ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಐನೆಕೀದು ಸೊಸೈಟಿ ಬಳಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಘಟನೆಯ ಕಾರ್ಯಕರ್ತರ ಸಭೆಯನ್ನು 10.02 .2026ನೆಯ ಮಂಗಳವಾರ ಕರೆಯಲಾಗಿತು ಕಡಬ ಬೆಳ್ತಂಗಡಿ ಸುಳ್ಯ ತಾಲೂಕಿನ ಕಾರ್ಯಕರ್ತರು ಭಾಗವಹಿಸಿದ್ದರು ಈ ಸಭೆಯಲ್ಲಿ ರೈತರಿಗೆ ಸಿಗದ ಬೆಳೆ ವಿಮೆ ಕಾಡು ಪ್ರಾಣಿ ಆನೆ ಗಳಿಂದ ಕೃಷಿ ನಾಶ ಬಗ್ಗೆ ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ ಪರಿಹಾರಕ್ಕೆ ಚರ್ಚೆ ನಡೆಸಲಾಯಿತು.
ಜನಹಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ ಪ್ರಮುಖರಾದ ಅಶೋಕ್ ಕುಮಾರ್ ಮೂಳೆಮಜಲು ಜಯಪ್ರಕಾಶ್ ಕುಜುಗೋಡು ಈಶ್ವರ್ ಗೌಡ ಅರಂಪಡಿ ಮಿಲನ್ ಬಾಳಿಕಳ ಮತ್ತು ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.


























