ಪುತ್ತೂರು: ರಸ್ತೆ ಅಭಿವೃದ್ದಿಗಾಗಿ ಭೂ ಸ್ವಾಧೀನ ಮಾಡಿಕೊಂಡ ಬಳಿಕ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡದೆ ವಿಳಂಬ ಧೋರಣೆ ಮಾಡಿರುವ ವಿಚಾರವನ್ನು ಪುತ್ತೂರು ಶಾಸಕರಾದ ಅಶೋಕ್ ರೈಯವರು ವಿಧಾನಸಭಾ ಅಧಿವೇಶನದ ಮೊದಲ ದಿನವೇ ಸರಕಾರದ ಗಮನಸೆಳೆದು ಭೂಮಿ ಕಳೇದುಕೊಂಡವರಿಗೆ ಪರಿಹಾರವನ್ನು ತಕ್ಷಣ ನೀಡುವಂತೆ ಆಗ್ರಹಿಸಿದ್ದಾರೆ. ರಸ್ತೆ ಅಗಲೀಕರಣದ ವೇಳೆ ಸರಕಾರದ ಭರವಸೆಯನ್ನು ನಂಬಿ 2016 ರಲ್ಲಿ ಸುಮಾರು 13 ಮಂದಿ ತಮ್ಮ ಭೂಮಿಯನ್ನು ರಸ್ತೆ ಅಭಿವೃದ್ದಿಗಾಗಿ ಬಿಟ್ಟುಕೊಟ್ಟಿದ್ದರು. ಆದರೆ ಆ ಬಳಿಕ ಭೂಮಿ ಕಳೇದುಕೊಂಢವರಿಗೆ ಯಾವುದೇ ಪರಿಹಾರವನ್ನು ನೀಡದೆ ವಿಳಂಬ ಮಾಡುತ್ತಿದ್ದಾರೆ ಎಂದು ಶಾಸಕರು ವಿಧಾನಸಭೆಯಲ್ಲಿ ಸರಕಾರದ ಗಮನಸೆಳೆದು ಎಲ್ಲರಿಗೂ ಪರಿಹಾರವನ್ನು ನೀಡುವಂತೆ ಆಗ್ರಹಿಸಿದ್ದಾರೆ.
ಏನಿದು ಪ್ರಕರಣ
2016 ರಲ್ಲಿ ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿಯವರು ಶಾಸಕರಾಗಿದ್ದ ಅವಧಿಯಲ್ಲಿ ಅಮ್ಚಿನಡ್ಕ ನೆಟ್ಟಾರು ಲೋಕೋಪೊಯೋಗಿ ರಸ್ತೆ ಮತ್ತು ಮಂಜೇಶ್ವರ ಸುಬ್ರಹ್ಮಣ್ಯ ರಸ್ತಯೆ ಅಭಿವೃದ್ದಿಗೆ ಅನುದಾನ ಬಿಡಿಗಡೆಯಾಗಿತ್ತು. ಈ ಎರಡೂ ರಸ್ತೆ ಅಭಿವೃದ್ದಿಯ ವೇಳೆ ಕೊರ್ಳತಿಗೆ ಗ್ರಾಮದ ಅಮಲ, ಆರ್ಯಾಪು ಗ್ರಾಮದ ಕುಂಜೂರುಪಂಜ ಮತ್ತು ದೇವಸ್ಯದಲ್ಲಿ ಭೂ ಒತ್ತುವರಿ ಮಾಡಲಾಗಿತ್ತು. ಅಂದಿನ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಸಭೆ ನಡೆದು ಪರಿಹಾರ ಮೊತ್ತದ ಬಗ್ಗೆ ಚರ್ಚೆ ನಡೆದು ಆ ಬಳಿಕ ಭೂಮಿ ಬಿಟ್ಟು ಕೊಡುವ ಜಗದ ಮಾಲಕರು ರಸ್ತೆ ಅಭಿವೃದ್ದಿಗೆ ಒಪ್ಪಿಗೆಯನ್ನು ಸೂಚಿಸಿದ್ದರು. ರಸ್ತೆ ಕಾಮಗಾರಿ ಮುಗಿಯುವುದರೊಳಗೆ ಭೂಮಿ ಒತ್ತುವರಿ ಮಾಡಿಕೊಂಡಿರುವ ಪರಿಹಾರ ಮೊತ್ತವೂ ಸಿಗಲಿದೆ ಎಂಬ ಭರವಸೆಯನ್ನು ನೀಡಿದ್ದರು.
ಯಾರಿಗೆಲ್ಲಾ ಪರಿಹಾರ : ಕೊಳ್ತಿಗೆ ಗ್ರಾಮದ ಅಮಲ ನಿವಾಸಿಗಳಾದ ಅಮಲರಾಮಚಂದ್ರ, ಶಿವರಾಂ ಭಟ್, ಕುಶಾಲಪ್ಪ ಗೌಡ, ನಾರ್ಣಪ್ಪ ಗೌಡ ಮತ್ತು ಅಪ್ಪು ನಾಯ್ಕ ಇವರಿಗೆ ಒಟ್ಟು 35 ಲಕ್ಷ ರೂ ಪರಿಹಾರ. ಆರ್ಯಾಪು ಗ್ರಾಮದ ಕುಂಜೂರು ಪಂಜ ನಿವಾಸಿಗಳಾದ ನಾರಾಯಣ ಗೌಡ, ಬಾಲಕೃಷ್ಣಗೌಡ, ಕಮಲ, ನಾರಾಯಣ ಗೌಡ, ಹರಿಣಾಕ್ಷಿ, ಬಾಬು ಗೌಡ ಇವರೆಲ್ಲರ ಒಟ್ಟು ಮೊತ್ತ 1 ಕೋಟಿ, 14 ಲಕ್ಷದ 3350. ಆರ್ಯಾಪು ಗ್ರಾಮದ ದೇವಸ್ಯ ನಿವಾಸಿಗಳಾದ ಪ್ರಭಾಕರ ಪ್ರಭು ಮತ್ತು ರಾಮಚಂಧ್ರ ಪ್ರಭು ಇವರಿಬ್ಬರಿಗೆ ಒಟ್ಟು 18 ಲಕ್ಷ ರೂ ಪರಿಹಾರವನ್ನು ನೀಡಬೇಕಿದೆ.
ಯಾರು ಪರಿಹಾರ ಕೊಡುವುದು?
ರಸ್ತೆ ಅಭಿವೃದ್ದಿ ಮಾಡುವ ವೇಳೆ ಭೂಮಿ ಕಳೇದುಕೊಂಡವರಿಗೆ ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣಾ ಕೇಂದ್ರ ಎಂಬ ಸರಕಾರಿ ಇಲಾಖೆಯಿಂದ ಪರಿಹಾರದ ಮೊತ್ತವನ್ನು ನೀಡಬೇಕಿತ್ತು. ಆದರೆ ವಿನಾ ಕಾರಣ ವಿಳಂಬ ಮಾಡುತ್ತಿದೆ ಎಂಬ ಆರೋಪ ಭೂಮಿ ಕಳೇದಕುಕೊಂಡ ಫಲಾನುಭವಿಗಳದ್ದಾಗಿದೆ. 2018 ರಲ್ಲಿ ಇದೇ ಇಲಾಖೆಯಿಂದ ಆದೇಶವಾಗಿ ಪರಿಹಾರ ಮೊತ್ತವನ್ನು 2018 ಆ. 31 ರಂದು ನೀಡಬೇಕು ಎಂಬ ಆದೇಶವೂ ಆಗಿತ್ತು ಆದರೆ ಆ ಬಳಿಕವೂ ಪರಿಹಾರ ಮೊತ್ತ ಕೈ ಸೇರಲಿಲ್ಲ.
ಶಾಸಕ ಅಶೋಕ್ ರೈ ಗೆ ಮನವಿ
2016 ರಿಂದ ಪರಿಹಾರ ಸಿಗದೆ ನೊಂದ ಫಲಾನುಭವಿಗಳು ಪುತ್ತೂರು ಶಾಸಕರಾದ ಅಶೋಕ್ ರಯಯವರಲ್ಲಿ ಮನವಿ ಮಾಡಿದ್ದರು. ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕರು ಈ ವಿಚಾರವನ್ನು ತಾನು ಅಧಿವೇಶನದಲ್ಲಿ ಸರಕಾರದ ಗಮನಸೆಳೆಯವುದಾಗಿ ತಿಳಿಸಿದ್ದರು. ಅದರಂತೆ ವಿಧಾನಸಭಾ ಅಧಿವೇಶನದ ಮೊದಲ ದಿನವೇ ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ಶೀಘ್ರವೇ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ.