ಮಂಗಳೂರು: ಪ್ರತ್ಯೇಕ ಮಳೆ ಅವಘಡಗಳಲ್ಲಿ ಸಿಡಿಲು ಬಡಿದು ನವ ವಿವಾಹಿತ ಮೃತಪಟ್ಟು, ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನವವಿವಾಹಿತ ಮೃತಪಟ್ಟಿದ್ದರೆ,
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯದ ಗ್ರಾಮದ ಪರ್ವತಮುಖಿಯಲ್ಲಿ ಸಿಡಿಲು ಬಡಿದು ಸೋಮಸುಂದರ್ (34) ಸಾವು ಮೃತಪಟ್ಟಿದ್ದಾನೆ. ಈತ ಹತ್ತು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ. ಸಂಜೆ ವೇಳೆ ಸುಬ್ರಮಣ್ಯ ಭಾಗದಲ್ಲಿ ಗುಡುಗು ಸಿಡಿಲು ಸಹಿತ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮನೆ ಅಂಗಳದಲ್ಲಿ ಅಡಿಕೆಯನ್ನು ಯುವಕ ರಾಶಿ ಮಾಡುತ್ತಿದ್ದ. ಈ ವೇಳೆ ಸೋಮ ಸುಂದರ್ಗೆ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾನೆ.