ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಲಿಲ್ಲ. ಅಂದಿನ ಬಿಜೆಪಿ ಸರಕಾರದಿಂದ ಪೊಲೀಸ್ ಇಲಾಖೆಗೆ ಒತ್ತಡ ಬಂದ ಕಾರಣ ಆರೋಪಿಗಳನ್ನು ಹಿಡಿಯಲು ಆಗಲಿಲ್ಲ. ಇದಕ್ಕೆ ಬಿಜೆಪಿಯೇ ಮೂಲ ಕಾರಣ. ಹಾಗಾಗಿಯೇ ಕರ್ನಾಟಕಕ್ಕೆ ಒಬ್ಬಯೋಗಿ ಬೇಕು ಎಂದು ಹೇಳಿದ್ದಾರೆ.
ಅವರು ವಿಶ್ವಹಿಂದೂ ಪರಿಷದ್, ಬಜರಂಗದಳ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ಆಶ್ರಯದಲ್ಲಿ ಜರುಗಿದ 11ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಾಪ್ ಸಿಂಹ, ಪ್ರವೀಣ್ ನೆಟ್ಟಾರ್ ಹಾಗೂ ಹರ್ಷ ಕೊಲೆಯಾದಾಗ ಪೊಲೀಸರಿಗೆ ಆರೋಪಿಗಳು ಇರುವ ಜಾಗ ಗೊತ್ತಿತ್ತು. ಆದರೆ ಪೊಲೀಸರನ್ನು ಅಂದಿನ ಬಿಜೆಪಿ ಸರ್ಕಾರ ತಡೆದಿದ್ದೇಕೆ? ಎಂದು ಬಿಜೆಪಿ ವಿರುದ್ಧವೇ ಗುಡುಗಿದ್ದಾರೆ.
ಸರಿಯಾದ ವ್ಯಕ್ತಿ ಪೊಲೀಸ್ ಇಲಾಖೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ ಮಾತ್ರ ಸಮಾಜದ, ರಾಷ್ಟ್ರದ ಹಾಗೂ ಧರ್ಮದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲು ಸಾಧ್ಯವಾಗುತ್ತದೆ. ನಮ್ಮ ಭಾಗದ ಪ್ರವೀಣ್ ನೆಟ್ಟಾರ್ ಹತ್ಯೆ ಆದಾಗ ಪೊಲೀಸರ ಬಳಿ ಎಲ್ಲ ದಾಖಲೆ ಇತ್ತು. ಅಧಿಕಾರ ಕೂಡ ಇತ್ತು. ಆರೋಪಿಗಳು ಎಲ್ಲಿದ್ದಾರೆ ಎನ್ನುವ ಮಾಹಿತಿ ಅವರಿಗಿತ್ತು ಆದರೆ ಪೊಲೀಸರನ್ನು ತಡೆಯಲು ಅವತ್ತಿನ ಬಿಜೆಪಿ ಸರಕಾರಕ್ಕೆ ಯಾರು ಆರ್ಡರ್ ಕೊಟ್ಟಿದ್ದರು. ಆ ಸಮಯದಲ್ಲಿ ಬಿಜೆಪಿ ಪೊಲೀಸರಿಗೆ ಗ್ರೀನ್ ಸಿಗ್ನಲ್ ನೀಡಿದ್ದರೆ ಕೃತ್ಯ ಎಸಗಿದವರು ಸಾಯುತ್ತಿದ್ದರು ಎಂದು ಸಿಂಹ ಹೇಳಿದ್ದಾರೆ.
ರಾಜ್ಯದಲ್ಲಾಗುತ್ತಿರುವ ಅಪರಾಧ ಕೃತ್ಯ, ಹಿಂದೂಗಳ ಕೊಲೆ ಮತ್ತು ರಾಜಕಾರಣ ವಿರುದ್ಧ ಪ್ರತಾಪ್ ಸಿಂಹ ಕಿಡಿಕಾರಿದರು. ಹಾಗೆಯೇ ಪೊಲೀಸ್ ಇಲಾಖೆ ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದರು.