ಬೆಳ್ತಂಗಡಿ : ಸೌತಡ್ಕ ದೇವಸ್ಥಾನದ ವಠಾರದಲ್ಲಿ ಸುತ್ತಾಡುತಿದ್ದ ಹಿಂದು ಯುವತಿ ಮತ್ತು ಮುಸ್ಲಿಂ ಯುವಕನನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಕೊಪ್ಪಳ ಮೂಲದ ಮುಸ್ಲಿಂ ಯುವಕ ಸಲೀಂ ಮತ್ತು ಬೆಂಗಳೂರು ಮೂಲದ ಹಿಂದೂ ಯುವತಿ ಕೊಕ್ಕಡದಿಂದ ರಿಕ್ಷಾದ ಮೂಲಕ ಸೌತಡ್ಕ ದೇವಸ್ಥಾನಕ್ಕೆ ಬಂದು, ಯುವಕನು ಫೋನ್ ಪೇ ಮೂಲಕ ಪಾವತಿಸಿದಾಗ ಆತನ ಹೆಸರು ಸಲೀಂ ಎಂದು ತಿಳಿದು ಕೂಡಲೇ ರಿಕ್ಷಾ ಚಾಲಕನು ಈ ವಿಷಯವನ್ನು ಹಿಂದು ಸಂಘಟನೆಗಳ ಗಮನಕ್ಕೆ ತಂದಾಗ, ಅನ್ಯಕೋಮಿನ ಜೋಡಿಗಳನ್ನು ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಜೋಡಿಯನ್ನು ಧರ್ಮಸ್ಥಳ ಠಾಣೆಯ ಪೊಲೀಸರು ಠಾಣೆಗೆ ತಂದು ವಿಚಾರಣೆ ನಡೆಸುತ್ತಿದ್ದಾರೆ.
ಜೋಡಿಯನ್ನು ಅವರ ಮನೆಯವರನ್ನು ಕರೆಯಿಸಿದೆ ನಂತರವೇ ಬಿಡಬೇಕೆಂದು ಸಂಘಟನೆಯ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.