ಪುತ್ತೂರು: ನೆಹರುನಗರ ಸಮೀಪದ ಮಂಜಲ್ಪಡ್ಪುವಿನಲ್ಲಿ ಶನಿವಾರ ಮಧ್ಯಾಹ್ನ ಸರಣಿ ಅಪಘಾತ ಸಂಭವಿಸಿದೆ. ಆಲ್ಟೋ, ಸ್ವಿಫ್ಟ್ ಕಾರು ಹಾಗೂ ಟ್ಯಾಂಕರ್ ಲಾರಿ ಒಂದಕ್ಕೊಂದು ಢಿಕ್ಕಿಯಾಗಿದೆ.
ನಯಾರಾ ಕಂಪೆನಿಯ ಟ್ಯಾಂಕರ್ ಲಾರಿ ಮುಂಭಾಗದಲ್ಲಿ ಸ್ವಿಫ್ಟ್ ಕಾರು, ಅದರ ಮುಂಭಾಗದಲ್ಲಿ ಆಲ್ಟೋ ಕಾರು ಢಿಕ್ಕಿಯಾಗಿದೆ. ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಜಲ್ಪಡ್ಪು ಮುರದ ವರೆಗೆ ಅಪಘಾತ ವಲಯವಾಗಿದೆ ಇಲ್ಲಿ ಜನ ಸಂಚಾರ ಜಾಸ್ತಿ ಇರುದರಿಂದ ಅಪಘಾತಗಳು ಜಾಸ್ತಿ.



























