• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್-1 ಛಾವಣಿ ಕುಸಿತ, ಓರ್ವ ಸಾವು, 7 ಮಂದಿಗೆ ಗಾಯ, ವಿಮಾನ ಹಾರಾಟ ರದ್ದು

June 28, 2024
ಪುಣಚ ಗ್ರಾಮದ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕು ಪತ್ರ ವಿವಾದ – ಶಾಸಕ ರಾಜೇಶ್ ನಾಯ್ಕ ಭೇಟಿಯಾಗಿ ಮಾತುಕತೆ

May 21, 2026
ಪುತ್ತೂರು: ಬೆಳ್ಳಿಪ್ಪಾಡಿಯ ಕಟಾರ ಬಳಿ ಕುಮಾರಧಾರ ನದಿಯಲ್ಲಿ ಈಜಲು ತೆರಳಿದ್ದ ನಗರದ VC ಕಾಲೇಜು ವಿದ್ಯಾರ್ಥಿ ನೀರು ಪಾಲು

ಪುಣಚ ಗ್ರಾಮದ ಎಸ್‌ಟಿ ಕುಟುಂಬಗಳ ಹಕ್ಕುಪತ್ರಕ್ಕಾಗಿ 3ನೇ ದಿನವೂ ಮುಂದುವರಿದ ಧರಣಿ: ಪ್ರತಿಭಟನಾ ನಿರತರಿಗೆ ಬಿಜೆಪಿ ಬೆಂಬಲ

ಪುತ್ತೂರು: ನೆಲ್ಲಿಕಟ್ಟೆ ನಿವಾಸಿ ಶ್ರೀಕಾಂತ್ ಹೆಗ್ಡೆ ನಿಧನ

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶಗಳ ಅಕ್ರಮ ಸಾಗಾಣಿಕೆ ಮತ್ತು ಗೋ ಹತ್ಯೆ ತಡೆಗಟ್ಟುವ ಕುರಿತು-ವಿಶ್ವ ಹಿಂದೂ ಪರಿಷದ್‌ ಬಜರಂಗದಳ ವತಿಯಿಂದ ಪುತ್ತೂರು ಪೋಲಿಸ್ ಠಾಣೆಗೆ ಮನವಿ

ಜೆನ್ ಝೀ ಪ್ರತಿಭಟನೆಯ ರೂಪ  ‘ಕಾಕ್ರೋಚ್ ಜನತಾ ಪಾರ್ಟಿ’ ಇಂಟರ್ನೆಟ್‌ನಲ್ಲಿ ಬಿರುಗಾಳಿ – ಸುಳ್ಳು ಆಶ್ವಾಸನೆ ನೀಡುವ ರಾಜಕಾರಣಿಗಳ ಅಂತ್ಯವಾಗಲಿದೆಯೇ?

ಬೆಳ್ತಂಗಡಿ : ಜಲಪಾತ ವೀಕ್ಷಣೆಗೆ ಹೋದ ಯುವತಿಯರಿಗೆ ಲೈಂಗಿಕ ಕಿರುಕುಳ – ಮುಸ್ಲಿಂ ಯುವಕರು ಪೊಲೀಸ್ ವಶಕ್ಕೆ!

ಇಟಲಿ ಪ್ರಧಾನಿ ಮೆಲೋನಿ ಭೇಟಿಯಾಗಿ ಫೋಟೊಗಳನ್ನು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ

May 20, 2026
ಪುತ್ತೂರು : ನಾಳೆ ಮೇ21 ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ವಿದ್ಯುತ್ ನಿಲುಗಡೆ

ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಿತ್ತೂರು ಸಮೀಪದ ಕೂವೆತ್ತಿಲ ಎಂಬಲ್ಲಿ ಪಿಕಪ್ ಮತ್ತು ಆಕ್ಟಿವಾ ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು

May 19, 2026
ಪುತ್ತೂರಿನ ‘ಬಿಂದು’ ಬ್ರ್ಯಾಂಡ್‌ನ ಸತ್ಯಶಂಕರ ಸೇರಿದಂತೆ 26 ಮಂದಿ ಸಾಧಕರ ಜೀವನಗಾಥೆ ‘ಕನ್ನಡಪ್ರಭ’ ದಿನಪತ್ರಿಕೆಯ ‘ಗೆದ್ದವರ ಸಿದ್ಧ ಸೂತ್ರ’ ರಾಜ್ಯಪಾಲ ರಿಂದ ಲೋಕಾರ್ಪಣೆ

ಪುತ್ತೂರು: ಕಬಕ ಗ್ರಾಪಂ ಸಭಾಂಗಣದಲ್ಲಿ ಹಕ್ಕು ಪತ್ರ ವಿತರಣೆ – ಬಡವನ ಮನೆಯ ಅಡಿಸ್ಥಳಕ್ಕೆ ಹಕ್ಕು ನೀಡಿದಾಗ ಮಾತ್ರ ನನಗೆ ಸಮಾಧಾನ: ಶಾಸಕ ಅಶೋಕ್ ರೈ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, May 21, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುಣಚ ಗ್ರಾಮದ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕು ಪತ್ರ ವಿವಾದ – ಶಾಸಕ ರಾಜೇಶ್ ನಾಯ್ಕ ಭೇಟಿಯಾಗಿ ಮಾತುಕತೆ

    ಪುಣಚ ಗ್ರಾಮದ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕು ಪತ್ರ ವಿವಾದ – ಶಾಸಕ ರಾಜೇಶ್ ನಾಯ್ಕ ಭೇಟಿಯಾಗಿ ಮಾತುಕತೆ

    ಪುತ್ತೂರು: ಬೆಳ್ಳಿಪ್ಪಾಡಿಯ ಕಟಾರ ಬಳಿ ಕುಮಾರಧಾರ ನದಿಯಲ್ಲಿ ಈಜಲು ತೆರಳಿದ್ದ ನಗರದ VC ಕಾಲೇಜು ವಿದ್ಯಾರ್ಥಿ ನೀರು ಪಾಲು

    ಪುತ್ತೂರು: ಬೆಳ್ಳಿಪ್ಪಾಡಿಯ ಕಟಾರ ಬಳಿ ಕುಮಾರಧಾರ ನದಿಯಲ್ಲಿ ಈಜಲು ತೆರಳಿದ್ದ ನಗರದ VC ಕಾಲೇಜು ವಿದ್ಯಾರ್ಥಿ ನೀರು ಪಾಲು

    ಪುಣಚ ಗ್ರಾಮದ ಎಸ್‌ಟಿ ಕುಟುಂಬಗಳ ಹಕ್ಕುಪತ್ರಕ್ಕಾಗಿ 3ನೇ ದಿನವೂ ಮುಂದುವರಿದ ಧರಣಿ: ಪ್ರತಿಭಟನಾ ನಿರತರಿಗೆ ಬಿಜೆಪಿ ಬೆಂಬಲ

    ಪುಣಚ ಗ್ರಾಮದ ಎಸ್‌ಟಿ ಕುಟುಂಬಗಳ ಹಕ್ಕುಪತ್ರಕ್ಕಾಗಿ 3ನೇ ದಿನವೂ ಮುಂದುವರಿದ ಧರಣಿ: ಪ್ರತಿಭಟನಾ ನಿರತರಿಗೆ ಬಿಜೆಪಿ ಬೆಂಬಲ

    ಪುತ್ತೂರು: ನೆಲ್ಲಿಕಟ್ಟೆ ನಿವಾಸಿ ಶ್ರೀಕಾಂತ್ ಹೆಗ್ಡೆ ನಿಧನ

    ಪುತ್ತೂರು: ನೆಲ್ಲಿಕಟ್ಟೆ ನಿವಾಸಿ ಶ್ರೀಕಾಂತ್ ಹೆಗ್ಡೆ ನಿಧನ

    ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶಗಳ ಅಕ್ರಮ ಸಾಗಾಣಿಕೆ ಮತ್ತು ಗೋ ಹತ್ಯೆ ತಡೆಗಟ್ಟುವ ಕುರಿತು-ವಿಶ್ವ ಹಿಂದೂ ಪರಿಷದ್‌ ಬಜರಂಗದಳ ವತಿಯಿಂದ ಪುತ್ತೂರು ಪೋಲಿಸ್ ಠಾಣೆಗೆ ಮನವಿ

    ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶಗಳ ಅಕ್ರಮ ಸಾಗಾಣಿಕೆ ಮತ್ತು ಗೋ ಹತ್ಯೆ ತಡೆಗಟ್ಟುವ ಕುರಿತು-ವಿಶ್ವ ಹಿಂದೂ ಪರಿಷದ್‌ ಬಜರಂಗದಳ ವತಿಯಿಂದ ಪುತ್ತೂರು ಪೋಲಿಸ್ ಠಾಣೆಗೆ ಮನವಿ

    ಬೆಳ್ತಂಗಡಿ : ಜಲಪಾತ ವೀಕ್ಷಣೆಗೆ ಹೋದ ಯುವತಿಯರಿಗೆ ಲೈಂಗಿಕ ಕಿರುಕುಳ – ಮುಸ್ಲಿಂ ಯುವಕರು ಪೊಲೀಸ್ ವಶಕ್ಕೆ!

    ಬೆಳ್ತಂಗಡಿ : ಜಲಪಾತ ವೀಕ್ಷಣೆಗೆ ಹೋದ ಯುವತಿಯರಿಗೆ ಲೈಂಗಿಕ ಕಿರುಕುಳ – ಮುಸ್ಲಿಂ ಯುವಕರು ಪೊಲೀಸ್ ವಶಕ್ಕೆ!

    ಪುತ್ತೂರು : ನಾಳೆ ಮೇ21 ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ವಿದ್ಯುತ್ ನಿಲುಗಡೆ

    ಪುತ್ತೂರು : ನಾಳೆ ಮೇ21 ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ವಿದ್ಯುತ್ ನಿಲುಗಡೆ

    ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಿತ್ತೂರು ಸಮೀಪದ ಕೂವೆತ್ತಿಲ ಎಂಬಲ್ಲಿ ಪಿಕಪ್ ಮತ್ತು ಆಕ್ಟಿವಾ ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು

    ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಿತ್ತೂರು ಸಮೀಪದ ಕೂವೆತ್ತಿಲ ಎಂಬಲ್ಲಿ ಪಿಕಪ್ ಮತ್ತು ಆಕ್ಟಿವಾ ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು

    ಪುತ್ತೂರಿನ ‘ಬಿಂದು’ ಬ್ರ್ಯಾಂಡ್‌ನ ಸತ್ಯಶಂಕರ ಸೇರಿದಂತೆ 26 ಮಂದಿ ಸಾಧಕರ ಜೀವನಗಾಥೆ ‘ಕನ್ನಡಪ್ರಭ’ ದಿನಪತ್ರಿಕೆಯ ‘ಗೆದ್ದವರ ಸಿದ್ಧ ಸೂತ್ರ’ ರಾಜ್ಯಪಾಲ ರಿಂದ ಲೋಕಾರ್ಪಣೆ

    ಪುತ್ತೂರಿನ ‘ಬಿಂದು’ ಬ್ರ್ಯಾಂಡ್‌ನ ಸತ್ಯಶಂಕರ ಸೇರಿದಂತೆ 26 ಮಂದಿ ಸಾಧಕರ ಜೀವನಗಾಥೆ ‘ಕನ್ನಡಪ್ರಭ’ ದಿನಪತ್ರಿಕೆಯ ‘ಗೆದ್ದವರ ಸಿದ್ಧ ಸೂತ್ರ’ ರಾಜ್ಯಪಾಲ ರಿಂದ ಲೋಕಾರ್ಪಣೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ರಾಷ್ಟ್ರೀಯ

ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್-1 ಛಾವಣಿ ಕುಸಿತ, ಓರ್ವ ಸಾವು, 7 ಮಂದಿಗೆ ಗಾಯ, ವಿಮಾನ ಹಾರಾಟ ರದ್ದು

by ಪ್ರಜಾಧ್ವನಿ ನ್ಯೂಸ್
June 28, 2024
in ರಾಷ್ಟ್ರೀಯ
0
ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್-1 ಛಾವಣಿ ಕುಸಿತ, ಓರ್ವ ಸಾವು, 7 ಮಂದಿಗೆ ಗಾಯ, ವಿಮಾನ ಹಾರಾಟ ರದ್ದು
9
SHARES
25
VIEWS
ShareShareShare

ನವದೆಹಲಿ: ಬಿಡುವಿಲ್ಲದೆ ಸುರಿಯುವ ಮಳೆಯ ನಡುವೆ ಶುಕ್ರವಾರ ನಸುಕಿನ ಜಾವ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1 ನಿರ್ಗಮನ ಗೇಟ್‌ನಲ್ಲಿನ ಮೇಲ್ಛಾವಣಿ ಭಾಗವು ಕುಸಿದು ಬಿದ್ದ ಪರಿಣಾಮ ಒಬ್ಬರು ಮೃತಪಟ್ಟುಸ 7 ಮಂದಿ ಗಾಯಗೊಂಡಿದ್ದಾರೆ, ದುರ್ಘಟನೆಯಲ್ಲಿ ಟ್ಯಾಕ್ಸಿಗಳು ಮತ್ತು ಕಾರುಗಳು ಸೇರಿದಂತೆ ಅನೇಕ ವಾಹನಗಳು ಜಖಂಗೊಂಡಿವೆ.

Muliya

ಜಾಹೀರಾತು

ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಟರ್ಮಿನಲ್ 1 ರಲ್ಲಿ ದುರ್ಘಟನೆ ನಡೆದಿದ್ದು, ಸುರಕ್ಷತಾ ಕ್ರಮಗಳಾಗಿ ಟರ್ಮಿನಲ್‌ನಿಂದ ಎಲ್ಲಾ ಚೆಕ್-ಇನ್‌ ಮತ್ತು ನಿರ್ಗಮನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ ತಿಳಿಸಿದೆ.

ವಿಮಾನಗಳ ಹಾರಾಟ ರದ್ದು: ಇದಲ್ಲದೆ, ಟರ್ಮಿನಲ್ 1 ರಿಂದ ಕಾರ್ಯನಿರ್ವಹಿಸುವ ಎರಡು ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಸ್ಪೈಸ್‌ಜೆಟ್‌ಗಳ ವಿಮಾನ ಕಾರ್ಯಾಚರಣೆಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದಾರೆ.
ಟರ್ಮಿನಲ್ 2 ಮತ್ತು 3 ರಿಂದ ನಿಗದಿತ ವಿಮಾನಗಳ ನಿರ್ಗಮನವನ್ನು ಬದಲಾಯಿಸಲು ನಾವು ವಿಮಾನಯಾನ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ನಿರ್ಗಮನದ ಮುಂಭಾಗದ ಮೇಲಾವರಣ ಮತ್ತು ಸಪೋರ್ಟ್ ಬೀಮ್ ಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡವರಿಗೆ ಎಲ್ಲಾ ತುರ್ತು ನೆರವು ಮತ್ತು ವೈದ್ಯಕೀಯ ನೆರವು ನೀಡಲಾಗುತ್ತಿದೆ. ಇಂದು ಮುಂಜಾನೆ ಭಾರೀ ಮಳೆಯಿಂದಾಗಿ, ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಹಳೆಯ ನಿರ್ಗಮನದ ಮುಂಭಾಗದಲ್ಲಿ ಮೇಲಾವರಣದ ಒಂದು ಭಾಗವು ಕುಸಿದಿದೆ. ತುರ್ತು ಸಿಬ್ಬಂದಿ ಅವರಿಗೆ ಅಗತ್ಯವಿರುವ ಎಲ್ಲಾ ನೆರವು ಮತ್ತು ವೈದ್ಯಕೀಯ ನೆರವು ನೀಡಲು ಕೆಲಸ ಮಾಡುತ್ತಿದ್ದಾರೆ.
ಈ ಘಟನೆಯ ಪರಿಣಾಮವಾಗಿ, ಟರ್ಮಿನಲ್ 1 ರಿಂದ ಎಲ್ಲಾ ನಿರ್ಗಮನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ಸುರಕ್ಷತಾ ಕ್ರಮವಾಗಿ ಚೆಕ್-ಇನ್ ಕೌಂಟರ್‌ಗಳನ್ನು ಮುಚ್ಚಲಾಗಿದೆ ಅನಾನುಕೂಲತೆಗಾಗಿ ನಾವು ಪ್ರಯಾಣಿಕರಲ್ಲಿ ಕ್ಷಮೆಯಾಚಿಸುತ್ತೇವೆ ಎಂದು ಟ್ವೀಟ್ ಮಾಡಿದೆ.
ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗಾರ್ಗ್ ಅವರು ಘಟನೆಯ ಬಗ್ಗೆ ಬೆಳಿಗ್ಗೆ 5.30 ಕ್ಕೆ ಮಾಹಿತಿ ಬಂದಿದೆ ಎಂದರು. ತಕ್ಷಣವೇ 4 ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿದವು. ವಿಮಾನ ನಿಲ್ದಾಣದಲ್ಲಿ, ಪಿಕ್ ಅಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ಛಾವಣಿಯ ಒಂದು ಭಾಗವು ಕೆಲವು ಕಾರುಗಳ ಮೇಲೆ ಕುಸಿದಿರುವುದನ್ನು ಅಗ್ನಿಶಾಮಕ ದಳದವರು ನೋಡಿದರು, ಇದರಡಿ ಇಬ್ಬರು ಸಿಕ್ಕಿಹಾಕಿಕೊಂಡಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಮೇದಾಂತ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೇಲ್ಛಾವಣಿಯ ಅಡಿಯಲ್ಲಿ ಸಿಕ್ಕಿಬಿದ್ದ ಜನರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಕಾರಿನ ಮೇಲೆ ಮೇಲ್ಛಾವಣಿಯ ಕಬ್ಬಿಣದ ತೊಲೆ ಬಿದ್ದಿದ್ದರಿಂದ ಸಿಲುಕಿಹಾಕಿಕೊಂಡವರಲ್ಲಿ ಕಾರಿನಲ್ಲಿ ಕುಳಿತಿದ್ದ ಕ್ಯಾಬ್ ಚಾಲಕನೂ ಸೇರಿದ್ದಾನೆ.
ಗಾಯಗೊಂಡ ಸ್ಥಿತಿಯಲ್ಲಿ ಎಂಟು ಜನರನ್ನು ವಿಮಾನ ನಿಲ್ದಾಣದಿಂದ ರಕ್ಷಿಸಿದ್ದೇವೆ. ಅವರನ್ನು ಪಿಸಿಆರ್ ವ್ಯಾನ್‌ಗಳ ಮೂಲಕ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಟು ಜನರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ನೀರು ನಿಂತು ಪ್ರಯಾಣಿಕರು ಪರದಾಡಬೇಕಾಯಿತು. ಟ್ರಾಫಿಕ್ ಕಂಟ್ರೋಲ್ ರೂಮ್‌ನಲ್ಲಿ ಸಂಚಾರ ದಟ್ಟಣೆ, ಅಲ್ಲಲ್ಲಿ ನೀರು ನಿಂತಿರುವ ಬಗ್ಗೆ, ಮರಗಳು ಬಿದ್ದಿರುವ ಬಗ್ಗೆ ದೆಹಲಿಯ ಹಿರಿಯ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ತೀನ್ ಮೂರ್ತಿ ಮಾರ್ಗ್, ಮೂಲಚಂದ್, ಮಿಂಟೋ ರಸ್ತೆ, ಆನಂದ್ ವಿಹಾರ್, ಮೆಹ್ರೌಲಿ ಬದರ್‌ಪುರ್ ರಸ್ತೆ, ಮಂಡವಾಲಿ, ಭಿಕಾಜಿ ಕಾಮಾ ಪ್ಲೇಸ್, ಮಧು ವಿಹಾರ್, ಪ್ರಗತಿ ಮೈದಾನ, ಮುನಿರ್ಕಾ, ಧೌಲಾ ಕುವಾನ್, ಮೋತಿ ಬಾಗ್, ಐಟಿಒ, ಮತ್ತು ಗೌತಮ್ ಬುದ್ ನಗರದಲ್ಲಿ ಹಲವಾರು ವಲಯಗಳು ಜಲಾವೃತವಾಗಿವೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿಯನ್ನು ಖುದ್ದಾಗಿ ಗಮನಿಸುತ್ತಿರುವುದಾಗಿ ಹೇಳಿದ್ದಾರೆ.
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಮೇಲ್ಛಾವಣಿ ಕುಸಿತದ ಘಟನೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ತೊಂದರೆಗೀಡಾದ ಪ್ರಯಾಣಿಕರಿಗೆ ಸಹಾಯ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರೆದಿದೆ ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

Keshari Durga

ಜಾಹೀರಾತು

Sathyasayi Hospital

ಜಾಹೀರಾತು

SendShare4Share
Previous Post

ಭಾರಿ ಮಳೆ: ಮೂರು ತಿಂಗಳ ಹಿಂದೆ ಉದ್ಘಾಟನೆಯಾದ ಜಬಲ್‌ಪುರ ವಿಮಾನ ನಿಲ್ದಾಣದ ಮೇಲ್ಫಾವಣಿ ಕುಸಿತ!

Next Post

ಪುತ್ತೂರು -ಕುಂಬ್ರ- ಕೌಡಿಚ್ಚಾರ್ ಸಿಟಿ ಬಸ್‌ಗೆ ಚಾಲನೆ ಪುತ್ತೂರು ಕ್ಷೇತ್ರ ಪ್ರತೀ ರಂಗದಲ್ಲೂ ಅಭಿವೃದ್ದಿ ಹೊಂದುತ್ತಿದೆ: ಕಾವು ಹೇಮನಾಥ ಶೆಟ್ಟಿ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In