ತೆಲಂಗಾಣ : ಸಮಾಜದಲ್ಲಿರುವ ದುಷ್ಟ ಕಣ್ಣುಗಳಿಂದ ಮಗಳನ್ನು ರಕ್ಷಣೆ ಮಾಡಬೇಕಿರುವ ತಂದೆಯೇ ಆಕೆಯ ಮೇಲೆ ದೌರ್ಜನ್ಯ ವೆಸಗಿದರೆ ಆಕೆ ಯಾರ ಬಳಿ ಹೋಗಬೇಕು. ಅಪ್ಪಾ ಬೇಡಪ್ಪಾ, ನನ್ನ ಹತ್ತಿರ ಬರಬೇಡಿ ಎಂದು ಮಗಳು ಎಷ್ಟೇ ಅಂಗಲಾಚಿದರೂ ಕೇಳದೆ ಕುಡುಕ ತಂದೆಯೊಬ್ಬ ಮದ್ಯದ ನಶೆಯಲ್ಲಿ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ತೆಲಂಗಾಣದ ನಾರಾಯಣಪೇಟೆಯಲ್ಲಿ ನಡೆದಿದೆ.
ಮರಿಕಲ್ ಮಂಡಲದ ವ್ಯಾಪ್ತಿಯಲ್ಲಿ ಜುಲೈ 25ರಂದು ಈ ಘಟನೆ ನಡೆದಿದೆ. 10 ವರ್ಷದ ಬಾಲಕಿಯನ್ನು ಚಿಕಿತ್ಸೆಗಾಗಿ ಮೆಹಬೂಬ್ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿಗೆ ಇತ್ತೀಚೆಗಷ್ಟೇ ನಾಯಿ ಕಡಿದಿತ್ತು. ಹೀಗಾಗಿ ಮುಕ್ತಲ್ನಲ್ಲಿರುವ ಸರ್ಕಾರಿ ಹಾಸ್ಟೆಲ್ನಿಂದ ಮನೆಗೆ ಮರಳಿದ್ದಳು.
ಜುಲೈ 25ರಂದು ಮಧ್ಯಾಹ್ನ ಆಕೆಯ ತಾಯಿ ದಿನಗೂಲಿ ಕೆಲಸಕ್ಕೆ ಹೋಗಿದ್ದಾಗ, ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು, ಓದಿಕೊಳ್ಳುತ್ತಿದ್ದಳು. ಆಕೆಯ ತಂದೆ ಮದ್ಯಪಾನ ಮಾಡಿದ್ದ ಮೇಕೆ ಮೇಯಿಸಿ ಹಿಂದಿರುಗಿ ಬರುವಾಗ ನಶೆಯಲ್ಲಿದ್ದ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ಅಪ್ಪಾ, ನನಗೆ ಏನೂ ಮಾಡಬೇಡಿ, ನಿಮ್ಮ ಕಾಲಿಗೆ ಬೀಳುತ್ತೇನೆ ಎಂದು ಬಾಲಕಿ ಬೇಡಿಕೊಂಡರೂ ಆ ವ್ಯಕ್ತಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಕಿರುಚಾಟವನ್ನು ಕೇಳಿದ ಸ್ಥಳೀಯರು ಮನೆಗೆ ಓಡಿ ಬಂದರು. ರಕ್ತಸ್ರಾವವಾಗುತ್ತಿದ್ದ ಬಾಲಕಿಯನ್ನು ಕಂಡು ಕೂಡಲೇ ಆಕೆಯ ತಾಯಿಗೆ ವಿಷಯ ತಲುಪಿಸಿ, ಆಸ್ಪತ್ರೆಗೆ ರವಾನಿಸಿದ್ದಾರೆ.
ಮೊದಲು ಸ್ಥಳೀಯ ವೈದ್ಯರ ಬಳಿ ಕರೆದೊಯ್ಯಲಾಯಿತು, ಬಳಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಮಾರಿಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಮಹಬೂಬ್‌ನಗರ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅಲ್ಲಿನ ವೈದ್ಯರು ಚಿಕಿತ್ಸೆಯನ್ನು ಮುಂದುವರಿಸುವ ಮೊದಲು ಪೊಲೀಸ್ ದೂರು ನೀಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ.
ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಂದೆ ತಲೆಮರೆಸಿಕೊಂಡಿದ್ದಾನೆ.