ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸ್ವಸ್ತಿ ನಿಲಯದ ಬೆಳ್ತಂಗಡಿ ವಾಣಿ ಕಾಲೇಜಿನ ಉಪನ್ಯಾಸಕ ದಂಪತಿಗಳಾದ ಶ್ರೀಮತಿ ಮೀನಾಕ್ಷಿ ಮತ್ತು ಮಹಾಬಲ ಗೌಡ ಇವರ ಸುಪುತ್ರಿ ಕು.ಪ್ರಾಪ್ತಿ ಎಂ ಗೌಡ ಇವರು ನೃತ್ಯ ಕಲೆ ಹಾಗೂ ಭಾಷಣ ಕಲೆಯಲ್ಲಿ ಸಾಧನೆಯನ್ನು ಮಾಡಿ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಗಳಿಸಿದ್ದು ಇವರ ಈ ಸಾಧನೆಯನ್ನು ಗುರುತಿಸಿ ಟ್ರಸ್ಟ್ ನ ವತಿಯಿಂದ ಗೌರವ ಪೂರ್ವಕ ಪ್ರತಿಭಾ ಸನ್ಮಾನ 2026 ಅಭಿನಂದನೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ರಂಜನ್. ಜಿ ಗೌಡ, ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಗೌಡ ಬೆಳಾಲು, ಉಪಾಧ್ಯಕ್ಷರಾದ ವಸಂತ ಗೌಡ ಮರಕಡ, ಕಾರ್ಯದರ್ಶಿಯಾದ ಭರತ್ ಕುಮಾರ್, ಸ್ಥಾಪಕ ಟ್ರಸ್ಟಿ ನವೀನ್ ಬಿ. ಕೆ, ಟ್ರಸ್ಟಿ ದಿನೇಶ್ ಕುಲೆಂಜಿರೋಡಿ ಮತ್ತು ಮನೆಯವರು ಉಪಸ್ಥಿತರಿದ್ದರು.




























