ಪುತ್ತೂರು: ಬನ್ನೂರು ಗ್ರಾಮದ ಒಕ್ಕಲಿಗ ಸಂಘದ ಅಧ್ಯಕ್ಷ ಭಾರತೀಯ ಜನತಾ ಪಾರ್ಟಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಬನ್ನೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಹಾಗೂ ಹಲವು ವರ್ಷಗಳಿಂದ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದ ಶ್ರೀ ಸೂರಜ್ ಗೋಳ್ತಿಲ ಅವರು ಹೃದಯಾಘಾತದಿಂದ ನಿಧನ.
ಬಿಜೆಪಿ ಪಕ್ಷದ ಯಾವುದೇ ಕಾರ್ಯಕ್ರಮ, ಹೋರಾಟ, ಪ್ರತಿಭಟನೆ, ಸದಸ್ಯತ್ವ ಅಭಿಯಾನ, ಬೂತ್ ಸಂಪರ್ಕ ಕಾರ್ಯಕ್ರಮ ಸೇರಿದಂತೆ ಎಲ್ಲ ಸಂಘಟನಾ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದ್ದರು. ಪಕ್ಷದ ಕರೆಯೊಂದಿಗೆ ತಕ್ಷಣ ಸ್ಪಂದಿಸಿ ತಮ್ಮನ್ನು ಸಂಪೂರ್ಣವಾಗಿ ಪಕ್ಷದ ಕಾರ್ಯಗಳಿಗೆ ಸಮರ್ಪಿಸಿಕೊಂಡಿದ್ದರು.

























