ಇಂದು ಸಂಜೆ 7.20 ಸಮಯಕ್ಕೆ ಮಂಗಳೂರಿಗೆ ಬಂದಿಳಿದ ಮೋದಿ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬೃಹತ್ ರೋಡ್ ಶೋ ಆರಂಭಗೊಂಡಿತು.
ಕೇಸರಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಂಗಳೂರಿನಲ್ಲಿ ಉಡುಪಿ ಭಾಜಪ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮೋದಿಯವರಿಗೆ ಹಾರ ಹಾಕಿ,ಸಂಸದರಾದ ನಳೀನ್ ಕುಮಾರ್ ಕಟೀಲ್ ಶಾಲು ಹಾಕಿ,ಸತೀಶ್ ಕುಂಪಲ ಪೇಟಾ ತೊಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ದೇವರ ಪ್ರಭಾವಳಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದ ರೋಡ್ ಶೋ ಆರಂಭಿಸಿದ ಮೋದಿ ತೆರೆದ ವಾಹನದಲ್ಲಿ ನರೇಂದ್ರ ಮೋದಿ,ಕ್ಯಾಪ್ಟನ್ ಬ್ರಿಜೇಶ್ ಚೌಟ,ಕೋಟಾ ಶ್ರೀನಿವಾಸ್ ಪುಜಾರಿ ಕೈ ಬೀಸಿ ಮತಯಾಚನೆ ಮಾಡಿದರು.
ಇಕ್ಕೆಲಗಳಲ್ಲಿ ಲಕ್ಷಾಂತರ ನಮೋ ಅಭಿಮಾನಿಗಳು ಜೈ ಶ್ರೀ ರಾಮ್,ನಮೋ ,ಬ್ರಿಜೇಶ್ ಚೌಟ,ಕೋಟಾರಿಗೆ ಜೈಕಾರ ಹಾಕುವ ಮೂಲಕ ಬೆಂಬಲ ಸೂಚಿಸಿದರು. ವಿಶೇಷವಾಗಿ ಸೆಲ್ಪಿಗಳಿಗೆ ಮುಗಿಬಿದ್ದ ಘಟನೆಗಳು ಕಂಡುಬರುತ್ತಿದ್ದವು.