ಉಡುಪಿ ಕಾಪು ಸಮೀಪ ಪೆಬ್ರವರಿ 5 ರಂದು ಪಾಂಗಾಳ ಎಂಬಲ್ಲಿ ಇರಿತಕ್ಕೊಳಗಾಗಿ ಶರತ್ ಶೆಟ್ಟಿ ಹತ್ಯೆಗೀಡಾಗಿದ್ದರು.ಪ್ರಕರಣದ ಆರೋಪಿ ಯೋಗಿಶ್ ತಲೆಮರೆಸಿಕೊಂಡಿದ್ದನು. ಪೋಲಿಸ್ ಎಷ್ಟೇ ಹುಡುಕಾಟ ನಡೆಸಿದರು ಪತ್ತೆಯಾಗದೇ ಪ್ರಕರಣದ ಆರೋಪಿಯನ್ನು ಹುಡುಕಾಡುವುದು ಸವಾಲ್ ಪರಿಣಮಿಸಿತು.ಆದರೆ ಇಲ್ಲಿ ದೈವದ ನುಡಿ ಸತ್ಯವಾಗಿದೆ
ಏನಿದೂ ಅಭಯದ ದೈವ ನುಡಿ:-
ಶರತ್ ಶೆಟ್ಟಿ ಹತ್ಯೆಯಾದಂತೆ ಆರೋಪಿ ಯೋಗಿಸ್ ಗೆ ಪೋಲಿಸರು ಹುಡುಕಾಟ ನಡೆೆೆಸುತ್ತಿದ್ದ ಬೆನ್ನಲ್ಲೇ, ಶರತ್ ಮನೆಯವರು ಕುಟುಂಬದ ದೈವದ ಮುಂದೆ ಪ್ರಾರ್ಥನೆ ಸಲ್ಲಿಸಿದರು.
ಅದರಂತೆ ದೈವವು “ಆರೋಪಿ ಎಲ್ಲೇ ಇರಲಿ ಅವನನ್ನು ತಾನಾಗಿಯೇ ಪೋಲಿಸರ ಮುಂದೆ ತಂದು ನಿಲ್ಲಿಸುತ್ತೇನೆ.ಭಯ ಪಡಬೇಡಿ” ಎಂದು ಧೈರ್ಯದ ಅಭಯದ ನುಡಿ ನೀಡಿತ್ತು.
ಆದರಂತೆ ಯೋಗೀಶ್ ಮೇ 23 ರಂದು ತಾನಾಗಿಯೇ ನ್ಯಾಯಾಲಯಕ್ಕೆ ಹಾಜರಾಗಿರುವುದು ವಿಶೇಷವಾಗಿದೆ ಮತ್ತು ದೈವದ ಕಾರಣಿಕದ ಪವಾಡಕ್ಕೆ ನಿದರ್ಶನವಾಗಿದೆ.ತುಳುನಾಡಿನಲ್ಲಿ ಜನರಿಗೆ ಸಮಸ್ಯೆ ಅಥವಾ ತೊಂದರೆಯಾದಗ ತಾವು ನಂಬಿರುವ ದೈವಗಳಲ್ಲಿ ಪ್ರಾರ್ಥಿಸುವುದು ನಂಬಿಕೆಯಾಗಿದ್ದು ಇಲ್ಲಿ ದೈವಗಳ ಕಾರಣಿಕ ಅತೀ ಹೆಚ್ಚಾಗಿರುತ್ತದೆ.
ಕೊಲೆ ನಡೆದು 15 ತಿಂಗಳು ಕಳೆದಿದ್ದು ತಲೆಮರೆಸಿಕೊಂಡಿದ್ದ ಆರೋಪಿ ಯೋಗೀಶ್ ಪತ್ತೆ ಮಾಡಲು ಪೋಲಿಸರಿಗೆ ಸಾಧ್ಯವಾಗದಿರುವಾಗ, ತಡವಾಗಿಯಾದರು ದೈವದ ಮಾತು ನಿಜವಾಗಿದೆ.ಇಂತಹ ಹಲವಾರು ಘಟನೆಗಳು ತುಳುನಾಡು ಅಂದರೆ ಕರಾವಳಿ ಭಾಗದಲ್ಲಿ ನಡೆಯುತ್ತಿದ್ದು ದೈವಗಳ ಉಲ್ಲೇಖದ ಬಗ್ಗೆ ಪ್ರಶ್ನೆ ಮಾಡುವವರಿಗೆ ಉತ್ತರವಾಗಿದೆ ಮತ್ತು ಭಕ್ತಿಯಿಂದ ದೈವರಾಧನೆ ಮಾಡುವವರಿಗೆ ಇಂದೊಂದು ಕಾರಣಿಕ ಮೆರೆದ ಘಟನೆಯಾಗಿದೆ.ದೈವದ ನುಡಿ ಸುಳ್ಳಗಲಿಲ್ಲ ಎಂಬುದಾಗಿ ಮಾತಾನಾಡುತ್ತಿರುವುದು ಕೇಳಿ ಬರುತ್ತಿದೆ.
ಯೋಗೀಶ್ ಪೋಲಿಸ್ ಕಸ್ಟಡಿಗೆ:ಒಂದು ವರ್ಷ ಮೂರು ತಿಂಗಳಿನಿಂದ ತಪ್ಪಿಸಿಕೊಂಡಿದ್ದ ಯೋಗೀಶ್ ಮೇ 23 ರಂದು ವಕೀಲರ ಮೂಲಕ ಶರಣಾಗಿದ್ದ ಅದರಂತೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಪ್ರಕರಣ ಹೆಚ್ಚಿನ ತನಿಖೆಗಾಗಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.