ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ ಇದರ ವತಿಯಿಂದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 14ರಿಂದ 16ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೋಡಿಂಬಾಡಿಯ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆಯಲಿದೆ.
ಸೆ.14ರಂದು ಪೂರ್ವಾಹ್ನ 10ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠಾ ಪೂಜೆ ನಡೆಯಲಿದ್ದು ಮಂಗಳೂರು ಗಂಜಿಮಠದ ಬಿಗ್ಬ್ಯಾಗ್ಸ್ ಇಂಟರ್ ನ್ಯಾಶನಲ್ನ ಮುಖ್ಯಸ್ಥೆ ಮಮತಾ ಸುನೀಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪೂರ್ವಾಹ್ನ 11.30ಕ್ಕೆ ಗಣಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 1 ಗಂಟಗೆ ಎನ್.ಪಿ.ಬಿ. ಮ್ಯೂಸಿಕಲ್ಸ್ ಬೆಳ್ಳಿಪ್ಪಾಡಿ ಇವರಿಂದ ಗೀತ ಗಾಯನ ಸಂಗೀತ ರಸಮಂಜರಿ, ಸಂಜೆ 3.30ರಿಂದ ಯುವಶಕ್ತಿ ಗೆಳೆಯರ ಬಳಗ ವಿನಾಯಕನಗರ ಮತ್ತು ಶ್ರೀ ಚಿನ್ಮಯೀ ಮಹಿಳಾ ಭಜನಾ ಮಂಡಳಿ ಮಠಂತಬೆಟ್ಟು ಇವರಿಂದ ಭಜನಾ ಸೇವೆ, ಸಂಜೆ 6ರಿಂದ ಕೋಡಿಂಬಾಡಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ.
ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ. ವಾರಿಸೇನ ಜೈನ್ ಕೋಡಿಯಾಡಿಗುತ್ತು ಚಾವಡಿ ಸಭಾಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ ಕೆ. ಎಸ್., ಪುತ್ತೂರು ವಿಜಯ ಸಾಮ್ರಾಟ್ನ ಅಧ್ಯಕ್ಷ ಸಹಜ್ ರೈ ಬಳಜ್ಜ, ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ನ ಪುತ್ತೂರು ಯೋಜನಾಧಿಕಾರಿ ಶಶಿಧರ ಎಂ., ಕಂಪಾನಿಯೋ ವೆಲ್ನೆಸ್ ಸೆಂಟರ್ ಮಾಲಕ ಪ್ರಭಾಕರ ಸಾಲಿಯಾನ್ ಬಾಕಿಲಗುತ್ತು, ಕೋಡಿಂಬಾಡಿ ಹಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಸ್ಫೂರ್ತಿ ರಾಜಮಣಿ ರೈ ಮತ್ತು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯ ನಿವೃತ್ತ ಉಪ ತಹಶೀಲ್ದಾರ್ ಬಾಬು ನಾಯ್ಕ್ ಕಜೆ ಭಾಗವಹಿಸಲಿದ್ದಾರೆ. ರಾತ್ರಿ 8.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 9ರಿಂದ ತುಳಸಿ ಮತ್ತು ಕೆ. ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು, ವಿವೇಕ್ ಪಿ. ಸಾಲ್ಯಾನ್ ಮತ್ತು ಪೃಥ್ವಿ ಪಿ. ಸಾಲಿಯಾನ್ ಕೈಪ ಕೋಡಿಂಬಾಡಿ ಇವರ ಪ್ರಾಯೋಜಕತ್ವದಲ್ಲಿ ರಾಜ್ ಡಾನ್ಸ್ ಕ್ರಿಯೇಷನ್ಸ್ ಪುತ್ತೂರು ಹಾಗೂ ಟೀಮ್ ಡಾಟ್ ವಿಟ್ಲ ತಂಡದಿಂದ ಡ್ಯಾನ್ಸ್ ನೈಟ್ ಕಾರ್ಯಕ್ರಮ ನಡೆಯಲಿದೆ. ವನಿತಾ ಸಮಾಜ ಕೋಡಿಂಬಾಡಿ ಮತ್ತು ಯುವಶಕ್ತಿ ಗೆಳೆಯರ ಬಳಗ ವಿನಾಯಕ ನಗರ ಕೋಡಿಂಬಾಡಿ ಇವರು ಈ ದಿನ ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ.
ಸೆ.15ರಂದು ಪೂರ್ವಾಹ್ನ 10ರಿಂದ ವೇದಮೂರ್ತಿ ಶ್ರೀವತ್ಸ ಕೆದಿಲಾಯ ಶಿಬರ ಅವರ ನೇತೃತ್ವದಲ್ಲಿ 108 ತೆಂಗಿನಕಾಯಿ ಗಣಯಾಗ, 11.45ಕ್ಕೆ ಗಣಯಾಗದ ಪೂರ್ಣಾಹುತಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ-ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 1ರಿಂದ ನವೀನ್ ಪಾದೆಕಲ್ಲು ಬೆಳ್ಳಿಪ್ಪಾಡಿ ಸಾರಥ್ಯದ ಸ್ಕಂದ ಮ್ಯೂಸಿಕಲ್ಸ್ ಬೆಳ್ಳಿಪ್ಪಾಡಿ ಮತ್ತು ತಂಡದವರಿಂದ ಸ್ವರ ಸಂಗಮ ಸಂಗೀತ ರಸಮಂಜರಿ, ಸಂಜೆ 4.15ರಿಂದ ಧರ್ಮಶ್ರೀ ಭಜನಾ ಮಂಡಳಿ ಅಶ್ವತ್ಥಕಟ್ಟೆ ಕೋಡಿಂಬಾಡಿ ಇವರಿಂದ ಭಜನಾ ಸೇವೆ, ಸಂಜೆ 6ರಿಂದ ಸ್ಥಳೀಯ ಕಲಾ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ರಾತ್ರಿ 7ರಿಂದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಭರತ್ ಗೌಡ ನಿಡ್ಯ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕಿರಣಚಂದ್ರ ಪುಷ್ಪಗಿರಿ, ಉದ್ಯಮಿ ಉಜ್ವಲ್ ಪ್ರಭು, ದುಬೈಯ ಉದ್ಯಮಿ ಅಜಿತ್ ಕುಮಾರ್ ಕೆ. ಆರ್. ಕೋಡಿಂಬಾಡಿ ಮತ್ತು ನಿವೃತ್ತ ಪೊಲೀಸ್ ಉಪನಿರೀಕ್ಷಕ ರುಕ್ಮಯ ನಾಯ್ಕ್ ಭಾಗವಹಿಸಲಿದ್ದಾರೆ. ರಾತ್ರಿ 8.15ಕ್ಕೆ ರಂಗಪೂಜೆ, 8.45ಕ್ಕೆ ಮಹಾಪೂಜೆ-ಪ್ರಸಾದ ವಿತರಣೆ, ಅನ್ನಸಂತರ್ಪಣೆ, 9ರಿಂದ ದುಬೈಯ ಉದ್ಯಮಿ ಅಜಿತ್ ಕುಮಾರ್ ಕೆ.ಆರ್. ಕೋಡಿಂಬಾಡಿ ಇವರ ಪ್ರಾಯೋಜಕತ್ವದಲ್ಲಿ ಯಶಸ್ವಿ ಕಲಾವಿದೆರ್ ಮಂಜೇಶ್ವರ ಇವರಿಂದ ಅಬ್ಬರ ತುಳು ಹಾಸ್ಯಮಯ-ಭಯಾನಕ ನಾಟಕ ನಡೆಯಲಿದೆ. ಈ ದಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೋಡಿಂಬಾಡಿ ಒಕ್ಕೂಟ ಮತ್ತು ಕೋಡಿಂಬಾಡಿಯ ಅಶ್ವತ್ಥಕಟ್ಟೆ ಧರ್ಮಶ್ರೀ ಕಲಾ ಸಂಘದವರು ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ.
ಸೆ.16ರಂದು ಬೆಳಗ್ಗೆ 10ರಿಂದ ತಿರುಪತಿ ತಿರುಮಲ ಟ್ರಸ್ಟ್ ಮಹಿಳಾ ಭಜನಾ ಮಂಡಳಿ ಬೊಳುವಾರು ಪುತ್ತೂರು ಇವರಿಂದ ಭಜನಾ ಸೇವೆ, 10.30ಕ್ಕೆ ಗಣಹೋಮ, 11-30ಕ್ಕೆ ಅಶ್ವತ್ಥ ಪೂಜೆ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 3.15ಕ್ಕೆ ವಿಸರ್ಜನಾ ಪೂಜೆ, ಸಂಜೆ 4ರಿಂದ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ರಾಜಶ್ರೀ ಭಜನಾ ಮಂಡಳಿ ಅಂಬೆಲ ನೆಕ್ಕಿಲಾಡಿ, ಮದಗಶ್ರೀ ಭಜನಾ ಮಂಡಳಿ ಪಡ್ನೂರು, ಮಹಾದೇವಿ ಭಜನಾ ಮಂಡಳಿ ಕಬಕ, ರಾಜರಾಜೇಶ್ವರಿ ಭಜನಾ ಮಂಡಳಿ ಶಿವಾರು, ಸಿದ್ಧಿವಿನಾಯಕ ಭಜನಾ ಮಂಡಳಿ ಸಿದ್ಧಿವಿನಾಯಕ ಬೆಟ್ಟ ಗೋಳಿತೊಟ್ಟು ಮತ್ತು ವೀರಮಾರುತಿ ಭಜನಾ ಮಂಡಳಿ ಪುಳುವಾರು ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ. ಧರ್ಮಶ್ರೀ ಭಜನಾ ಮಂಡಳಿ ಮತ್ತು ಧರ್ಮಶ್ರೀ ಕಲಾ ಸಂಘ ಅಶ್ವತ್ಥಕಟ್ಟೆ ಕೋಡಿಂಬಾಡಿ ಇವರು ಪ್ರಾಯೋಜಕತ್ವ ವಹಿಸಲಿದ್ದಾರೆ. ವಿವಿಧ ಕಲಾತಂಡಗಳ ಆಕರ್ಷಕ ಸ್ಥಬ್ಧಚಿತ್ರಗಳೊಂದಿಗೆ ಶ್ರೀ ಮಹಾಗಣಪತಿಯ ಶೋಭಾಯಾತ್ರೆ ಕೋಡಿಂಬಾಡಿ ಅಶ್ವತ್ಥಕಟ್ಟೆಯ ವಠಾರದಿಂದ ಹೊರಟು ಸೇಡಿಯಾಪು, ದಾರಂದಕುಕ್ಕುವರೆಗೆ ಸಾಗಿ ಮರಳಿ ಕೋಡಿಂಬಾಡಿ ವಿನಾಯಕ ನಗರದಿಂದಾಗಿ ಮಠದಬೆಟ್ಟು ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯಿಂದ ಹಿಂತಿರುಗಿ ಶ್ರೀ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದವರೆಗೆ ಸಾಗಿ ಗಣೇಶ್ ಸೇಡಿಯಾಪು ಇವರ ಎಸ್.ಎನ್. ಕ್ರೇನ್ ಮೂಲಕ ಶಾಂತಿನಗರ ಮೈದಾನದಲ್ಲಿ ಗಣೇಶನ ವಿಗ್ರಹದ ಜಲಸ್ಥಂಭನ ನಡೆಯಲಿದೆ. ಕೋಡಿಂಬಾಡಿ ಅಶ್ವತ್ಥಕಟ್ಟೆ ಶ್ರೀ ಧರ್ಮಶ್ರೀ ಕಲಾ ಸಂಘ ಮತ್ತು ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯವರು ಸಹಕರಿಸಲಿದ್ದಾರೆ. ಈ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇಡಿಯಾಪು ಒಕ್ಕೂಟದವರು ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ.
























