ಪುತ್ತೂರು ತಿರಂಗ ಯಾತ್ರೆ, ಬಿಜೆಪಿ ಯುವ ಮೋರ್ಚಾ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಜಂಟಿ ಪೂರ್ವಭಾವಿ ಸಭೆ. ಆಗಸ್ಟ್ 7 ರಂದು ಪುತ್ತೂರಿನಲ್ಲಿ ನಡೆಯಲಿರುವ ತಿರಂಗ ಯಾತ್ರೆಯಲ್ಲಿ ಕರ್ನಾಟಕ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಬಿ. ವೈ ವಿಜಯೇಂದ್ರ ರವರ ಉಪಸ್ಥಿತಿಯಲ್ಲಿ ನಡೆಯಲಿದ್ದು ಇದರ ಸಲುವಾಗಿ ಇಂದು ಬಿಜೆಪಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ವಹಿಸಿಕೊಂಡು ಮಾತನಾಡಿ ತಿರಂಗ ಯಾತ್ರೆಯಲ್ಲಿ ಗ್ರಾಮ ಮಟ್ಟದಿಂದ ಪ್ರತಿಯೊಬ್ಬರು ಭಾಗವಹಿಸುವುದರ ಜೊತೆಗೆ ಪುತ್ತೂರಿನಲ್ಲಿ ಸಂಘಟಿತ ಬಿಜೆಪಿಯ ಪ್ರದರ್ಶನವಾಗಬೇಕು ಜೊತೆಗೆ ಪ್ರತಿಯೊಂದು ಮೋರ್ಚಾದ ಪದಾಧಿಕಾರಿಗಳು ಈ ಯಾತ್ರೆ ಯಶಸ್ವಿಗಾಗಿ ದುಡಿಯಬೇಕು ಪ್ರತಿಯೊಬ್ಬ ಕಾರ್ಯಕ್ರರ್ತರನ್ನು ತಲುಪುವಂತೆ ತಿಳಿಸಿದರು. ಈ ಸಭೆಯಲ್ಲಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
























