ಪುತ್ತೂರು: ದುರ್ಗಾ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲ, ಬಂಟ್ವಾಳ ತಾಲೂಕು, ಪುತ್ತೂರಿನ ಭಕ್ತಾದಿಗಳಿಂದ ‘ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ. ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ 48 ದಿನಗಳ ಶ್ರೀ ಮಹಾಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯು ಜುಲೈ 12ರಿಂದ ಆಗೋಸ್ಟ್ 28 ರವರೆಗೆ ನಡೆಯಲಿದೆ. ಗೌರವಧ್ಯಕ್ಷರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯಲಿರುವ 27ನೇ ವರ್ಷದ ಶ್ರೀ ಮಹಾಲಕ್ಷ್ಮೀ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ವೃತಚಾರಣೆಯ ಪುಣ್ಯಪ್ರದಾಯಕ ಕಾರ್ಯಕ್ರಮವು 48 ದಿನಗಳ ಕಾಲ (ಒಂದು ಮಂಡಲ) ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.
ಆ ಪ್ರಯುಕ್ತ ಪುತ್ತೂರಿನ ಭಕ್ತಾದಿಗಳಿಂದ ಇದೇ ಬರುವ ಆಗೋಸ್ಟ್ 9ರಂದು ಬೆಳಿಗ್ಗೆ ಗಂಟೆ 10-30ಕ್ಕೆ ಸರಿಯಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ವಿವಿಧ ವಾಹನಗಳಲ್ಲಿ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಮಾಣಿಲ ಎನ್ನುವ ಕುಗ್ರಾಮವನ್ನು ತನ್ನ ಧೀಶಕ್ತಿಯಿಂದ ಬೆಳಗಿದ ಕರ್ಮಯೋಗಿ, ನಾಡಿನ ಆನೇಕ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶಗಳನ್ನು ನೆರವೇರಿಸಿದ ಸತ್ಕರ್ಮ ತಪಸ್ವಿ, ಭಜನೆ ಸಂಕೀರ್ತನೆ, ಸತ್ ಚಿಂತನೆಯ ಬೋಧನೆಗಳಿಂದ ಭಕ್ತರನ್ನು ಉದ್ದರಿಸಿದ ಸಂತ, ಪರಮಾಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ನಡೆಯುವ ಈ ಪುಣ್ಯಪ್ರದಾಯಕ ಕಾರ್ಯಕ್ರಮದಲ್ಲಿ ಭಕ್ತಿಯ ಸಮರ್ಪಣೆಯನ್ನು ಮಾಡುವ ಸುಯೋಗ ಪುತ್ತೂರಿನ ಭಕ್ತಾದಿಗಳಿಗೆ ಒದಗಿ ಬಂದಿದ್ದು, ಶ್ರೀ ಕ್ಷೇತ್ರದ 25ನೇ ವರ್ಷದ ಬೆಳ್ಳಿಹಬ್ಬದ ಸಂದರ್ಭದಲ್ಲಿಯೂ ಪುತ್ತೂರಿನಿಂದ ಸಮರ್ಪಿಸಲಾದ ಹೊರೆಕಾಣಿಕೆಯನ್ನು ಅಭೂತಪೂರ್ವವಾಗಿ ತಾವೆಲ್ಲರೂ ಯಶಸ್ವಿ ಮಾಡಲಾಗಿದ್ದು,
ಈ ಬಾರಿಯೂ ತಾವೆಲ್ಲರೂ ಹೆಚ್ಚಿನ ಸಹಕಾರ ನೀಡುವುದರೊಂದಿಗೆ ಹಸಿರುವಾಣಿ ಹೊರೆಕಾಣಿಕೆಯನ್ನು ಯಶಸ್ವಿಯಾಗಿಸಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ.
ಹೊರೆಕಾಣಿಕೆ ಸಂಗ್ರಹಣಾ ಕಛೇರಿ ಆಗೋಸ್ಟ್ 6ರ ಬೆಳಿಗ್ಗೆಯಿಂದ ಆಗೋಸ್ಟ್ 9ರ ಬೆಳಿಗ್ಗೆಯವರೆಗೆ ಶ್ರೀ ಶಾರದಾ ಭಜನಾ ಮಂದಿರ ಪುತ್ತೂರು ಇಲ್ಲಿ ತೆರೆದಿರುತ್ತದೆ.
ಪತ್ರಿಕಾಗೋಷ್ಟಿಯಲ್ಲಿ ಗೌರವಧ್ಯಕ್ಷರಾದ ಡಾ. ಸುರೇಶ್ ಮತ್ತೂರಾಯ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟಿ ಸೀತಾರಾಮ ರೈ ಕೆದಂಬಾಡಿಗುತ್ತು, ಅಧ್ಯಕ್ಷರಾದ ಕೃಷ್ಣ ಎಂ. ಅಳಿಕೆ, ಹಾಗೂ ನವೀನ್ ಕುಲಾಲ್, ಕುಲಾಲ ಸೇವಾ ಸಂಘ ದ ಅಧ್ಯಕ್ಷರಾದ ಸೇಸಪ್ಪ ಕುಲಾಲ್ ಉಪಸ್ಥಿರಿದ್ದರು.

























