ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು, ಸೆಲೆಬ್ರಿಟಿಗಳು ದೇವರಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಕಿಚ್ಚ ಸುದೀಪ್
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಕಿಚ್ಚ ಸುದೀಪ್, ಬಾಳಿ ಬದುಕ ಬೇಕಿದ್ದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ.
ಸತ್ಯ ಹೊರತರಲು ಮಾಧ್ಯಮಗಳು, ಪೊಲೀಸರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯಸಿಗಬೇಕು. ಅವರ ಪತ್ನಿ, ಹುಟ್ಟಬೇಕಿರುವ ಮಗುವಿಗೆ ನ್ಯಾಯ ಸಿಗಬೇಕು. ಜನರಿಗೆ ಕಾನೂನಿನ ಮೇಲೆ ನಂಬಿಕೆ ಬರುವಂತಹ ಕೆಲಸವಾಗಬೇಕು ಎಂದು ಹೇಳಿದ್ದಾರೆ.
ಸೆಲೆಬ್ರಿಟಿಗಳು ಎಂದ ಮಾತ್ರಕ್ಕೆ ಅವರು ದೇವರಲ್ಲ. ಸೆಲೆಬ್ರಿಟಿಗಳು ತಪ್ಪೇ ಮಾಡೋದಿಲ್ಲ ಎಂಬ ನಂಬಿಕೆ ಬೇಡ. ಅಂಧಭಿಮಾನ ಯಾರಿಗೂ ಬೇಡ. ಸರಿಯಾದ ರೀತಿಯಲ್ಲಿ ತನಿಖೆ ಸಾಗಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲಿ. ಹೊರಗೆ ಜಡ್ಜ್ ಮಾಡಲು ನಾವು ಯಾರು..? ಬ್ಯಾನ್ ಮಾಡುವುದಕ್ಕಿಂತ ಮೊದಲು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಕೆಲಸವಾಗಬೇಕು. ಬ್ಯಾನ್ ಮಾಡಿದ ತಕ್ಷಣ ನ್ಯಾಯ ಸಿಗುವುದಲ್ಲ ಇದರ ಬಗ್ಗೆ ಫಿಲ್ಮ್ ಚೇಂಬರ್ ಕ್ರಮವಹಿಸಲಿ ಯಾರಿಂದಲೋ ಚಿತ್ರರಂಗಕ್ಕೆ ಕಪ್ಪುಚುಕ್ಕೆ ಬರುವುದನ್ನು ನಾನು ಇಷ್ಟಪಡುವುದಿಲ್ಲ. ಹಲವು ಹಿರಿಯರು ಶ್ರಮಿಸಿ ಚಿತ್ರರಂಗವನ್ನು ಕಟ್ಟಿದ್ದಾರೆ. ಸ್ನೇಹಿತ ಇರಲಿ, ಯಾರೇ ಆಗಿರಲಿ ಚಿತ್ರರಂಗಕ್ಕೆ ಕಪ್ಪುಚುಕ್ಕೆ ಬರಬಾರದು ಎಂದು ಹೇಳಿದರು.