ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ (ರಿ). ಪುತ್ತೂರು ವಲಯ ಇದರ ವಾರ್ಷಿಕ ಮಹಾಸಬೆಯು ದಿನಾಂಕ 13.08.2024ನೇ ಮಂಗಳವಾರ ಪುತ್ತೂರಿನ ಮನಿಷಾ ಸಭಾಂಗಣ ಇಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜೆಲ್ಲಾಧ್ಯಕ್ಷರಾದ ಶ್ರೀ ಪದ್ಮಪ್ರಸಾದ್ ಜೈನ್ ಇವರು ನೆರವೇರಿಸಿದರು.
ಪ್ರಾರ್ಥನೆಯನ್ನು ವಲಯದ ಮಾಜಿ ಅಧ್ಯಕ್ಷರಾದ ಶಾಂತ ಕುಮಾರ್ ಇವರು ನಡೆಸಿಕೊಟ್ಟರು. ನವೀನ್ ರೈ ಪಂಜಳ ಇವರು ಪ್ರಾಸ್ತಾವಿಕ ಭಾಷಣವನ್ನು ನಡೆಸಿಕೊಟ್ಟರು. ವಲಯದ ವಾರ್ಷಿಕ ವರದಿಯನ್ನು ವಲಯದ ಸದಸ್ಯ ಗಣೇಶ್ ಕಟ್ಟಪುನಿ ಓದಿದರು. ವಾರ್ಷಿಕ ಲೆಕ್ಕ ಪತ್ರವನ್ನು ವಲಯದ ಕೋಶಾಧಿಕಾರಿಯಾದ ಪ್ರಮೋದ್ ಸಾಲಿಯಾನ್ ಮಂಡಿಸಿದರು.
ಉದ್ಘಾಟನೆಯನ್ನು ನೆರವೇರಿಸಿದ ಪದ್ಮಪ್ರಸಾದ್ ಜೈನ್ ಮಾತಾಡಿ ನಮ್ಮ ಹಲವಾರು ವಲಯಗಳಲ್ಲಿ ಪುತ್ತೂರು ವಲಯ ಒಂದು ಶಿಸ್ತಿನ ವಲಯ ಎಂದು ಹೇಳಿದರು.
ನಮ್ಮ ಸದಸ್ಯರುಗಳು ನಮ್ಮ ಈ ಕೆಲಸದ ಒತ್ತಡದಿಂದ ನಮ್ಮ ಆರೋಗ್ಯ ದ ಮೇಲೆ ಕಾಳಜಿಯನ್ನು ಮರೆತು ಬಿಡುತ್ತಾರೆ. ಆದರೆ ಪುತ್ತೂರಿನ ಈ ಒಂದು ಮಹಾಸಭೆಯಲ್ಲಿ ಉಚಿತ ಕಣ್ಣಿನ ಪರೀಕ್ಷೆ ಮಾಡುವ ಮೂಲಕ ಸದಸ್ಯರ ಆರೋಗ್ಯದ ಮೇಲೆ ಇಟ್ಟ ಕಾಳಜಿಯನ್ನು ಕಂಡು ವಲಯದ ಸಮಿತಿ ಸದಸ್ಯರನ್ನು ಅಭಿನಂದಿಸಿದರು.
ಹಾಗೂ ಜಿಲ್ಲಾ ಸಂಘದ ಕಟ್ಟಡಕ್ಕೆ ಪ್ರಥಮವಾಗಿ ಪುತ್ತೂರು ವಲಯ ಹೆಚ್ಚಿನ ಒಂದು ಮೊತ್ತವನ್ನು ನೀಡುವ ಮೂಲಕ ಸಂಘಕ್ಕೆ ಬೆನ್ನೆಲುಬಾಗಿ ನಿಂತು ಸಹಕರಿಸಿದ್ದಿರಿ, ಆ ಮೂಲಕ ಪುತ್ತೂರು ವಲಯವನ್ನು ಮತ್ತೊಮ್ಮೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಲಯದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ರಮೇಶ್ ಕಲಾಶ್ರೀ ಮಾತನಾಡಿ ಈ ಒಂದು ಕಾರ್ಯಕ್ರಮದಲ್ಲಿ ವಲಯದ ಹೆಚ್ಚು ಸದಸ್ಯರು ಭಾಗವಹಿಸಿದ್ದಾರೆ, ಅದು
ಈ ಒಂದು ವಲಯದ ಒಗ್ಗಟ್ಟನ್ನು ತೋರಿಸುತ್ತದೆ ಎಂದರು. ಜಿಲ್ಲಾ ಕಟ್ಟಡ ಸಮಿತಿ ಸಂಚಾಲಕರಾದ ಸುಧಾಕರ ಶೆಟ್ಟಿ ಮಿತ್ತೂರು ಮಾತನಾಡಿ ಜಿಲ್ಲೆಯಲ್ಲಿ ನಮ್ಮ ಸಂಘಕ್ಕೆ ಆಗುವ ನೂತನ ಸಂಕೀರ್ಣಕ್ಕೆ ವಲಯದ ಸದಸ್ಯರು ಹೆಚ್ಚಿನ ಧನ ಸಹಾಯವನ್ನು ನೀಡಿ ,ಸಂಘದ ಬೆಳವಣಿಗೆಗೆ ಸದಸ್ಯರೆಲ್ಲರೂ ಸೇರಿ ಭದ್ರ ಬುನಾದಿಯನ್ನು ಹಾಕೋಣ ಎಂದು ಎಲ್ಲರ ಸಹಾಯವನ್ನು ಯಾಚಿಸಿದರು.
ವಲಯದ ಅಧ್ಯಕ್ಷರಾದ ರಘು ಶೆಟ್ಟಿ ಮಾತನಾಡಿ ಒಂದು ಬಲಿಷ್ಠ ಸಂಘಟನೆಯ ಪುತ್ತೂರು ವಲಯದ ಅಧ್ಯಕ್ಷನಾಗಿ ಆಯ್ಕೆ ಅದದ್ದು ನನ್ನ ಭಾಗ್ಯ ಎಂದರು.ಸಂಘಟನೆಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡಾಗ ಸಂಘದ ಮಹತ್ವ ನಮಗೆ ತಿಳಿಯುತ್ತದೆ, ಆದುದರಿಂದ ಎಲ್ಲಾ ಸದಸ್ಯರು ನಮ್ಮ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ ಎಂದು ತಿಳಿಸಿದರು.
ವಲಯದಲ್ಲಿ ನೂತನ ಗೃಹ ನಿರ್ಮಾಣ. ಮತ್ತು ನೂತನ ಸ್ಟುಡಿಯೋ ಮಾಡಿದವರನ್ನು ಅಭಿನಂದಿಸಲಾಯಿತು
ಕಾರ್ಯಕ್ರಮದಲ್ಲಿ ವಲಯದ ವತಿಯಿಂದ ಉಚಿತ ಕಣ್ಣಿನ ತಪಾಸನ ಶಿಬಿರವನ್ನು ನಡೆಸಲಾಯಿತು.
ದಯಾನಂದ ಬಂಟ್ವಾಳ, ಸುದರ್ಶನ್ ರಾವ್ ,ಹರೀಶ್ ಎಲಿಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ರವಿಚಂದ್ರ ರೈ ನಡೆಸಿಕೊಟ್ಟರು.ಚಂದ್ರಶೇಖರ ಶೆಟ್ಟಿ ಇವರು ಧನ್ಯವಾದ ಸಮರ್ಪಿಸಿದರು.