ಬೆಂಗಳೂರು: ದೈವರಾಧನೆ ಸೇವೆ ಮಾಡುವವರಿಗೆ ಮಾಶಾಸನ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.
ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ವಿಶೇಷವಾಗಿ ನಡೆಯುವ ಆರಾಧನೆ ದೈವರಾಧನೆ. ಬೇರ ಬೇರೆ ಸಮುದಾಯ ಮತ್ತು ಪಂಗಡಗಳು ಈ ದೈವರಾಧನೆಯ ಸೇವೆಯನ್ನು ಮಾಡಿಕೊಂಡು ಅನಾದಿ ಕಾಲದಿಂದಲೂ ನಡೆಸುತ್ತ ಬರುತ್ತಿದ್ದಾರೆ. ಅದರಂತೆ ಕರಾವಳಿ ಭಾಗದಲ್ಲಿ ಅದೆಷ್ಟೋ ದೈವಸ್ಥಾನಗಳು ಮುಜರಾಯಿ ಇಲಾಖೆಯ ಸುಪರ್ದಿಗೆ ಒಳಪಟ್ಟು ಅತೀ ಹೆಚ್ಚು ಕಾಣಿಕೆಗಳು ಸರಕಾರಕ್ಕೆ ಮುಜರಾಯಿ ಇಲಾಖೆಯ ಮೂಲಕ ಸಲ್ಲುತ್ತಿದೆ.
ಆದರೆ ಈ ದೈವರಾಧನೆಯ ಚಾಕಿರಿ (ಸೇವೆಯಲ್ಲಿ) ತೊಡಗಿಸಿಕೊಳ್ಳುವವರಿಗೆ ಯಾವುದೇ ವಿಮೆಯಾಗಲಿ, ಮಾಶಾಸನವಾಗಲಿ ಸರಕಾರದಿಂದ ದೊರೆಯುತ್ತಿಲ್ಲ ಎನ್ನುವುದು ನೋವಿನ ಸಂಗತಿ.
ಅದರಂತೆ ದೈವದ ಸೇವೆ ಮಾಡುವವರಿಗೆ ಸರಕಾರದ ವತಿಯಿಂದ ಮಾಶಾಸನ ನೀಡುವ ಯೋಜನೆಯನ್ನು ಅನುಷ್ಠಾನ ತರುವ ಬಗ್ಗೆ ಮುಜರಾಯಿ ಇಲಾಖೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿಯವರ ಜೊತೆಯಲ್ಲಿ ಬೆಂಗಳೂರು ವಿಧಾನ ಸಭಾ ಕಚೇರಿಯಲ್ಲಿ ನಡೆದ ಸಮಾಲೋಚನೆ ಸಭೆ ನಡೆಸಲಾಯಿತು.
ಸ್ಪೀಕರ್ ಯು ಟಿ ಖಾದರ್,ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.