ಪುತ್ತೂರು: ಯುವ ಬಂಟರ ಸಂಘ ಪುತ್ತೂರು ತಾಲೂಕು ಇದರ ವತಿಯಿಂದ ಒಂದು ದಿನದ ಯುವ ವಿಕಾಸ ಕಾರ್ಯಗಾರ. ಪುತ್ತೂರು ಬಂಟರ ಭವನದಲ್ಲಿ 02 ಜೂನ್ 2024ರ ಆದಿತ್ಯವಾರದಂದು ಯುವ ವಿಕಾಸ ಎಂಬ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದೆ. ಕಾರ್ಯಗಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ನಡೆಯಲಿದೆ.
ತರಬೇತುದಾರರಾಗಿ ಶ್ರೀ ಅನಿಲ್ ಶೆಟ್ಟಿ ಬೆಂಗಳೂರು, ಡಾ.ಅನಿಲ ದೀಪಕ್ ಶೆಟ್ಟಿ ಹಾಗೂ ಜೆಸಿಐ ರಾಷ್ಟ್ರೀಯ ತರಬೇತುದಾರೆ ಅಕ್ಷತಾ ಶೆಟ್ಟಿ ಭಾಗವಹಿಸಲಿದ್ದಾರೆ. ಪುತ್ತೂರು ತಾಲೂಕಿನ ಯುವ ಬಂಟರ ಮಾತ್ರ ಅವಕಾಶವಿದೆ ಎಂದು ಯುವ ಬಂಟರ ಸಂಘ ಪುತ್ತೂರು ಇದರ ಪ್ರಮುಖರು ತಿಳಿಸಿದ್ದಾರೆ.