ಮಂಗಳೂರು: 2022 ರಲ್ಲಿ ಬಿಜೆಪಿಯಿಂದ ಉಚ್ಚಾಟಿತ ಅಸ್ಗರ್ ಮುಡಿಪು ಈ ಬಾರಿ ಅಲ್ಪಸಂಖ್ಯಾತ ಮೋರ್ಚದ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದಾರೆ. ಆದರೆ ಎರಡು ವರ್ಷದ ಹಿಂದೆ ಇದೇ ಆಸ್ಗರ್ ಮುಡಿಪು ಅವರನ್ನು ಬಿಜೆಪಿ ಪಕ್ಚದಿಂದ ಉಚ್ಚಾಟನೆ ಮಾಡಿತ್ತು.
ಬಿಜೆಪಿಯಿಂದ ಉಚ್ಚಾಟನೆಯಾಗಲು ಕಾರಣವೇನು…?
ಸುಮಾರು ಎರಡು ವರ್ಷಗಳ ಹಿಂದೆ ವಿಟ್ಲದ ಸಾಲೆತ್ತೂರಿನ ಜ. 6 ರಂದು ನಡೆದ ಔತಣಕೂಟದಲ್ಲಿ ಭಾಗವಹಿಸಿದ ಮದುಮಗ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅವಮಾನ ಮಾಡಿದ ಬಗ್ಗೆ ವಿಟ್ಲ ಹಿಂದೂ ಜಾಗರಣೆ ವೇದಿಕೆ ಕಾರ್ಯದರ್ಶಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ನಡೆಸುತ್ತಿದ್ದ ವಿಟ್ಲ ಠಾಣೆ ಪೊಲೀಸರು ಮದುಮಗ ಬಾಷಿತ್ ಸಹೋದರ ಅರ್ಷಾದ್ ನನ್ನು ಜ .8 ರಂದು ಮಂಜೇಶ್ವರದದ ವಶಕ್ಕೆ ಪಡೆದು ವಿಟ್ಲ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು.
ಸಂಜೆ ವೇಳೆ ಆತನನ್ನು ಬಿಟ್ಟು ಕಳುಹಿಸಿದ್ದರು. ಆರೋಪಿಯ ಸಹೋದರನ ಬಿಡುಗಡೆಯಲ್ಲಿ ಮಹಮ್ಮದ್ ಅಸ್ಗರ್ ಕೈವಾಡವಿದೆಯೆಂಬ ಗುಲ್ಲು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಮುಖಂಡರಲ್ಲಿ ಅಸ್ಗರ್ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಆ ತಕ್ಷಣ ಆಗಿನ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡುಬಿದಿರೆ ನಿರ್ದೇಶನದಂತೆ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ ಅಮಾನತು ಆದೇಶ ನೀಡಿದ್ದರು.
ಆದರೆ ಈ ಬಾರಿ ಅಸ್ಗರ್ ಮುಡಿಪು ಕ್ಷೇತ್ರದವರೇ ಕಳೆದ ಬಾರಿ ಉಳ್ಳಾಲದ ಪರಾಜಿತ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಇವರ ಕೃಪೆಯಿಂದಲೋ ಅಲ್ಪಸಂಖ್ಯಾತ ಮೋರ್ಚದ ಅಧ್ಯಕ್ಷರಾದ ಟಿ ಎ ಶಾನವಾಜ್ ಆದೇಶದಂತೆ ಅಲ್ಪಸಂಖ್ಯಾತ ಮೋರ್ಚದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಸ್ಗರ್ ಸತೀಶ್ ಕುಂಪಲರ ಆತ್ಮೀಯ ನಿಕಟವರ್ತಿಯಾಗಿದ್ದಾರು.
ಹಾಗಾದರೆ ಒರ್ವನನ್ನು ಪಕ್ಷದಿಂದ ಅಮಾನತು ಎಷ್ಟು ಸಮಯ, ನಂತರದ ಮಾನದಂಡಗಳೇನು.? ಎಲ್ಲಾವು ಇವರಿವರ ಇಚ್ಚೆಗಳಿಗೆ ಸೀಮಿತವೇ…?
ನಿಷ್ಠಾವಂತರಿಗೆ ಬೆಲೆ ಇಲ್ಲವೇ…? ಅಸ್ಗರ್ ಮುಡಿಪು ಸ್ಥಾನಕ್ಕೆ ಜಿಲ್ಲೆಯಲ್ಲಿ ಬೇರೆ ಯಾರು ಇಲ್ಲವೇ…? ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಮೂಡಿದ್ದು ಕಾರ್ಯಕರ್ತರೇ ತಮ್ಮೋಳಗೆ ಮಾತಾಡುತ್ತಿದ್ದು, ಹಿಂದುಗಳ ಭಾವನೆಗೆ ದಕ್ಕೆತಂದ ಇಂತವರ ಅಗತ್ಯ ಭಾಜಪ ಪಕ್ಷಕ್ಕಿದೆಯಾ…? ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದ್ದು ಇತ್ತ ಬೆಂಬಲಿಸಲು ಆಗದೇ ವಿರೋಧಿಸಲು ಆಗದೇ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಮಾಹಿತಿ ದೊರೆತಿದೆ. ಇದು ಪಕ್ಷಕ್ಕೆ ಮಾರಕವೇ ಪೂರಕವೇ ಎಂಬುದು ಕಾರ್ಯಕರ್ತರ ಯಕ್ಷ ಪ್ರಶ್ನೆಯಾಗಿದೆ.