ಪುತ್ತೂರು ಬಂದ್ ಯಶಸ್ವಿ ಪುತ್ತೂರಿನ ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ಪುತ್ತೂರು ಬಂದ್‌ಗೆ ವ್ಯಾಪಾರಸ್ಥರು ಸಂಪೂರ್ಣ ಸಹಕಾರ ನೀಡಿದ್ದಾರೆ.
ಹಿಂದೂ ಮಹಿಳೆಯ ಮೇಲೆ ನಡೆದ ಅಮಾನುಷ ಕೃತ್ಯ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಆಗ್ರಹಿಸಿ ಆಗಸ್ಟ್ 25 ರಂದು ಬಂದ್‌ಗೆ ಕರೆ ನೀಡಲಾಗಿತ್ತು. ಸಮಸ್ತ ವರ್ತಕರು ಇದಕ್ಕೆ ಸಹಕರಿಸಿದ್ದು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಸಹಕರಿಸಿ ಬಂದ್ ಯಶಸ್ವಿಯಾಗಿಸಿದ್ದಿರಿ. ಬಂದ್‌ಗೆ ಸಹಕರಿಸಿದ ಪುತ್ತೂರಿನ ಎಲ್ಲಾ ವರ್ತಕರಿಗೆ ಬಿಜೆಪಿ ವ್ಯಾಪಾರ ಪ್ರಕೋಷ್ಠದ ಪುತ್ತೂರು ತಾಲೂಕು ಸಂಚಾಲಕ ಉಜ್ವಲ್ ಪ್ರಭು ಪುತ್ತೂರು ಅವರು ಧನ್ಯವಾದ ತಿಳಿಸಿದ್ದಾರೆ.
























