ಪುತ್ತೂರು: ಸತ್ಯನಾರಾಯಣ ಪೂಜಾ ಸಮಿತಿ ಕೋಡಿಂಬಾಡಿ ಹಾಗೂ ಧರ್ಮಶ್ರೀ ಭಜನಾ ಮಂದಿರ ಕೋಡಿಂಬಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಕೋಡಿಂಬಾಡಿ ಅಶ್ವಥ ಕಟ್ಟೆಯಲ್ಲಿ 8 ನೇ ವರ್ಷದ ಸಾರ್ವಜನಿಕ ಶ್ರೀ ಅಶ್ವತ್ಥ ಪೂಜೆ, 48 ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ (ವೃತ) ಪೂಜೆ ಹಾಗೂ 19 ನೇ ವರ್ಷದ ಭಜನಾ ಮಂಗಳೋತ್ಸವ ನಡೆಯಲಿದೆ.
ಫೆಬ್ರವರಿ 7 ರಂದು ಬೆಳಗ್ಗೆ 6 ಗಂಟೆಗೆ ಏಕಾಹ ಭಜನಾ ಸಂಕೀರ್ತನೆ ಪ್ರಾರಂಭಗೊಂಡು ಮಧ್ಯಾಹ್ನ ಅಶ್ವತ್ಥ ಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6.30 ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಫೆಬ್ರವರಿ 8 ರಂದು ಬೆಳಗ್ಗೆ 6 ಗಂಟೆಗೆ ಭಜನಾ ಮಂಗಳೋತ್ಸವ ನಡೆಯಲಿದೆ ಎಂದು ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಧರ್ಮಶ್ರೀ ಭಜನಾ ಮಂದಿರದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























