ಸುಳ್ಯ: ತಾರೀಕು 30.07.2026ನೆಯ ಗುರುವಾರ ಅಪರಾಹ್ನ 3:00 ಗಂಟೆಗೆ ಐನೆಕೀದು ಶಾಲೆಯಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಘಟನೆಯು ಸಾಮಾಜಿಕ ಅರಿವು ಕಾರ್ಯಕ್ರಮ ಏರ್ಪಡಿಸಿದ್ಧರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಶೋಕ್ ಕುಮಾರ್ ಮೂಲೆಮಜಲು (ನಿವೃತ್ತ ಪ್ರಾಂಶುಪಾಲರು ) “ನಾನು ಯಾರಿಗೂ ಏನನ್ನು ಬೋಧಿಸಲಾರೆ, ನಾನು ಅವರನ್ನು ಯೋಚಿಸುವಂತೆ ಮಾಡಬಲ್ಲೆ” ಎಂಬ ಶಿರೂನಾಮದ
ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಕುಮಾರಿ ಸ್ವಾಗತಿಸಿದರು ಶಾಲಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ವಿದ್ಯಾಶ್ರೀ, ಹಿರಿಯ ವಿದ್ಯಾರ್ಥಿ ಸಂಫದ ಅಧ್ಯಕ್ಷರಾದ ಶ್ರೀ ಜಯ ಪ್ರಕಾಶ್ ಕೂಜುಗೋಡು,ಹಿರಿಯರಾದ ಕಿಶೋರ್ ಕುಮಾರ್ ಕೂಜುಗೋಡು ಉಪಸ್ಥಿತರಿದ್ದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮತ್ತು ಪೋಷಕರು ಭಾಗವಹಿಸಿದ್ದರು.
























