ಮಂಗಳೂರು: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಘಟನೆ ಮಂಗಳೂರಿನಲ್ಲಿ 2012 ರಲ್ಲಿ ನಡೆದಿತ್ತು ಅದು ಬೇರೆ ಯಾವುದು ಅಲ್ಲ ಹೋಮ್ ಸ್ಟೇ ಘಟನೆ ಪ್ರಕರಣ
2012ರ ಜುಲೈ 28 ರಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಪಡೀಲ್ ಹೋಂ ಸ್ಟೇಗೆ ದಾಳಿ ಮಾಡಿ ಅಲ್ಲಿ ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆ ಆ.6ರಂದು ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು ಇಂದು ತೀರ್ಪು ಮಹತ್ತರ ತೀರ್ಪು ಪ್ರಕಟವಾಗಿದೆ.
ಯುವಕ ಯುವತಿಯರು ಹೋಂ ಸ್ಟೇಯಲ್ಲಿ ತಂಗಿದ್ದು, ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಸಂತ್ರಸ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಾರ್ಟಿ ನಿರತ ಯುವತಿಯರಲ್ಲಿ ಇಬ್ಬರು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಪುತ್ರಿಯರೂ ಇದ್ದರು.
ಅಂತಿಮವಾಗಿ ಪೋಲೀಸರು 44 ಮಂದಿಯ ಮೇಲೆ ಆರೋಪ ಪಟ್ಟಿ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದಾಳಿ ಘಟನೆ ಚಿತ್ರೀಕರಿಸಲು ತೆರಳಿದ್ದ ಇಬ್ಬರ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಅನ್ನೋ ಕಾರಣಕ್ಕಾಗಿ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಘಟನೆ ನಡೆದು ಸುದೀರ್ಘ 12 ವರ್ಷ ವಿಚಾರಣೆ ಬಳಿಕ ಇಂದು ಅಂತಿಮ ತೀರ್ಪು ಹೊರಬಿದ್ದಿದೆ.
ಸಂಧರ್ಭದಲ್ಲಿ ಬಿಜೆಪಿ ಸರ್ಕಾರ ಇದ್ದು ಆರ್ ಅಶೋಕ್ ಗೃಹ ಸಚಿವರಾಗಿದ್ದರು ಅವರ ಖಡಕ್ ಸೂಚನೆ ಮೇರೆ ಕೇಸ್ ಇನ್ನಷ್ಟು ಭದ್ರವಾಯಿತು.ಈ ವಿಚಾರವನ್ನು ಹಿಂದು ಕಾರ್ಯಕರ್ತರು ಎಷ್ಟೇ ವಿರೋಧಿಸಿದರು ಸಹ ಮತ್ತೆ ಮತ್ತೆ ಆರ್ ಅಶೋಕ್ ಸಮರ್ಥಿಸಿದ್ದರು.
ಸದ್ಯ ಈ ಪ್ರಕರಣ ಖುಲಾಸೆ ಆಗಿದೆ. ಆರೋಪಿತರನ್ನು ನಿರಪರಾಧಿಗಳು ಎಂದು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ನ್ಯಾಯಾಲಯ ತೀರ್ಪು ನೀಡಿದೆ.
ಇದೊಂದು ಹಿಂದುತ್ವದ ಐತಿಹಾಸಿಕ ಗೆಲುವು, ದಕ್ಷಿಣ ಕನ್ನಡದಲ್ಲಿ ಮುಂದೆ ಇಂತಹ ಹೇಯ ಕೃತ್ಯ ನಡೆಯದಿರಲಿ ಎಂಬುದು ನಮ್ಮ ಧ್ಯೇಯವಾಗಿದೆ ಎಂದು ಪ್ರಮುಖರು ತಿಳಿಸಿದ್ದಾರೆ