ಪುತ್ತೂರು: ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದ ಏಳು ಕುಟುಂಬಗಳಿ ಮರಳಿ ಮಾತೃ ಧರ್ಮಕ್ಕೆ
ಮತಾಂತರ ಎನ್ನುವ ಧರ್ಮದ್ರೋಹಿ ಕಾರ್ಯಗಳು ಬೇರೆ ರಾಜ್ಯದಲ್ಲಿ ನಾವುಗಳು ಕಂಡಿದ್ದೇವೆ. ಬಡತನ, ಬೆದರಿಕೆ ಜೊತೆಗೆ ಆಸೆ ಆಮಿಷಗಳನ್ನೊಡ್ಡಿ ಮತಾಂತರ ನಡೆಸುವುದಾಗಿದೆ. ಅದರಂತೆ ಒಂದು ಘಟನೆ ನಮ್ಮದೇ ದಕ್ಷಿಣ ಕನ್ನಡ ಜಿಲ್ಲೆಯ ಪಂಜದಲ್ಲಿ ನಡೆದಿದೆ.
ಏನಿದೂ ಪ್ರಕರಣ:
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬಹುದೊಡ್ಡ ಆಸೆ ಆಮಿಷಗಳನ್ನು ನೀಡಿ ಜೊತೆ ಹಿಂದು ಧರ್ಮದಿಂದ ಕ್ರೈಸ್ತ ಸಮುದಾಯಕ್ಕೆ ಮತಾಂತರಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ಬಡ ವರ್ಗದ ಸಮಾಜವನ್ನೇ ಗುರಿಯಾಗಿರಿಸಿ ಅವರನ್ನೇ ಮತಾಂತರಗೊಳಿಸುವುದು ಇವರ ಕೆಲಸವಾಗಿದೆ. ಎಲ್ಲಿಯ ತನಕವೆಂದರೇ ಹೆಸರನ್ನು ಕೂಡ ಬದಲಾಯಿಸಿ ನಂತರ ಸಂಪೂರ್ಣವಾಗಿ ಅದೇ ಧರ್ಮದ ಪೂಜೆ ಪುರಸ್ಕಾರವನ್ನು ನಡೆಸುವಂತೆ ತಿಳಿಸಿದ್ದು ಪ್ರಸ್ತುತ ಈ ವಿಚಾರ ತಿಳಿದ ವಿಶ್ವ ಹಿಂದು ಪರಿಷತ್ ಧರ್ಮ ಪ್ರಸರ ವಿಭಾಗದ ವತಿಯಿಂದ ಮತ್ತೆ ಮಾತೃ ಧರ್ಮಕ್ಕೆ ಕರೆ ತರಲಾಯಿತು.
ಅವರದ್ದೇ ಸಮಾಜದ ಜಾತಿ ಪ್ರಮಾಣ ಪತ್ರ ನೀಡಿ ಮತ್ತು ನಿತ್ಯ ಉಪಯೋಗಿಸುವ ಬಟ್ಟೆ ಬರೆಗಳು ಮೂಲ ಧರ್ಮದ ಪೂಜೆ ಬಳಸುವ ದೇವರ ಪೋಟೋ ಗಳನ್ನು ನೀಡಿ ಧರ್ಮ ರಕ್ಷಾ ಯಜ್ಞ ನಡೆಸಿ ಸ್ವಾಗತಿಸಲಾಯಿತು. ಒಂದಷ್ಟು ಕಾನೂನಿನ ಮೂಲಕ ಕೆಲವೊಂದು ಕೆಲಸಗಳು ನಡೆಯಲಿದ್ದು ತಕ್ಷಣ ಅದನ್ನು ಸಂಘಟನೆಯ ಮೂಲಕ ನಡೆಸಿಕೊಡಲಿದ್ದೇವೆ ಎಂದು ಪ್ರಮುಖರು ತಿಳಿಸಿದರು.
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತಾಂತರವಾದ ಕುಟುಂಬಗಳಿವೆ ಅವರನ್ನು ಮತ್ತೆ ಮಾತೃ ಧರ್ಮಕ್ಕೆ ಸೇರಿಸುವ ಕಾರ್ಯ ಮುಂದೆ ನಡೆಯುತ್ತದೆ ಅಲ್ಲದೇ ಆಮಿಷ ಬೆದರಿಕೆಗೆ ಯಾರು ಮತಾಂತರವಾಗಬೇಡಿ ಮತಾಂತರದ ವಿರುದ್ದ ವಿಶ್ವ ಹಿಂದು ಪರಿಷತ್ ಧರ್ಮ ಪ್ರಸರ ವಿಭಾಗ ಕಾರ್ಯಚರಣೆ ನಡೆಸುತ್ತದೆ ಎಂದು ಪುನೀತ್ ಅತ್ತಾವರ ತಿಳಿಸಿದ್ದಾರೆ. ಸಂಘಟನೆಯ ಪ್ರಮುಖರಾದ ಸೂರ್ಯನಾರಾಯಣ್ ,ಸುನೀಲ್ ಕೆ ಆರ್,ಪುನೀತ್ ಭಜರಂಗದಳ, ನವೀನ್ ನೆರಿಯ, ಮೂಲಚಂದ್ರ,ಪ್ರಮುಖರು ಉಪಸ್ಥಿತರಿದ್ದರು