ಪುತ್ತೂರು : ಚಿನ್ನದ ಕಸೂತಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಆಚಾರ್ಯ(35ವ) ಎಂಬವರು ಮೇ 31ರಂದು ಹೃದಯಾಘಾತದಿಂದ ನಿಧನರಾದರು.
ನಿಡ್ಪಳ್ಳಿ ಮೂಲದವರಾದ ಭಾಸ್ಕರ್ ಆಚಾರ್ಯ ಕೂರ್ನಡ್ಕ ಮದಕದ ಆರಾಧ್ಯ ಲೇ ಔಟ್‌ನಲ್ಲಿ ಬೆಳಗ್ಗೆ ಎದೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.
ಭಾಸ್ಕರ್ ಆಚಾರ್ಯ ಅವರು ಬಹಳ ಹಿಂದೆ ಹಿಂದೂ ಜಾಗರಣ ವೇದಿಕೆ ಪುತ್ತೂರು ನಗರ ಸಂಚಾಲಕರಾಗಿಯೂ ಸೆವೆ ಸಲ್ಲಿಸಿದ್ದರು. ಮೃತರು ಪತ್ನಿ ರಕ್ಷಿತಾ, ತಾಯಿ ಸುನಂದಾ, ಓರ್ವ ಸಹೋದರ, ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಮೃತರ ಅಂತಿಮ ವಿಧಿವಿಧಾನಗಳನ್ನು ಜೂ.1ರಂದು ಪುತ್ತೂರು ಮಡಿವಾಳಕಟ್ಟೆ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


























