ಶಿರೂರು: ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡ ಎರಡನೇ ದಿನದಲ್ಲಿ ಭಾರತೀಯ ನೌಕಾಪಡೆಯು ಗಂಗವಳ್ಳಿ ನದಿಯಲ್ಲಿ ಲಾರಿಯ ಹೆಚ್ಚಿನ ಭಾಗಗಳನ್ನು ಪತ್ತೆಯಾಗಿದ್ದು ಹೂಳೆತ್ತುವ ಅಗತ್ಯವಿದೆ ಎಂದು ಹೇಳಿದೆ.
ಭಾರತೀಯ ಸೇನೆಯ ಡೈವರ್‌ಗಳು ಮತ್ತು ಈಶ್ವರ್ ಮಲ್ಪೆ ಇಬ್ಬರೂ ನಾಪತ್ತೆಯಾದ ಅರ್ಜುನ್ ಮತ್ತು ಇತರ ಇಬ್ಬರನ್ನು ಹುಡುಕಲು ಬುಧವಾರ ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಟ್ರಕ್‌ನ ಒಂದು ಭಾಗ ಮಾತ್ರ ಕಂಡುಬಂದಿದ್ದರಿಂದ ಸ್ವಲ್ಪ ಭರವಸೆ ಕಂಡು ಬಂದಿದೆ. ನೌಕಾಪಡೆಯು ನದಿಯನ್ನು ಶೋಧಿಸಲು ನೀರೊಳಗಿನ ಸೋನಾರ್ ಸಂವೇದಕಗಳನ್ನು ಬಳಸಿಕೊಂಡಿದೆ.
ಕಳೆದ ತಿಂಗಳು ಶಿರೂರಿನಲ್ಲಿ ಭೂಕುಸಿತದ ಸಂದರ್ಭದಲ್ಲಿ ಕಾಣೆಯಾದ ಸಿಬ್ಬಂದಿ ಮತ್ತು ವಾಹನಗಳ ಹುಡುಕಾಟದಲ್ಲಿ, ಕಾರವಾರದ ನೌಕಾನೆಲೆಯಿಂದ ಭಾರತೀಯ ನೌಕಾಪಡೆ ಡೈವರ್‌ಗಳು ಇಂದು ಜಿಲ್ಲಾಡಳಿತದ ಕೋರಿಕೆಯ ಮೇರೆಗೆ ಗಂಗಾವಳಿ ನದಿಯಲ್ಲಿ ಡೈವಿಂಗ್ ಕಾರ್ಯಾಚರಣೆಯನ್ನು ಕೈಗೊಂಡಿದೆ. ಕಡಿಮೆಯಾದ ನದಿಯ ಪ್ರವಾಹಗಳು ಮತ್ತು ನೀರೊಳಗಿನ ಸೋನಾರ್ ಸಂವೇದಕಗಳನ್ನು ಬಳಸಿಕೊಂಡು ವ್ಯಾಪಕವಾದ ಚಿತ್ರಣ ವಿಶ್ಲೇಷಣೆಯಿಂದಾಗಿ ಇದು ಸಾಧ್ಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ . 14 ಆಗಸ್ಟ್ ರಂದು, ನೌಕಾ ಡೈವರ್‌ಗಳು ಡೈವಿಂಗ್ ಕಾರ್ಯಾಚರಣೆಯ ಸಮಯದಲ್ಲಿ ಟ್ರಕ್‌ನ ಭಾಗಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ನದಿಯಲ್ಲಿ ಅಪಾರ ಪ್ರಮಾಣದ ಅವಶೇಷಗಳಿವೆ ಎಂದು ನೌಕಾಪಡೆ ತಿಳಿಸಿದೆ. “ಸ್ಥಳದಲ್ಲಿ ಅಪಾರ ಪ್ರಮಾಣದ ಅವಶೇಷಗಳು, ಭಾರೀ ಬಂಡೆಗಳು, ಮರಗಳು ಇತ್ಯಾದಿಗಳಿವೆ ,ಹೀಗಾಗಿ ಹೂಳೆತ್ತುವ ಅಗತ್ಯ ಬರಬಹುದು ಎಂದು ಹೇಳಲಾಗುತ್ತಿದೆ.
ಭಾರತೀಯ ನೌಕಾಪಡೆಯ ಡೈವಿಂಗ್ ಮತ್ತು ಸಮೀಕ್ಷಾ ತಂಡಗಳು ಶಿರೂರಿನಲ್ಲಿ ನಿಯೋಜನೆಗೊಂಡಿದ್ದು ಜಿಲ್ಲಾಡಳಿತದೊಂದಿಗೆ ಶೋಧ ಪ್ರಯತ್ನಗಳನ್ನು ಮುಂದುವರಿಸುತ್ತಿವೆ. ನೌಕಾಪಡೆಯು ಶೋಧ ಕಾರ್ಯಗಳಿಗೆ ಬದ್ಧವಾಗಿದೆ ಎಂದು ನೌಕಾಪಡೆ ಪ್ರಕಟಣೆ ತಿಳಿಸಿದೆ.