ಪೇಶಾವರ: ಸಂಬಂಧಿಸಿದಂತೆ ಉಂಟಾದ ಪಾಕಿಸ್ಥಾನದ 2 ಬುಡಕಟ್ಟುಗಳ ನಡುವಿನ ಸಂಘರ್ಷದಲ್ಲಿ 30 ಜನರು ಮೃತಪಟ್ಟು, 145ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಾಕಿಸ್ಥಾನದ ವಾಯವ್ಯ ಭಾಗದ ಕುರ್ರಮ್ ಜಿಲ್ಲೆಯ ಬೋಶೇರಾ ಹಳ್ಳಿಯಲ್ಲಿ ಜಾಗದ ಮಾಲಕತ್ವಕ್ಕೆ ಸಂಬಂಧಿಸಿದಂತೆ 5 ದಿನಗಳ ಹಿಂದೆ ಜಗಳ ಶುರುವಾಗಿದೆ.
ಬುಡಕಟ್ಟು ಹಿರಿಯರು, ಸೇನೆ ಹಾಗೂ ಪೊಲೀಸರ ನೆರವಿನಿಂದ ಜಿಲ್ಲಾಡಳಿತವು ಶಿಯಾ ಮತ್ತು ಸುನ್ನಿ ನಡುವೆ ಸಂಧಾನ ಏರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಿದ್ದೂ, ಎರಡೂ ಪಂಡಗಳ ನಡುವೆ ಈಗಲೂ ಗುಂಡಿನ ಚಕಮಕಿ ನಡೆದಿದೆ. ಹಳ್ಳಿಯಿಂದ ಆರಂಭವಾದ ಈ ಸಂಘರ್ಷವು ಜಿಲ್ಲೆಯ ವಿವಿಧ ಭಾಗಗಳಿಗೆ ಹಬ್ಬಿದೆ ಎನ್ನಲಾಗಿದೆ.