• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಜ.10ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ: 2 ಲಕ್ಷ ಜನ ಸೇರುವ ನಿರೀಕ್ಷೆ

ಜ.10ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ: 2 ಲಕ್ಷ ಜನ ಸೇರುವ ನಿರೀಕ್ಷೆ

January 8, 2026
ಪುತ್ತೂರು-ಉಪ್ಪಿನಂಗಡಿ ರಸ್ತೆ – ಜು.20ರಿಂದ ಹಾರಾಡಿ ರೈಲ್ವೇ  ಅಂಡರ್ ಪಾಸ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ

ಪುತ್ತೂರು-ಉಪ್ಪಿನಂಗಡಿ ರಸ್ತೆ – ಜು.20ರಿಂದ ಹಾರಾಡಿ ರೈಲ್ವೇ  ಅಂಡರ್ ಪಾಸ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ

July 18, 2026
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್: ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್: ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು

July 17, 2026
ಬಿ ಸಿ ರೋಡ್‌ನಲ್ಲಿ ಯುವತಿ ಹತ್ಯೆ ಪ್ರಕರಣದ ಆರೋಪಿ ಚೇತನ್ ಎಂಬಾತನ ಭಾವಚಿತ್ರವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಕೋಮು ಸೌಹಾರ್ದತೆ ಕದಡುವ ಯತ್ನ-  ಖಾತೆಗಳ ವಿರುದ್ಧ ಪ್ರಕರಣ ದಾಖಲು

ಬಿ ಸಿ ರೋಡ್‌ನಲ್ಲಿ ಯುವತಿ ಹತ್ಯೆ ಪ್ರಕರಣದ ಆರೋಪಿ ಚೇತನ್ ಎಂಬಾತನ ಭಾವಚಿತ್ರವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಕೋಮು ಸೌಹಾರ್ದತೆ ಕದಡುವ ಯತ್ನ- ಖಾತೆಗಳ ವಿರುದ್ಧ ಪ್ರಕರಣ ದಾಖಲು

July 17, 2026
ಬಿ.ಸಿ.ರೋಡ್ ಯುವತಿ ಕೊಲೆ ಪ್ರಕರಣ: ಆರೋಪಿ ಪೊಲೀಸ್ ವಶಕ್ಕೆ; ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕೊಲೆಗಡುಕ ಪ್ರೇಮಿ!- ಜಿಲ್ಲಾ ಎಸ್‌ಪಿ ಮಾಹಿತಿ

ಬಿ.ಸಿ.ರೋಡ್ ಯುವತಿ ಕೊಲೆ ಪ್ರಕರಣ: ಆರೋಪಿ ಪೊಲೀಸ್ ವಶಕ್ಕೆ; ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕೊಲೆಗಡುಕ ಪ್ರೇಮಿ!- ಜಿಲ್ಲಾ ಎಸ್‌ಪಿ ಮಾಹಿತಿ

July 17, 2026
ಬಿಸಿ ರೋಡಿನಲ್ಲಿ ಧಾರುಣವಾಗಿ ಹತ್ಯೆಯಾದ  ಲಾವಣ್ಯ ಮೃತದೇಹದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ನೀಡಿದ ಅರುಣ್ ಕುಮಾರ್ ಪುತ್ತಿಲ

ಬಿಸಿ ರೋಡಿನಲ್ಲಿ ಧಾರುಣವಾಗಿ ಹತ್ಯೆಯಾದ ಲಾವಣ್ಯ ಮೃತದೇಹದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ನೀಡಿದ ಅರುಣ್ ಕುಮಾರ್ ಪುತ್ತಿಲ

July 16, 2026
ಬಂಟ್ವಾಳ: ಲಾವಣ್ಯ ಹೆಣ್ಣು ಮಗಳ ಬರ್ಬರ ಹತ್ಯೆ ಪ್ರಕರಣ- ಜಯಕರ್ನಾಟಕ ಜನಪರ ವೇದಿಕೆ ದ.ಕ. ಜಿಲ್ಲಾ ವತಿಯಿಂದ ಖಂಡನೆ

ಬಂಟ್ವಾಳ: ಲಾವಣ್ಯ ಹೆಣ್ಣು ಮಗಳ ಬರ್ಬರ ಹತ್ಯೆ ಪ್ರಕರಣ- ಜಯಕರ್ನಾಟಕ ಜನಪರ ವೇದಿಕೆ ದ.ಕ. ಜಿಲ್ಲಾ ವತಿಯಿಂದ ಖಂಡನೆ

July 16, 2026
ಬಿಸಿ`ರೋಡ್ KSRTC ಬಸ್ ನಿಲ್ದಾಣದ ಬಳಿ ಯುವತಿಗೆ ಚೂರಿ ಇರಿತ- ಆರೋಪಿ ಪರಾರಿ

ಬಿಸಿ`ರೋಡ್ KSRTC ಬಸ್ ನಿಲ್ದಾಣದ ಬಳಿ ಯುವತಿಗೆ ಚೂರಿ ಇರಿತ- ಆರೋಪಿ ಪರಾರಿ

July 17, 2026
ಖೋಟಾ ನೋಟು ಮುದ್ರಣ ಜಾಲ ಪತ್ತೆ. ದಾಳಿ ನಡೆಸಿ 07 ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿದ ಉಪ್ಪಿನಂಗಡಿ ಠಾಣಾ ಪೊಲೀಸರು

ಖೋಟಾ ನೋಟು ಮುದ್ರಣ ಜಾಲ ಪತ್ತೆ. ದಾಳಿ ನಡೆಸಿ 07 ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿದ ಉಪ್ಪಿನಂಗಡಿ ಠಾಣಾ ಪೊಲೀಸರು

July 16, 2026
ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಬೆಳ್ತಂಗಡಿ ಮೂಲದ ಇಬ್ಬರ ಸೆರೆ-5 ಕೋಟಿ 20 ಲಕ್ಷ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ ವಶ

ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಬೆಳ್ತಂಗಡಿ ಮೂಲದ ಇಬ್ಬರ ಸೆರೆ-5 ಕೋಟಿ 20 ಲಕ್ಷ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ ವಶ

July 16, 2026
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವ ಪದವೀಧರರಿಗೆ- ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನಲ್ಲಿ 750 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವ ಪದವೀಧರರಿಗೆ- ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನಲ್ಲಿ 750 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

July 16, 2026
ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು: ಅನುದಾನ ಶೀರ್ಘರ ಬಿಡುಗಡೆಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು: ಅನುದಾನ ಶೀರ್ಘರ ಬಿಡುಗಡೆಗೆ ಶಾಸಕ ಅಶೋಕ್ ರೈ ಮನವಿ

July 16, 2026
ದ ಕ, ಉಡುಪಿ ಜಿಲ್ಲೆಯ ಕಂಬಳಕ್ಕೆ 1.15 ಕೋಟಿ  ಬಿಡುಗಡೆ: ಶಾಸಕ ಅಶೋಕ್ ರೈ

ದ ಕ, ಉಡುಪಿ ಜಿಲ್ಲೆಯ ಕಂಬಳಕ್ಕೆ 1.15 ಕೋಟಿ ಬಿಡುಗಡೆ: ಶಾಸಕ ಅಶೋಕ್ ರೈ

July 16, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Saturday, July 18, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರು-ಉಪ್ಪಿನಂಗಡಿ ರಸ್ತೆ – ಜು.20ರಿಂದ ಹಾರಾಡಿ ರೈಲ್ವೇ  ಅಂಡರ್ ಪಾಸ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ

    ಪುತ್ತೂರು-ಉಪ್ಪಿನಂಗಡಿ ರಸ್ತೆ – ಜು.20ರಿಂದ ಹಾರಾಡಿ ರೈಲ್ವೇ  ಅಂಡರ್ ಪಾಸ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ

    ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್: ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು

    ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್: ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು

    ಬಿ.ಸಿ.ರೋಡ್ ಯುವತಿ ಕೊಲೆ ಪ್ರಕರಣ: ಆರೋಪಿ ಪೊಲೀಸ್ ವಶಕ್ಕೆ; ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕೊಲೆಗಡುಕ ಪ್ರೇಮಿ!- ಜಿಲ್ಲಾ ಎಸ್‌ಪಿ ಮಾಹಿತಿ

    ಬಿ.ಸಿ.ರೋಡ್ ಯುವತಿ ಕೊಲೆ ಪ್ರಕರಣ: ಆರೋಪಿ ಪೊಲೀಸ್ ವಶಕ್ಕೆ; ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕೊಲೆಗಡುಕ ಪ್ರೇಮಿ!- ಜಿಲ್ಲಾ ಎಸ್‌ಪಿ ಮಾಹಿತಿ

    ಬಿಸಿ ರೋಡಿನಲ್ಲಿ ಧಾರುಣವಾಗಿ ಹತ್ಯೆಯಾದ  ಲಾವಣ್ಯ ಮೃತದೇಹದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ನೀಡಿದ ಅರುಣ್ ಕುಮಾರ್ ಪುತ್ತಿಲ

    ಬಿಸಿ ರೋಡಿನಲ್ಲಿ ಧಾರುಣವಾಗಿ ಹತ್ಯೆಯಾದ ಲಾವಣ್ಯ ಮೃತದೇಹದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ನೀಡಿದ ಅರುಣ್ ಕುಮಾರ್ ಪುತ್ತಿಲ

    ಬಂಟ್ವಾಳ: ಲಾವಣ್ಯ ಹೆಣ್ಣು ಮಗಳ ಬರ್ಬರ ಹತ್ಯೆ ಪ್ರಕರಣ- ಜಯಕರ್ನಾಟಕ ಜನಪರ ವೇದಿಕೆ ದ.ಕ. ಜಿಲ್ಲಾ ವತಿಯಿಂದ ಖಂಡನೆ

    ಬಂಟ್ವಾಳ: ಲಾವಣ್ಯ ಹೆಣ್ಣು ಮಗಳ ಬರ್ಬರ ಹತ್ಯೆ ಪ್ರಕರಣ- ಜಯಕರ್ನಾಟಕ ಜನಪರ ವೇದಿಕೆ ದ.ಕ. ಜಿಲ್ಲಾ ವತಿಯಿಂದ ಖಂಡನೆ

    ಬಿಸಿ`ರೋಡ್ KSRTC ಬಸ್ ನಿಲ್ದಾಣದ ಬಳಿ ಯುವತಿಗೆ ಚೂರಿ ಇರಿತ- ಆರೋಪಿ ಪರಾರಿ

    ಬಿಸಿ`ರೋಡ್ KSRTC ಬಸ್ ನಿಲ್ದಾಣದ ಬಳಿ ಯುವತಿಗೆ ಚೂರಿ ಇರಿತ- ಆರೋಪಿ ಪರಾರಿ

    ಖೋಟಾ ನೋಟು ಮುದ್ರಣ ಜಾಲ ಪತ್ತೆ. ದಾಳಿ ನಡೆಸಿ 07 ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿದ ಉಪ್ಪಿನಂಗಡಿ ಠಾಣಾ ಪೊಲೀಸರು

    ಖೋಟಾ ನೋಟು ಮುದ್ರಣ ಜಾಲ ಪತ್ತೆ. ದಾಳಿ ನಡೆಸಿ 07 ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿದ ಉಪ್ಪಿನಂಗಡಿ ಠಾಣಾ ಪೊಲೀಸರು

    ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು: ಅನುದಾನ ಶೀರ್ಘರ ಬಿಡುಗಡೆಗೆ ಶಾಸಕ ಅಶೋಕ್ ರೈ ಮನವಿ

    ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು: ಅನುದಾನ ಶೀರ್ಘರ ಬಿಡುಗಡೆಗೆ ಶಾಸಕ ಅಶೋಕ್ ರೈ ಮನವಿ

    ದ ಕ, ಉಡುಪಿ ಜಿಲ್ಲೆಯ ಕಂಬಳಕ್ಕೆ 1.15 ಕೋಟಿ  ಬಿಡುಗಡೆ: ಶಾಸಕ ಅಶೋಕ್ ರೈ

    ದ ಕ, ಉಡುಪಿ ಜಿಲ್ಲೆಯ ಕಂಬಳಕ್ಕೆ 1.15 ಕೋಟಿ ಬಿಡುಗಡೆ: ಶಾಸಕ ಅಶೋಕ್ ರೈ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಕೃಷಿ

ಜ.10ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ: 2 ಲಕ್ಷ ಜನ ಸೇರುವ ನಿರೀಕ್ಷೆ

by ಪ್ರಜಾಧ್ವನಿ ನ್ಯೂಸ್
January 8, 2026
in ಕೃಷಿ, ಜಿಲ್ಲೆ, ಪುತ್ತೂರು, ಮಂಗಳೂರು, ಮನೋರಂಜನೆ, ಲೈಫ್ ಸ್ಟೈಲ್, ಸಾಂಸ್ಕೃತಿಕ
0
ಜ.10ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ: 2 ಲಕ್ಷ ಜನ ಸೇರುವ ನಿರೀಕ್ಷೆ
71
SHARES
202
VIEWS
ShareShareShare

ಪುತ್ತೂರು: ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗದ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯನ್ನು ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಯೋಜಿಸಲಾಗಿದ್ದು. ಜ.10 ರಿಂದ 12ರ ತನಕ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಟಿಯಲ್ಲಿ ದ.ಕ.ಜಿಲ್ಲಾ ಕೃಷಿಕ ಸಮಾಜ ಮತ್ತು ಕೃಷಿ ಮೇಳದ ಅಧ್ಯಕ್ಷ ವಿಜಯ ಕುಮಾರ್ ರೈ ಅವರು ಮಾತನಾಡಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಕೇಂದ್ರ, ರೈತ ಕುಡ್ಲ ಪ್ರತಿಷ್ಠಾನದ ಸಹಯೋಗದಲ್ಲಿ ಕೃಷಿ ಮೇಳ ಮತ್ತು ಸಸ್ಯ ಜಾತ್ರೆ ನಡೆಯಲಿದ್ದು, ಸುಮಾರು 200ಕ್ಕೂ ಮಿಕ್ಕಿ ಕೃಷಿ, ಇನ್ನಿತರ ಚಟುವಟಿಕೆಗಳ ಪ್ರದರ್ಶನ ಮತ್ತು ವ್ಯಾಪಾರ ಮಳಿಗೆಗಳ ಸ್ಟಾಲ್‌ಗಳು ಇರಲಿದೆ, ಮೇಳದಲ್ಲಿ ಮಾಹಿತಿ ಗೋಷ್ಠಿಗಳು, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಸುಮಾರು 2 ಲಕ್ಷಕ್ಕೂ ಮಿಕ್ಕಿ ಕೃಷಿಕರು ಸಾರ್ವಜನಿಕರು ಭಾಗವಹಿಸಲಿದ್ದಾರೆ.

ಜ.10ರಂದು ಬೆಳಗ್ಗೆ ಗಂಟೆ 10ಕ್ಕೆ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಕೃಷಿ ಸಚಿವರು ಮತ್ತು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷರೂ ಆಗಿರುವ ಚೆಲುವರಾಯ ಸ್ವಾಮಿ ಅವರು ಕೃಷಿಮೇಳ ಮತ್ತು ಜಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ನಗರದ ಮಹದೇವಪ್ಪ ಅವರು ಕೃಷಿ ಧ್ವಜಾರೋಹಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ| ಬ್ರಿಜೇಶ್ ಚೌಟ, ರಾಜ್ಯ ಸಭಾ ಸದಸ್ಯ ಡಾ. ಡಿ.ವಿರೇಂದ್ರ ಹೆಗಡೆ, ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಜ.10ರಂದು ಮೇಳದಲ್ಲಿ ಮಧ್ಯಾಹ್ನ 2.30 ರಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಮಾಹಿತಿ ಗೋಷ್ಠಿಯಲ್ಲಿ ಗೇರುಕೃಷಿ – ತಾಂತ್ರಿಕತೆಗಳ ಕುರಿತು ಡಿ.ಸಿ.ಆರ್ ವಿಜ್ಞಾನಿ ಮತ್ತು ಪ್ರಶಸ್ತಿ ಪುರಸ್ಕೃತ ಗೇರುಕೃಷಿಕ ಕಡಮಜಲು ಸುಭಾಷ್ ರೈ ಅವರು ಮಾಹಿತಿ ನೀಡಲಿದ್ದಾರೆ. ಜ.11ರಂದು ಬೆಳಿಗ್ಗೆ ಗಂಟೆ 10 ರಿಂದ ಅಡಿಕೆ ಮತ್ತು ಕಾಳುಮೆಣಸಿನ ಬೆಳೆಗಳಲ್ಲಿ ನೂತನ ತಾಂತ್ರಿಕತೆಗಳು ಮತ್ತು ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಸಿಪಿಸಿಆರ್‌ಐ ವಿಟ್ಲದ ವಿಜ್ಞಾನಿಗಳು, ಕಾಳುಮೆಣಸು ಕೃಷಿಕ ಸಾಧಕ ಸುರೇಶ್ ಭಟ್ ಬಲ್ನಾಡು, ಪಲ್ಲತ್ತಡ್ಕ ಅನಂತರಾಮ ಕೃಷ್ಣ, ಮಾಹಿತಿ ನೀಡಲಿದ್ದರೆ. ಮದ್ಯಾಹ್ನ ಗಂಟೆ 2.30ರಿಂದ ಕಾಫಿ, ಹಣ್ಣು ಹಾಗು ಇನ್ನಿತರ ಪರ್ಯಾಯ ಬೆಳೆಗಳ ಕುರಿತು ಚಟ್ಟಳ್ಳಿ ಕಾಫಿಬೋರ್ಡ್‌ನ ವಿಜ್ಞಾನಿ, ಕಾಫಿ ಬೆಳೆ, ಕಾಳುಮೆಣಸು ಕೃಷಿಕ ಅಜಿತ್ ಪ್ರಸಾದ್ ರೈ, ಚಂದ್ರಶೇಖರ ತಾಳ್ತಜೆ, ಹಣ್ಣಿನ ಬೆಳೆಗಳ ಕೃಷಿಕ ಕೆ.ಪಿ.ಮಹಮ್ಮದ್ ಸಾದಿಕ್ ಅವರು ಮಾಹಿತಿ ನೀಡಲಿದ್ದಾರೆ. ಜ.12ರಂದು ಬೆಳಗ್ಗೆ ಗಂಟೆ 10 ರಿಂದ ಭತ್ತದ ಕೃಷಿ ಮತ್ತು ಮಣ್ಣು ಪರೀಕ್ಷೆಯ ಮಹತ್ವದ ಕುರಿತು ಮಂಗಳೂರು ಕೆವಿಕೆ ವಿಜ್ಞಾನಿಗಳು, ಸಾವಯವ ಭತ್ತದ ಕೃಷಿಕ ಎ ಪಿ ಸದಾಶಿವ ಮರಿಕೆ ಅವರು ಸಂಪನ್ಮೂಲ ವಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿಜಯ ಕುಮಾರ್ ರೈ ತಿಳಿಸಿದರು.

ಜ.10ರಂದು ಬೆಳಿಗ್ಗೆ ಗಂಟೆ9.30 ರಿಂದ ಜಯದೀಪ್ ರೈ ಕೋರಂಗ ಸಾರಥ್ಯದ ಟೀಂ ಮಂಜುಶ್ರೀ ತಂಡದಿಂದ ಗಾನ ವೈಭವ, ಸಂಜೆ ಗಂಟೆ 5.30 ರಿಂದ ನೃತ್ಯ ಸಂಗಮ ಮತ್ತು ಮಂಗಳೂರು ಗಾನ ನೃತ್ಯ ಅಕಾಡೆಮಿಯಿಂದ ನೃತ್ಯರೂಪಕ ‘ಸತ್ಯಮೇವ ಜಯತೇ’ ನಡೆಯಲಿದೆ. ಜ.11ರಂದು ಸಂಜೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಗುರುಪ್ರಿಯಾ ಶಿವಾನಂದ ಕಾಮತ್ ನಿರ್ದೇಶನದಲ್ಲಿ ಗಾಯಕ, ನಿರೂಪಕರ ಸಮ್ಮಿಲನ ಮತ್ತು ಗುರುಕುಲ ಕಲಾಕೇಂದ್ರ ಪುರುಷರಕಟ್ಟೆ ಇದರ ವಿದ್ಯಾರ್ಥಿಗಳಿಂದ ಗಾನ ನೃತ್ಯ ಸಂಭ್ರಮ ನಡೆಯಲಿದೆ ಎಂದು ವಿಜಯ ಕುಮಾರ್ ರೈ ಅವರು ತಿಳಿಸಿದರು.

ಜ.12ರಂದು ಮಧ್ಯಾಹ್ನ ಗಂಟೆ 2.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ರಮಾನಾಥ ರೈ, ಆಳ್ವಾಸ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ, ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಕೆ.ಎಂ.ಎಫ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಸಹಿತ ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿಜಯ ಕುಮಾರ್ ರೈ ಹೇಳಿದರು.

ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯಲ್ಲಿ ಕೃಷಿಗೆ ಸಂಬಂಧಿಸಿದ ಹಲವು ಪ್ರದರ್ಶನಗಳು ಇವೆ. ಸುಮಾರು 40 ಮಳಿಗೆಗಳಲ್ಲಿ ವಿವಿಧ ಇಲಾಖೆಗಳ ಮಾಹಿತಿ ಪ್ರದರ್ಶನಗಳು ಇರಲಿದೆ. ಜಾನುವಾರು ಪ್ರದರ್ಶನ ನಡೆಯಲಿದೆ. ಯಂತ್ರೋಪಕರಣ, ಸಸಿಗಳ ವಿವಿಧ ತಳಿಯ ಬೀಜಗಳು, ರಸಗೊಬ್ಬರಗಳ ಮಳಿಗೆಗಳಿರಲಿದೆ. ಮಡಿಕೆ ತಯಾರಿಕೆ, ಬೆಲ್ಲ ತಯಾರಿ, ಕೃಷಿ ಉಪಕರಣಕ್ಕೆ ಬೇಕಾದ ಕತ್ತಿ ತಯಾರಿಕೆಯ ಪ್ರಾತ್ಯಕ್ಷಿಕೆ ಸಹಿತ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ. ಆರಂಭದ ದಿನ ಚಿತ್ರಕಲಾ ಸ್ಪರ್ಧೆಗಳು ನಡೆಯಲಿದೆ. ಅದೇ ರೀತಿ ಹಾಲು ಕರೆಯುವ ಸ್ಪರ್ಧೆಗಳು ನಡೆಯಲಿದೆ ಎಂದು ದ.ಕ.ಜಿಲ್ಲಾ ಕೃಷಿಕ ಸಮಾಜ ಮತ್ತು ಕೃಷಿಮೇಳದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷ ಚಂದ್ರಕೋಲ್ಚಾರ್, ಕೋಶಾಧಿಕಾರಿ ಕುಸುಮಾಧರ ಎ.ಟಿ, ಜಿಲ್ಲಾ ನಿರ್ದೇಶಕ ಮಹೇಶ್ ಕೆ ಸವಣೂರು ಉಪಸ್ಥಿತರಿದ್ದರು.

ashwinistudioputtur

ಜಾಹೀರಾತು

ವಿವಿಧ ತಾಲೂಕುಗಳಿಂದ ಆಯ್ಕೆ ಮಾಡಿದ ಅತ್ಯುತ್ತಮ ಕೃಷಿ ಸಾಧಕರನ್ನು ಸನ್ಮಾನಿಸಲಾಗುವುದು. ಪುತ್ತೂರು ತಾಲೂಕಿಗೆ ಸಂಬಂಧಿಸಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಬಂಟ್ವಾಳ ತಾಲೂಕಿನ ಕೆ.ಪ್ರೇಮನಾಥ ಶೆಟ್ಟಿ ಕೊರ್ಯ ಬಾಳ್ತಿಲ, ಉಳ್ಳಾಲ ತಾಲೂಕಿನ ಜಿ.ಟಿ.ರಾಜಾರಾಮ ಭಟ್, ಬೆಳ್ತಂಗಡಿ ತಾಲೂಕಿನ ಕಾಂತಪ್ಪ ಪೂಜಾರಿ, ಕಡಬ ತಾಲೂಕಿನ ಅರವಿಂದ ಮುಳ್ಳಂಕೊಚ್ಚಿ, ಸುಳ್ಯ ತಾಲೂಕಿನ ಡಿ.ಎನ್. ಚಂದ್ರಶೇಖರ, ಮಂಗಳೂರು ತಾಲೂಕಿನ ಪ್ರತಿಭಾ ಹೆಗ್ಡೆ, ಮುಲ್ಕಿ ತಾಲೂಕಿನ ಪ್ರಮೀಳಾ ಎನ್ ಶೆಟ್ಟಿ, ಮೂಡಬಿದ್ರೆ ತಾಲೂಕಿನ ನಾಗಪ್ಪ ಪೂಜಾರಿಯವರನ್ನು, ಅತ್ಯುತ್ತಮ ಕೃಷಿ ಕೂಲಿ ಕಾರ್ಮಿಕ ಪುರಸ್ಕಾರವಾಗಿ ಬಂಟ್ವಾಳ ತಾಲೂಕಿನ ವೆಂಕಪ್ಪ ಬಿ ಗೋಳ್ತಮಜಲು, ಬೆಳ್ತಂಗಡಿ ತಾಲೂಕಿನ ಲಿಂಗಪ್ಪ ಮಡಿವಾಳ, ಪುತ್ತೂರು ತಾಲೂಕಿನ ಮೋಹನ್‌ದಾಸ್ ಕಾಮತ್, ಕಡಬ ತಾಲೂಕಿನ ಶೀನಪ್ಪ ಪೂಜಾರಿ ಹೊಸಮಠ, ಸುಳ್ಯ ತಾಲೂಕಿನ ತೀರ್ಥರಾಮ ಬೈತ್ತಡ್ಕ ಹಾಗು ಕೃಷಿ ಸಲಕರಣೆ ಉತ್ಪಾದಕ ಉದ್ಯಮಿ ಪುರಸ್ಕಾರದಲ್ಲಿ ಎಸ್.ಆರ್.ಕೆ.ಲ್ಯಾಡರ್‍ಸ್‌ನ ಮಾಲಕ ಕೇಶವ ಗೌಡ ಅಮೈಗುತ್ತು, ಆಕರ್ಷಣ್ ಇಡಂಸ್ಟ್ರೀಸ್‌ನ ಮಾಲಕ ಕೆ.ಪಿ.ಮಹಮ್ಮದ್ ಸಾದಿಕ್, ಬಂಇಲ ಎಸ್.ಎಂ. ಇಂಡಸ್ಟ್ರೀಸ್‌ನ ಮಾಲಕ ಪುರುಷೋತ್ತಮ ಬಿ.ಎಸ್ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭ ಜಿಲ್ಲಾ ಕೃಷಿಕ ಸಮಾಜದ ಹಿರಿಯ ಪದಾಧಿಕಾರಿಗಳಾದ ಸಂಪತ್ ಸಾಮ್ರಾಜ್ಯ, ಪಿ.ಕೆ.ರಾಜುಪೂಜಾರಿ, ಪದ್ಮರಾಜ ಬಲ್ಲಾಳ್, ಕೆ.ಕೃಷ್ಣರಾಜ್ ಹೆಗಡೆ ಅವರನ್ನು ಗೌರವಿಸಲಾಗುವುದು ಎಂದು ವಿಜಯ ಕುಮಾರ್ ರೈ ಹೇಳಿದರು

Muliya

ಜಾಹೀರಾತು

SendShare28Share
Previous Post

ಕೋಡಿಂಬಾಡಿ ಕೃಷ್ಣಗಿರಿ-ಚೀಮುಳ್ಳು ಗುಡ್ಡ ಗೇರು ನಡುತೋಪುನಲ್ಲಿ ಬೆಂಕಿ ಅವಘಡ

Next Post

ಪುಂಜಾಲಕಟ್ಟೆ – ಪುರಿಯ ರಸ್ತೆ ನಿರ್ಮಾಣಕ್ಕೆ ರೂ. 50ಲಕ್ಷ ಅನುದಾನ ಮಂಜೂರು: ಹರೀಶ್ ಪೂಂಜ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುಂಜಾಲಕಟ್ಟೆ – ಪುರಿಯ ರಸ್ತೆ ನಿರ್ಮಾಣಕ್ಕೆ ರೂ. 50ಲಕ್ಷ  ಅನುದಾನ ಮಂಜೂರು: ಹರೀಶ್ ಪೂಂಜ

ಪುಂಜಾಲಕಟ್ಟೆ - ಪುರಿಯ ರಸ್ತೆ ನಿರ್ಮಾಣಕ್ಕೆ ರೂ. 50ಲಕ್ಷ ಅನುದಾನ ಮಂಜೂರು: ಹರೀಶ್ ಪೂಂಜ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..