ಪುತ್ತೂರುರಿನ ಪ್ರಮುಖ ರಸ್ತೆ ಯಾದ ಪುತ್ತೂರು -ಉಪ್ಪಿನಂಗಡಿ ರಸ್ತೆ ಮತ್ತು ಪುತ್ತೂರು – ರಾಜ್ಯ ಹೆದ್ದಾರಿ ಯ ಕೆಲವು ಕಡೆ ಸಂಚಾರಕ್ಕೆ ತೊಂದರೆ ಯಾಗುತ್ತಿದ್ದು 34ನೇ ನೆಕ್ಕಿಲಾಡಿ, ವನಸುಮ ನರ್ಸರಿ ಬಳಿ ದೊಡ್ಡದಾದ ಹಾಗೂ ಅಪಾಯಕಾರಿ ಹೊಂಡಗಳು ನಿರ್ಮಾಣವಾಗಿದೆ ಹಾಗೂ ಪುತ್ತೂರು–ಸುಬ್ರಹ್ಮಣ್ಯ ರಸ್ತೆಯ ಬೆದ್ರಾಳ ರಸ್ತೆಯಲ್ಲಿ ವರ್ಷದಲ್ಲಿ 3 ಬಾರಿ ಇಂಟರ್ಲಾಕ್ ದುರಸ್ತಿ ಕೆಲಸ ನಡೆದು ಇದೀಗ 15 ದಿನಗಳಿಂದ ಬ್ಯಾರಿಕೇಡ್ ಅಡ್ಡವಾಗಿ ಇಟ್ಟು ಯಾವುದೇ ರೀತಿಯ ಕೆಲಸ ಪ್ರಾರಂಭವಾಗದ ಕುರಿತು ಕೂಡಲೇ ತಾತ್ಕಾಲಿಕ ರಿಪೇರಿ ಕೆಲಸವನ್ನು ಪ್ರಾರಂಭಿಸುವಂತೆ ಮನವಿ ಮಾಡಲಾಯಿತು.
ಮಳೆಗಾಲ ನಿಂತ ಕೂಡಲೇ ಇಂಟರ್ಲಾಕ್ ತೆರವುಗೊಳಿಸಿ ಶಾಶ್ವತ(ಕಾಂಕ್ರೀಟ್ / ಡಾಂಬರು)ರಸ್ತೆ ಮಾಡುವಂತೆ ಹಾಗೂ ಬೆದ್ರಾಳದಿಂದ-ಸರ್ವೆಯ ವರೆಗೆ ರಸ್ತೆಯಲ್ಲಿ ಬಿದ್ದಿರುವ ಅಪಾಯಕಾರಿ ಹೊಂಡಗಳನ್ನು ಕೂಡಲೇ ಮುಚ್ಚುವಂತೆ ಹಾಗೂ ರಸ್ತೆ ಬದಿಯ ಮೋರಿಗಳನ್ನು ಪೂರ್ಣಗೊಳಿಸುವಂತೆ .
ಬೆದ್ರಾಳದಿಂದ-ಸರ್ವೆಯ ವರೆಗೆ ರಸ್ತೆಯಲ್ಲಿ ಬಿದ್ದಿರುವ ಅಪಾಯಕಾರಿ ಹೊಂಡಗಳನ್ನು ಕೂಡಲೇ ಮುಚ್ಚುವಂತೆ ಹಾಗೂ ಮೋರಿಯಲ್ಲಿ ಹರಿಯುವ ನೀರು ನೇರವಾಗಿ ರಸ್ತೆಗೆ ಬರುವ ಕಾರಣ ರಸ್ತೆ ಬದಿಯ ಮೋರಿಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ಮನವಿ ಮಾಡಲಾಯಿತು
ಮಳೆ ಬಂದಾಗ ಹೊಂಡಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ವಾಹನ ಸವಾರರಿಗೆ ಹೊಂಡಗಳು ಸರಿಯಾಗಿ ಕಾಣದೆ ಅಪಘಾತ ಸಂಭವಿಸುವ ಅಪಾಯ ಹೆಚ್ಚಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಸಮಸ್ಯೆಯನ್ನು ತಕ್ಷಣ ಪರಿಹರಿಸುವ ಅಗತ್ಯವಿದೆ. ರಸ್ತೆಗಳಲ್ಲಿ ಕೆಲವು ಕಡೆ ಸಾರ್ವಜನಿಕರು ರಸ್ತೆಯಲ್ಲಿ ಸಂಕಷ್ಟ ಪಡುತಿದ್ದು ಬೋಲ್ವಾರ್ ಮೂಲಕ ಬಸ್ ಗಳು ಘನ ವಾಹನಗಳು ಹೋಗಲು ಅವಕಾಶವಿಲ್ಲ ವಾದದರಿಂದ ಪುತ್ತೂರು ಹೃದಯ ಭಾಗದಿಂದ ಹಾರಾಡಿ ವಾರಗಿನ ವ್ಯಾಪಾರ ಮಾಲಿಗಳಿಗೆ ಕಳೆದ ಒಂದು ತಿಂಗಳಿಂದ ನಷ್ಟ ಉಂಟಾಗಿದೆ
ಈ ಕುರಿತು PWD ಮುಖ್ಯ ಅಭಿಯಂತರರಾದ ಶ್ರೀ ರಾಜೇಶ್ ರೈ ಅವರೊಂದಿಗೆ ಚರ್ಚಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರವಾಗಿ ಹೊಂಡಗಳನ್ನು ಮುಚ್ಚಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ,ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲು,ಪ್ರಶಾಂತ್ ನೆಕ್ಕಿಲಾಡಿ,ರಾಜು ಶೆಟ್ಟಿ,ಮನೀಶ್ ಕುಲಾಲ್ ಉಪಸ್ಥಿತರಿದ್ದರು.
























