ಪುತ್ತೂರು: ಹಿಂದೂ ಧರ್ಮವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು,ಹಿಂದೂ ಧರ್ಮವು ವಿಶಾಲ ದೃಷ್ಟಿಕೋನ ಹೊಂದಿದ್ದು, ನಮ್ಮ ಸನಾತನ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಹಾಗೂ ಸಮಾಜದ ಏಕತೆ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಪ್ರಜ್ಞೆ, ರಾಷ್ಟ್ರೀಯ ಪ್ರಜ್ಞೆ ಹಾಗೂ ಧಾರ್ಮಿಕ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಧ್ಯೇಯವಾಗಿರಲಿಯೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಶತಾಬ್ದಿ ಕಾರ್ಯಕ್ರಮದ ಅಂಗವಾಗಿ ಪ್ರತಿಯೊಂದು ಗ್ರಾಮ ತಾಲೂಕು ಮಟ್ಟದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ರೋಹಿತ್ ಕುಮಾರ್ ಮಂಗಳೂರು ಹೇಳಿದರು.
ಅವರು ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿ ಪುತ್ತೂರು ಗ್ರಾಮಾಂತರ ತಾಲೂಕು ಕೊಡಿಂಬಾಡಿ ಮಂಡಲದ ವತಿಯಿಂದ ನಡೆದ ಬ್ರಹತ್ ಶೋಭಯಾತ್ರೆ ಹಾಗೂ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಡಿoಬಾಡಿ ವಿನಾಯಕ ನಗರದ ಮಹಿಷಮರ್ದಿನಿ ದೇವಸ್ಥಾನ ದ್ವಾರದಿಂದ ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಆವರಣದವರೆಗೆ ಶೋಭಯಾತ್ರೆ ನಡೆಯಿತು.ಬಳಿಕ ಸ್ಥಳೀಯ ಕಲಾವಿದರಾದ ವೈಶಾಲಿ ಕುಂದರ್, ಸ್ವಪ್ನ ನೆಕ್ಕಿಲಾಡಿ ಇವರಿಂದ ದೇಶಭಕ್ತಿ ಗೀತೆ, ರಾಷ್ಟ್ರ ಭಕ್ತಿ ಗೀತೆ ನಡೆಯಿತು. ಸಭಾವೇದಿಕೆಯಲ್ಲಿ ಉದಯೋಣ್ಮುಕ ಚಿತ್ರಗಾರ ಸುಜಿತ್ ಶಾಂತಿನಗರ ಸಂಘ ಶತಾಬ್ದಿಯ ಚಿತ್ರ ರಚಿಸಿ ಗಮನಸೆಳೆದರು.
ಬಳಿಕ ನಡೆದ ಹಿಂದೂ ಸಂಗಮ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿಯ ಸಂಯ್ಯೋಜಕರಾದ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಯನ್ ನೆಕ್ಕಿಲಾಡಿ ದೀಪ ಪ್ರಜ್ವಲನೆ ಮಾಡಿದರು. ವೇದಿಕೆಯಲ್ಲಿ ಮನೋಹರ್. ಯಚ್, ಗ್ರಾಮೀಣ ನೀರು ನೈರ್ಮಲ್ಯ ಇಲಾಖೆಯ ನಿವೃತ್ತ ಅಧಿಕಾರಿ ಹಾಗೂ ಭುವನೇಶ್ವರಿ ನಾಗೇಶ್ ಶರ್ಮ ಮಠಂತಬೆಟ್ಟು,ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣ ಗೌಡ ಗೊಂಡೆಲೆ ಉಪಸ್ಥಿತರಿದ್ದರು.
ನಿಶಿತ್ ಬೊಲ್ಲಾರ್ ಪ್ರಾರ್ಥಿಸಿದರು. ಮೋಹನ್ ಪಕ್ಕಳ ಕುಂಡಾಪು ಸ್ವಾಗತಿಸಿ, ರತ್ನಾಕರ ಇಪ್ಪನೋಟ್ಟು ವಂದಿಸಿದರು.ಕುಮಾರನಾಥ್ ಪಲ್ಲತ್ತಾರು ದೀಕ್ಷಿತ್ ಬೆಳ್ಳಿಪ್ಪಾಡಿ, ಗಿರೀಶ್ ಅಲಿಮೆ ಜೀವನ್ ಶಾಂತಿನಗರ, ಪ್ರಶಾಂತ್ ನೆಕ್ಕಿಲಾಡಿ, ಮೋನಪ್ಪ ಗೌಡ ಪಿಲಿಗುಂಡ, ಅನೀಶ್ ಉಬಾರ್ ಹಾಗೂ ರಾಜೇಶ್ ಶಾಂತಿನಗರ ಹಾಗೂ ಸಚಿನ್ ಜೈನ್ ಹಳೆಯೂರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

























