ್ಲಿದ್ದ ತೀರಾ ಬಡತನದ ಕುಟುಂಬಕ್ಕೆ ಬೆಳಕಾದ ಉದ್ಯಮಿ ನಟೇಶ್ ಪೂಜಾರಿ 

May 29, 2024
ಪುತ್ತೂರು ಅರುಣ ಸಾರಥಿ ಆಟೋ ಚಾಲಕ ಮಾಲಕರ ಸಂಘದ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು ಅರುಣ ಸಾರಥಿ ಆಟೋ ಚಾಲಕ ಮಾಲಕರ ಸಂಘದ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

October 13, 2026
ಶ್ರೀ ಭಗವತೀ ಚಾರಿಟೇಬಲ್ ಟ್ರಸ್ಟ್ ಮರ್ದಾಳ ವತಿಯಿಂದ ಅನಾರೋಗ್ಯ ಪೀಡಿತ ಮಹಿಳೆಗೆ ಆರ್ಥಿಕ ನೆರವು !

ಶ್ರೀ ಭಗವತೀ ಚಾರಿಟೇಬಲ್ ಟ್ರಸ್ಟ್ ಮರ್ದಾಳ ವತಿಯಿಂದ ಅನಾರೋಗ್ಯ ಪೀಡಿತ ಮಹಿಳೆಗೆ ಆರ್ಥಿಕ ನೆರವು !

October 13, 2026
ಉಪ್ಪಿನಂಗಡಿ ಶ್ರೀರಾಮ ಶಾಲೆ ಸಂಚಾಲಕ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಯು.ಜಿ. ರಾಧ ಸಮಾಜ ಸೇವೆಗೆ ವಿದಾಯ

ಉಪ್ಪಿನಂಗಡಿ ಶ್ರೀರಾಮ ಶಾಲೆ ಸಂಚಾಲಕ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಯು.ಜಿ. ರಾಧ ಸಮಾಜ ಸೇವೆಗೆ ವಿದಾಯ

October 12, 2026
ಶಿರ್ಲಾಲು ಗ್ರಾಮದ ಮಣಿಲದಲ್ಲಿ ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ

ಶಿರ್ಲಾಲು ಗ್ರಾಮದ ಮಣಿಲದಲ್ಲಿ ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ

October 12, 2026
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವಕ್ಕೆ ಚಾಲನೆ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವಕ್ಕೆ ಚಾಲನೆ

October 12, 2026
ಸೌದಿ ಅರೇಬಿಯಾ ಹೃದಯ ರಿಯಾದ್‌ ಏರ್‌ಪೋರ್ಟ್‌ ಮೇಲೆ ಹೌತಿ ದಾಳಿಗೆ ಉಮ್ರಾ ಯಾತ್ರೆಗೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದ ಓರ್ವ ಭಾರತೀಯ ಸಾವು

ಸೌದಿ ಅರೇಬಿಯಾ ಹೃದಯ ರಿಯಾದ್‌ ಏರ್‌ಪೋರ್ಟ್‌ ಮೇಲೆ ಹೌತಿ ದಾಳಿಗೆ ಉಮ್ರಾ ಯಾತ್ರೆಗೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದ ಓರ್ವ ಭಾರತೀಯ ಸಾವು

October 12, 2026
ಮಠಂತಬೆಟ್ಟು ಮಹಿಷಮರ್ದಿನಿ ದೇವಳದಲ್ಲಿ‌ ನವರಾತ್ರಿ ಉತ್ಸವದ ಪ್ರಥಮ ದಿನ ದೇವಿಗೆ ಹಸಿರುವಾಣಿ ಸಮರ್ಪಣೆ

ಮಠಂತಬೆಟ್ಟು ಮಹಿಷಮರ್ದಿನಿ ದೇವಳದಲ್ಲಿ‌ ನವರಾತ್ರಿ ಉತ್ಸವದ ಪ್ರಥಮ ದಿನ ದೇವಿಗೆ ಹಸಿರುವಾಣಿ ಸಮರ್ಪಣೆ

October 11, 2026
ಪುತ್ತೂರು- ಉಪ್ಪಿನಂಗಡಿ ರಸ್ತೆ ತಕ್ಷಣ ದುರಸ್ಥಿ ಕಾರ್ಯ ನಡೆಸುವಂತೆ ಶಾಸಕ ಅಶೋಕ್ ರೈ ಲೋಕೋಪಯೋಗಿ ಇಲಾಖೆಗೆ ಸೂಚನೆ

ಪುತ್ತೂರು- ಉಪ್ಪಿನಂಗಡಿ ರಸ್ತೆ ತಕ್ಷಣ ದುರಸ್ಥಿ ಕಾರ್ಯ ನಡೆಸುವಂತೆ ಶಾಸಕ ಅಶೋಕ್ ರೈ ಲೋಕೋಪಯೋಗಿ ಇಲಾಖೆಗೆ ಸೂಚನೆ

October 11, 2026
ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ 2 ಅಶಕ್ತರ ಚಿಕಿತ್ಸೆಗೆ 90 ಸಾವಿರ ರೂಪಾಯಿ ನೆರವು

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ 2 ಅಶಕ್ತರ ಚಿಕಿತ್ಸೆಗೆ 90 ಸಾವಿರ ರೂಪಾಯಿ ನೆರವು

October 10, 2026
ಬಂಟ್ವಾಳ ಮಾದಕ ದ್ರವ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ

ಬಂಟ್ವಾಳ ಮಾದಕ ದ್ರವ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ

October 10, 2026
ಸಿಜೆಪಿ ಪ್ರತಿಭಟನೆ ಮುಂಜಾಗ್ರತೆಯಾಗಿ ದೆಹಲಿಯಲ್ಲಿ ಬಿಗಿ ಭದ್ರತೆ

ಸಿಜೆಪಿ ಪ್ರತಿಭಟನೆ ಮುಂಜಾಗ್ರತೆಯಾಗಿ ದೆಹಲಿಯಲ್ಲಿ ಬಿಗಿ ಭದ್ರತೆ

October 10, 2026
ಸಿಜೆಪಿ ಪ್ರತಿಭಟನೆ ನಿಷೇಧಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಸೂಚನೆ

ಸಿಜೆಪಿ ಪ್ರತಿಭಟನೆ ನಿಷೇಧಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಸೂಚನೆ

October 10, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, October 13, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರು ಅರುಣ ಸಾರಥಿ ಆಟೋ ಚಾಲಕ ಮಾಲಕರ ಸಂಘದ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

    ಪುತ್ತೂರು ಅರುಣ ಸಾರಥಿ ಆಟೋ ಚಾಲಕ ಮಾಲಕರ ಸಂಘದ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

    ಶ್ರೀ ಭಗವತೀ ಚಾರಿಟೇಬಲ್ ಟ್ರಸ್ಟ್ ಮರ್ದಾಳ ವತಿಯಿಂದ ಅನಾರೋಗ್ಯ ಪೀಡಿತ ಮಹಿಳೆಗೆ ಆರ್ಥಿಕ ನೆರವು !

    ಶ್ರೀ ಭಗವತೀ ಚಾರಿಟೇಬಲ್ ಟ್ರಸ್ಟ್ ಮರ್ದಾಳ ವತಿಯಿಂದ ಅನಾರೋಗ್ಯ ಪೀಡಿತ ಮಹಿಳೆಗೆ ಆರ್ಥಿಕ ನೆರವು !

    ಉಪ್ಪಿನಂಗಡಿ ಶ್ರೀರಾಮ ಶಾಲೆ ಸಂಚಾಲಕ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಯು.ಜಿ. ರಾಧ ಸಮಾಜ ಸೇವೆಗೆ ವಿದಾಯ

    ಉಪ್ಪಿನಂಗಡಿ ಶ್ರೀರಾಮ ಶಾಲೆ ಸಂಚಾಲಕ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಯು.ಜಿ. ರಾಧ ಸಮಾಜ ಸೇವೆಗೆ ವಿದಾಯ

    ಶಿರ್ಲಾಲು ಗ್ರಾಮದ ಮಣಿಲದಲ್ಲಿ ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ

    ಶಿರ್ಲಾಲು ಗ್ರಾಮದ ಮಣಿಲದಲ್ಲಿ ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ

    ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವಕ್ಕೆ ಚಾಲನೆ

    ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವಕ್ಕೆ ಚಾಲನೆ

    ಮಠಂತಬೆಟ್ಟು ಮಹಿಷಮರ್ದಿನಿ ದೇವಳದಲ್ಲಿ‌ ನವರಾತ್ರಿ ಉತ್ಸವದ ಪ್ರಥಮ ದಿನ ದೇವಿಗೆ ಹಸಿರುವಾಣಿ ಸಮರ್ಪಣೆ

    ಮಠಂತಬೆಟ್ಟು ಮಹಿಷಮರ್ದಿನಿ ದೇವಳದಲ್ಲಿ‌ ನವರಾತ್ರಿ ಉತ್ಸವದ ಪ್ರಥಮ ದಿನ ದೇವಿಗೆ ಹಸಿರುವಾಣಿ ಸಮರ್ಪಣೆ

    ಪುತ್ತೂರು- ಉಪ್ಪಿನಂಗಡಿ ರಸ್ತೆ ತಕ್ಷಣ ದುರಸ್ಥಿ ಕಾರ್ಯ ನಡೆಸುವಂತೆ ಶಾಸಕ ಅಶೋಕ್ ರೈ ಲೋಕೋಪಯೋಗಿ ಇಲಾಖೆಗೆ ಸೂಚನೆ

    ಪುತ್ತೂರು- ಉಪ್ಪಿನಂಗಡಿ ರಸ್ತೆ ತಕ್ಷಣ ದುರಸ್ಥಿ ಕಾರ್ಯ ನಡೆಸುವಂತೆ ಶಾಸಕ ಅಶೋಕ್ ರೈ ಲೋಕೋಪಯೋಗಿ ಇಲಾಖೆಗೆ ಸೂಚನೆ

    ಬಂಟ್ವಾಳ ಮಾದಕ ದ್ರವ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ

    ಬಂಟ್ವಾಳ ಮಾದಕ ದ್ರವ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ

    ಗೃಹಲಕ್ಷ್ಮೀ ಯೋಜನೆ: ಪುತ್ತೂರು ತಾಲೂಕಿನ ಮೃತಪಟ್ಟ ಮಹಿಳೆಯರ ಖಾತೆಗೆ 29 ಲಕ್ಷ ರೂ. ಪಾವತಿ!! – ಅತೀ ಶೀಘ್ರದಲ್ಲಿ 100 ಕೋಟಿ ಅನುದಾನ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ

    ಗೃಹಲಕ್ಷ್ಮೀ ಯೋಜನೆ: ಪುತ್ತೂರು ತಾಲೂಕಿನ ಮೃತಪಟ್ಟ ಮಹಿಳೆಯರ ಖಾತೆಗೆ 29 ಲಕ್ಷ ರೂ. ಪಾವತಿ!! – ಅತೀ ಶೀಘ್ರದಲ್ಲಿ 100 ಕೋಟಿ ಅನುದಾನ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಉಪ್ಪಿನಂಗಡಿ

ಅತಂತ್ರ ಸ್ಥಿತಿಯಲ್ಲಿದ್ದ ತೀರಾ ಬಡತನದ ಕುಟುಂಬಕ್ಕೆ ಬೆಳಕಾದ ಉದ್ಯಮಿ ನಟೇಶ್ ಪೂಜಾರಿ 

by ಪ್ರಜಾಧ್ವನಿ ನ್ಯೂಸ್
May 29, 2024
in ಉಪ್ಪಿನಂಗಡಿ, ಪುತ್ತೂರು, ಪ್ರಾದೇಶಿಕ
0
ಅತಂತ್ರ ಸ್ಥಿತಿಯಲ್ಲಿದ್ದ ತೀರಾ ಬಡತನದ ಕುಟುಂಬಕ್ಕೆ ಬೆಳಕಾದ ಉದ್ಯಮಿ ನಟೇಶ್ ಪೂಜಾರಿ 
197
SHARES
563
VIEWS
ShareShareShare

ಉಪ್ಪಿನಂಗಡಿ: ತಾನು ಗಳಿಸಿದ ಸಂಪತ್ತಿನ ಒಂದಂಶವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಿರುವ ಉದ್ಯಮಿ ನಟೇಶ್ ಪೂಜಾರಿಯವರು 34 ನೆಕ್ಕಿಲಾಡಿಯ ಬೀತಲಪ್ಪುವಿನ ಉಷಾ ಅವರ ಮನೆಗೆ ಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ ಮೇಲ್ಚಾವಣಿ ನಿರ್ಮಿಸಿಕೊಟ್ಟಿದ್ದು, ಇಂದೋ ನಾಳೆಯೋ ಮೇಲ್ಚಾವಣಿ ಕುಸಿದು ಬೀಳಬಹುದೆಂಬ ಭಯದ ಬದುಕಿನಿಂದ ದಿನಕಳೆಯುತ್ತಿದ್ದ ಉಷಾ ಅವರ ಕುಟುಂಬದಲ್ಲಿ ಹೊಸ ಬೆಳಕನ್ನು ಮೂಡಿಸಿದ್ದಾರೆ.

ಬೀತಲಪ್ಪು ಪರಿಶಿಷ್ಟ ಜಾತಿ ಕಾಲನಿಯಲ್ಲಿ ಎರಡು ಪುಟ್ಟ ಮಕ್ಕಳು ಹಾಗೂ ಪತಿಯೊಂದಿಗೆ ವಾಸಿಸುತ್ತಿದ್ದ ಉಷಾ ಅವರದ್ದು ತೀರಾ ಬಡತನದ ಬದುಕು. ಪತಿಯ ಬೇಜಾವಬ್ದಾರಿಯಿಂದಾಗಿ ಉಷಾ ಅವರೇ ಮನೆಯ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಿತ್ತು. ಕೂಲಿ ಮಾಡಿಕೊಂಡು ತನ್ನ ಕುಟುಂಬವನ್ನು ನೋಡುತ್ತಿದ್ದರು. ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಿದ ಇವರ ಮನೆಯ ಬಿದಿರಿನ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿತ್ತು. ಮೇಲ್ಛಾವಣಿಗೆ ಅಳವಡಿಸಿದ್ದ ಬಿದಿರು ತುಂಡಾಗಿ ಬಿದ್ದಿತ್ತು. ಇದರೊಂದಿಗೆ ಹಂಚುಗಳು ಬಿದ್ದಿದ್ದವು. ಇದ್ದ ಮೇಲ್ಛಾವಣಿಯಂತೂ ಸಂಪೂರ್ಣ ಶಿಥಿಲಗೊಂಡು ಇಡೀ ಮೇಲ್ಛಾವಣಿಯೇ ಇಂದೋ ನಾಳೆಯೇ ಬೀಳುವ ಸ್ಥಿತಿಯಿತ್ತು. ಇದರಿಂದ ಮಳೆಗಾಲದಲ್ಲಿ ಮನೆಯ ಗೋಡೆಗಳು ಬೀಳುವ ಆತಂಕವಿತ್ತು. ಎರಡು ಪುಟ್ಟ ಮಕ್ಕಳನ್ನು ಹಿಡಿದುಕೊಂಡು ಈ ಮನೆಯಲ್ಲಿ ಭಯದಿಂದಲೇ ವಾಸ್ತವ್ಯ ಮಾಡುವಂತ ಸ್ಥಿತಿ ಇವರದ್ದಾಗಿತ್ತು. ಕುಟುಂಬ ಸಲಹುವುದೇ ಕಷ್ಟವಿರುವಾಗ ಅವರಿಂದ ಇದಕ್ಕೆ ಮೇಲ್ಚಾವಣಿ ನಿರ್ಮಿಸುವುದು ಕನಸಿನ ಮಾತೇ ಸರಿ. ಇವರ ಸಂಕಷ್ಟವನ್ನು ಇನ್ನೊಬ್ಬರಿಂದ ಕೇಳಿ ತಿಳಿದ ಉದ್ಯಮಿ ನಟೇಶ್ ಪೂಜಾರಿಯವರು ಇವರಿಗೆ ನೆರವಿನ ಹಸ್ತ ಚಾಚಿದ್ದು, ತಾನೊಬ್ಬರೇ ಸುಮಾರು ಒಂದು ಲಕ್ಷದಷ್ಟು ರೂ. ಖರ್ಚು ಭರಿಸಿ ಇವರ ಮನೆಗೆ ಕಬ್ಬಿಣದ ಮೇಲ್ಛಾವಣಿಯನ್ನು ಮಾಡಿಕೊಟ್ಟಿದ್ದಲ್ಲದೆ, ಅದಕ್ಕೆ ಹಂಚು ಹೊದಿಸಿ ಕೊಡುವ ಕಾರ್ಯವನ್ನು ನಡೆಸಿದ್ದಾರೆ. ಅಲ್ಲದೇ, ಸರ್ವೀಸ್ ವಯರ್ ತುಂಡಾಗಿದ್ದರಿಂದ ಉಷಾರ ಮನೆಗೆ ಸುಮಾರು ಒಂದು ವರ್ಷದಿಂದ ವಿದ್ಯುತ್ ಸಂಪರ್ಕ ಇರಲಿಲ್ಲ. ಅದನ್ನು ಸರಿ ಮಾಡಿಸಿ ಕೊಡುವ ಭರವಸೆ ನೀಡಿದ್ದಾರೆ.

ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿಯ ಹೊನ್ನಪ್ಪ ಪೂಜಾರಿ ಮತ್ತು ಲೀಲಾವತಿ ದಂಪತಿಯ ಪುತ್ರನಾದ ನಟೇಶ್ ಪೂಜಾರಿಯವರು ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ್ದರೂ, ಬಡತನವನ್ನು ಅನುಭವಿಸಿಯೇ ಬೆಳೆದವರು. 22 ವರ್ಷಗಳ ಹಿಂದೆ ತನ್ನ ಶಿಕ್ಷಣವನ್ನು ಮೊಟಕುಗೊಳಿಸಿ, ಬೆಂಗಳೂರಿನಲ್ಲಿ ಎಲೆಕ್ಟ್ರಿಷಿಯನ್‌ಗಳೊಂದಿಗೆ ಹೆಲ್ಪರ್ ಆಗಿ ಕೆಲಸಕ್ಕೆ ಸೇರಿದರು. ಬಳಿಕ ಎಲೆಕ್ಟ್ರೀಷಿಯನ್ ಕ್ಷೇತ್ರದಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಿದ ಇವರು ಕರ್ನಾಟಕ ಸರಕಾರದಿಂದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರನಾಗಿ ಬೆಂಗಳೂರಿನಲ್ಲಿ ತನ್ನದೇ ಆದ ಅನನ್ಯ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಯನ್ನು ಕಟ್ಟಿ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತವರು. ಆದ್ದರಿಂದ ಬಡವರಿಗೆ, ಅಸಹಾಯಕರಿಗೆ ಸದಾ ಸ್ಪಂದಿಸುವ ಹೃದಯ ಇವರದ್ದಾಗಿದೆ.

Rosemac bowlar

ಜಾಹೀರಾತು

ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ, ಶಾಲೆಗೆ ಶುದ್ಧ ನೀರಿನ ಘಟಕದ ಕೊಡುಗೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಕೊರೋನಾದ ಸಂದರ್ಭ ಕಿಟ್ ವಿತರಣೆ, ಮಡಿಕೇರಿಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ಅಲ್ಲಿಗೆ ತೆರಳಿ ಸಂಕಷ್ಟದಲ್ಲಿದ್ದವರಿಗೆ ಆಹಾರದ ಕಿಟ್ ವಿತರಣೆ, ಧಾರ್ಮಿಕ ಕೇಂದ್ರಗಳಿಗೆ ಆರ್ಥಿಕ ನೆರವು, ಕ್ರೀಡಾ ಕೂಟಗಳಿಗೆ ಧನ ಸಹಾಯ ಹೀಗೆ ಒಂದಲ್ಲ, ಎರಡಲ್ಲ, ನಿರಂತರವಾಗಿ ಸಾಮಾಜಿಕ, ಧಾರ್ಮಿಕವಾಗಿ ನಿರಂತರ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರೂ, ಎಲೆ ಮರೆಯ ಕಾಯಿಯಂತೆ ಉಳಿದುಬಿಟ್ಟವರು. ಪತ್ನಿ ಪ್ರಮೀಳಾ ಎ. ಹಾಗೂ ಮಕ್ಕಳಾದ ಶಾಗ್ವಿ ಎನ್.ಪಿ. ಮತ್ತು ವಿವಿನ್ ಎನ್.ಪಿ. ಅವರೊಂದಿಗೆ ಸುಖ ಜೀವನ ನಡೆಸುತ್ತಿರುವ ನಟೇಶ್ ಪೂಜಾರಿಯವರು ಉಷಾ ಅವರ ಕುಟುಂಬಕ್ಕೆ ಮೇಲ್ಛಾವಣಿ ಕಟ್ಟಿಕೊಡುವ ಮೂಲಕ ಮಾಡಿದ ಸೇವಾ ಕಾರ್ಯವು ಮನೆ ಬಿದ್ದು ಹೋದರೆ ಮುಂದೇನು ಎಂದು ಕಂಗಾಲಾಗಿದ್ದ ಆ ಕುಟುಂಬಕ್ಕೆ ಹೊಸ ಬದುಕನ್ನೇ ನೀಡಿದಂತಾಗಿದೆ.

ಜಾಹೀರಾತು

LOTUS TRAVEL

ಜಾಹೀರಾತು

SendShare79Share
Previous Post

ಕಾಪು:ಕಾರಣಿಕ ಮೆರೆದು ಸತ್ಯವಾದ ವರುಷದ ಹಿಂದೆ ನುಡಿದ ದೈವದ ಅಭಯದ ನುಡಿ. ಕೊಲೆ ಆರೋಪಿ ನ್ಯಾಯಾಲಯಕ್ಕೆ ‌ಶರಣು

Next Post

ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ

ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..