• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

September 13, 2026
ಎಐ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರ ಸಂಗತಿಯೇ ನಿರ್ನಾಮ-ಆಂಥ್ರೋಪಿಕ್

ಎಐ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರ ಸಂಗತಿಯೇ ನಿರ್ನಾಮ-ಆಂಥ್ರೋಪಿಕ್

September 13, 2026
ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

September 13, 2026
ಖರ್ಗೆ ಭಾಷಣದ ಸ್ಥಳ  ಶುದ್ದಿಕರಣ ಕೃತ್ಯ ಖಂಡಿಸಿ ಪುತ್ತೂರಿನಲ್ಲಿ  ಮೌನ  ಪ್ರತಿಭಟನೆ

ಖರ್ಗೆ ಭಾಷಣದ ಸ್ಥಳ ಶುದ್ದಿಕರಣ ಕೃತ್ಯ ಖಂಡಿಸಿ ಪುತ್ತೂರಿನಲ್ಲಿ ಮೌನ ಪ್ರತಿಭಟನೆ

September 12, 2026
ತೆಲುಗು ಬಿಗ್‌ಬಾಸ್‌ನಲ್ಲಿ ಗಮನ ಸೆಳೆಯುತ್ತಿರುವ ಪುತ್ತೂರು ಮೂಲದ ಚೈತ್ರ ರೈ!

ತೆಲುಗು ಬಿಗ್‌ಬಾಸ್‌ನಲ್ಲಿ ಗಮನ ಸೆಳೆಯುತ್ತಿರುವ ಪುತ್ತೂರು ಮೂಲದ ಚೈತ್ರ ರೈ!

September 12, 2026
ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಲೆಕ್ಕಪತ್ರ ಮಂಡನಾ ಸಭೆ – ಸೀತಾ ಪರಿವಾರ ಪದಾಧಿಕಾರಿಗಳ ಆಯ್ಕೆ ಹಾಗೂ ಅಭಿನಂದನಾ ಸಭೆ

ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಲೆಕ್ಕಪತ್ರ ಮಂಡನಾ ಸಭೆ – ಸೀತಾ ಪರಿವಾರ ಪದಾಧಿಕಾರಿಗಳ ಆಯ್ಕೆ ಹಾಗೂ ಅಭಿನಂದನಾ ಸಭೆ

September 12, 2026
ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

September 12, 2026
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಪುತ್ತೂರು ಕೇಂದ್ರ ವತಿಯಿಂದ ಇಂಜಿನಿಯರ್ಸ್ ಡೇ

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಪುತ್ತೂರು ಕೇಂದ್ರ ವತಿಯಿಂದ ಇಂಜಿನಿಯರ್ಸ್ ಡೇ

September 12, 2026
ಪುತ್ತೂರು ನಗರಕ್ಕೂ ಕಾಡುಕೋಣಗಳ ಲಗ್ಗೆ!

ಪುತ್ತೂರು ನಗರಕ್ಕೂ ಕಾಡುಕೋಣಗಳ ಲಗ್ಗೆ!

September 11, 2026
ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್‌. ಪೂಜಾರಿ ನೇಮಕ

ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್‌. ಪೂಜಾರಿ ನೇಮಕ

September 10, 2026
ಬೆಳ್ತಂಗಡಿ: ಮಿಯಾರುನಲ್ಲಿ ಯುವತಿ ಆತ್ಮಹತ್ಯೆ

ಬೆಳ್ತಂಗಡಿ: ಮಿಯಾರುನಲ್ಲಿ ಯುವತಿ ಆತ್ಮಹತ್ಯೆ

September 10, 2026
ವಿಟ್ಲ: (ಸೆ.13) ಪುತ್ತಿಲ ಪರಿವಾರ ಸೇವಾ ಟ್ರಸ್ಟ್(ರಿ) ಪುತ್ತೂರು-ವಿಟ್ಲ ಘಟಕ, ಮತ್ತು ರೋಟರಿ ಕ್ಲಬ್ ಇವರ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ

ವಿಟ್ಲ: (ಸೆ.13) ಪುತ್ತಿಲ ಪರಿವಾರ ಸೇವಾ ಟ್ರಸ್ಟ್(ರಿ) ಪುತ್ತೂರು-ವಿಟ್ಲ ಘಟಕ, ಮತ್ತು ರೋಟರಿ ಕ್ಲಬ್ ಇವರ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ

September 10, 2026
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ

September 9, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Sunday, September 13, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

    ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

    ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

    ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

    ಖರ್ಗೆ ಭಾಷಣದ ಸ್ಥಳ  ಶುದ್ದಿಕರಣ ಕೃತ್ಯ ಖಂಡಿಸಿ ಪುತ್ತೂರಿನಲ್ಲಿ  ಮೌನ  ಪ್ರತಿಭಟನೆ

    ಖರ್ಗೆ ಭಾಷಣದ ಸ್ಥಳ ಶುದ್ದಿಕರಣ ಕೃತ್ಯ ಖಂಡಿಸಿ ಪುತ್ತೂರಿನಲ್ಲಿ ಮೌನ ಪ್ರತಿಭಟನೆ

    ತೆಲುಗು ಬಿಗ್‌ಬಾಸ್‌ನಲ್ಲಿ ಗಮನ ಸೆಳೆಯುತ್ತಿರುವ ಪುತ್ತೂರು ಮೂಲದ ಚೈತ್ರ ರೈ!

    ತೆಲುಗು ಬಿಗ್‌ಬಾಸ್‌ನಲ್ಲಿ ಗಮನ ಸೆಳೆಯುತ್ತಿರುವ ಪುತ್ತೂರು ಮೂಲದ ಚೈತ್ರ ರೈ!

    ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಲೆಕ್ಕಪತ್ರ ಮಂಡನಾ ಸಭೆ – ಸೀತಾ ಪರಿವಾರ ಪದಾಧಿಕಾರಿಗಳ ಆಯ್ಕೆ ಹಾಗೂ ಅಭಿನಂದನಾ ಸಭೆ

    ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಲೆಕ್ಕಪತ್ರ ಮಂಡನಾ ಸಭೆ – ಸೀತಾ ಪರಿವಾರ ಪದಾಧಿಕಾರಿಗಳ ಆಯ್ಕೆ ಹಾಗೂ ಅಭಿನಂದನಾ ಸಭೆ

    ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

    ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

    ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಪುತ್ತೂರು ಕೇಂದ್ರ ವತಿಯಿಂದ ಇಂಜಿನಿಯರ್ಸ್ ಡೇ

    ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಪುತ್ತೂರು ಕೇಂದ್ರ ವತಿಯಿಂದ ಇಂಜಿನಿಯರ್ಸ್ ಡೇ

    ಪುತ್ತೂರು ನಗರಕ್ಕೂ ಕಾಡುಕೋಣಗಳ ಲಗ್ಗೆ!

    ಪುತ್ತೂರು ನಗರಕ್ಕೂ ಕಾಡುಕೋಣಗಳ ಲಗ್ಗೆ!

    ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್‌. ಪೂಜಾರಿ ನೇಮಕ

    ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್‌. ಪೂಜಾರಿ ನೇಮಕ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

by ಪ್ರಜಾಧ್ವನಿ ನ್ಯೂಸ್
September 13, 2026
in ಪುತ್ತೂರು
0
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ
7
SHARES
21
VIEWS
ShareShareShare

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ ಇದರ ವತಿಯಿಂದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 14ರಿಂದ 16ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೋಡಿಂಬಾಡಿಯ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆಯಲಿದೆ.

ಸೆ.14ರಂದು ಪೂರ್ವಾಹ್ನ 10ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠಾ ಪೂಜೆ ನಡೆಯಲಿದ್ದು ಮಂಗಳೂರು ಗಂಜಿಮಠದ ಬಿಗ್‌ಬ್ಯಾಗ್ಸ್ ಇಂಟರ್ ನ್ಯಾಶನಲ್‌ನ ಮುಖ್ಯಸ್ಥೆ ಮಮತಾ ಸುನೀಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪೂರ್ವಾಹ್ನ 11.30ಕ್ಕೆ ಗಣಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 1 ಗಂಟಗೆ ಎನ್.ಪಿ.ಬಿ. ಮ್ಯೂಸಿಕಲ್ಸ್ ಬೆಳ್ಳಿಪ್ಪಾಡಿ ಇವರಿಂದ ಗೀತ ಗಾಯನ ಸಂಗೀತ ರಸಮಂಜರಿ, ಸಂಜೆ 3.30ರಿಂದ ಯುವಶಕ್ತಿ ಗೆಳೆಯರ ಬಳಗ ವಿನಾಯಕನಗರ ಮತ್ತು ಶ್ರೀ ಚಿನ್ಮಯೀ ಮಹಿಳಾ ಭಜನಾ ಮಂಡಳಿ ಮಠಂತಬೆಟ್ಟು ಇವರಿಂದ ಭಜನಾ ಸೇವೆ, ಸಂಜೆ 6ರಿಂದ ಕೋಡಿಂಬಾಡಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ.

ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ. ವಾರಿಸೇನ ಜೈನ್ ಕೋಡಿಯಾಡಿಗುತ್ತು ಚಾವಡಿ ಸಭಾಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ ಕೆ. ಎಸ್., ಪುತ್ತೂರು ವಿಜಯ ಸಾಮ್ರಾಟ್‌ನ ಅಧ್ಯಕ್ಷ ಸಹಜ್ ರೈ ಬಳಜ್ಜ, ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್‌ನ ಪುತ್ತೂರು ಯೋಜನಾಧಿಕಾರಿ ಶಶಿಧರ ಎಂ., ಕಂಪಾನಿಯೋ ವೆಲ್‌ನೆಸ್ ಸೆಂಟರ್ ಮಾಲಕ ಪ್ರಭಾಕರ ಸಾಲಿಯಾನ್ ಬಾಕಿಲಗುತ್ತು, ಕೋಡಿಂಬಾಡಿ ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸ್ಫೂರ್ತಿ ರಾಜಮಣಿ ರೈ ಮತ್ತು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯ ನಿವೃತ್ತ ಉಪ ತಹಶೀಲ್ದಾರ್ ಬಾಬು ನಾಯ್ಕ್ ಕಜೆ ಭಾಗವಹಿಸಲಿದ್ದಾರೆ. ರಾತ್ರಿ 8.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 9ರಿಂದ ತುಳಸಿ ಮತ್ತು ಕೆ. ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು, ವಿವೇಕ್ ಪಿ. ಸಾಲ್ಯಾನ್ ಮತ್ತು ಪೃಥ್ವಿ ಪಿ. ಸಾಲಿಯಾನ್ ಕೈಪ ಕೋಡಿಂಬಾಡಿ ಇವರ ಪ್ರಾಯೋಜಕತ್ವದಲ್ಲಿ ರಾಜ್ ಡಾನ್ಸ್ ಕ್ರಿಯೇಷನ್ಸ್ ಪುತ್ತೂರು ಹಾಗೂ ಟೀಮ್ ಡಾಟ್ ವಿಟ್ಲ ತಂಡದಿಂದ ಡ್ಯಾನ್ಸ್ ನೈಟ್ ಕಾರ್ಯಕ್ರಮ ನಡೆಯಲಿದೆ. ವನಿತಾ ಸಮಾಜ ಕೋಡಿಂಬಾಡಿ ಮತ್ತು ಯುವಶಕ್ತಿ ಗೆಳೆಯರ ಬಳಗ ವಿನಾಯಕ ನಗರ ಕೋಡಿಂಬಾಡಿ ಇವರು ಈ ದಿನ ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ.

ಸೆ.15ರಂದು ಪೂರ್ವಾಹ್ನ 10ರಿಂದ ವೇದಮೂರ್ತಿ ಶ್ರೀವತ್ಸ ಕೆದಿಲಾಯ ಶಿಬರ ಅವರ ನೇತೃತ್ವದಲ್ಲಿ 108 ತೆಂಗಿನಕಾಯಿ ಗಣಯಾಗ, 11.45ಕ್ಕೆ ಗಣಯಾಗದ ಪೂರ್ಣಾಹುತಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ-ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 1ರಿಂದ ನವೀನ್ ಪಾದೆಕಲ್ಲು ಬೆಳ್ಳಿಪ್ಪಾಡಿ ಸಾರಥ್ಯದ ಸ್ಕಂದ ಮ್ಯೂಸಿಕಲ್ಸ್ ಬೆಳ್ಳಿಪ್ಪಾಡಿ ಮತ್ತು ತಂಡದವರಿಂದ ಸ್ವರ ಸಂಗಮ ಸಂಗೀತ ರಸಮಂಜರಿ, ಸಂಜೆ 4.15ರಿಂದ ಧರ್ಮಶ್ರೀ ಭಜನಾ ಮಂಡಳಿ ಅಶ್ವತ್ಥಕಟ್ಟೆ ಕೋಡಿಂಬಾಡಿ ಇವರಿಂದ ಭಜನಾ ಸೇವೆ, ಸಂಜೆ 6ರಿಂದ ಸ್ಥಳೀಯ ಕಲಾ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ರಾತ್ರಿ 7ರಿಂದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಭರತ್ ಗೌಡ ನಿಡ್ಯ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕಿರಣಚಂದ್ರ ಪುಷ್ಪಗಿರಿ, ಉದ್ಯಮಿ ಉಜ್ವಲ್ ಪ್ರಭು, ದುಬೈಯ ಉದ್ಯಮಿ ಅಜಿತ್ ಕುಮಾರ್ ಕೆ. ಆರ್. ಕೋಡಿಂಬಾಡಿ ಮತ್ತು ನಿವೃತ್ತ ಪೊಲೀಸ್ ಉಪನಿರೀಕ್ಷಕ ರುಕ್ಮಯ ನಾಯ್ಕ್ ಭಾಗವಹಿಸಲಿದ್ದಾರೆ. ರಾತ್ರಿ 8.15ಕ್ಕೆ ರಂಗಪೂಜೆ, 8.45ಕ್ಕೆ ಮಹಾಪೂಜೆ-ಪ್ರಸಾದ ವಿತರಣೆ, ಅನ್ನಸಂತರ್ಪಣೆ, 9ರಿಂದ ದುಬೈಯ ಉದ್ಯಮಿ ಅಜಿತ್ ಕುಮಾರ್ ಕೆ.ಆರ್. ಕೋಡಿಂಬಾಡಿ ಇವರ ಪ್ರಾಯೋಜಕತ್ವದಲ್ಲಿ ಯಶಸ್ವಿ ಕಲಾವಿದೆರ್ ಮಂಜೇಶ್ವರ ಇವರಿಂದ ಅಬ್ಬರ ತುಳು ಹಾಸ್ಯಮಯ-ಭಯಾನಕ ನಾಟಕ ನಡೆಯಲಿದೆ. ಈ ದಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೋಡಿಂಬಾಡಿ ಒಕ್ಕೂಟ ಮತ್ತು ಕೋಡಿಂಬಾಡಿಯ ಅಶ್ವತ್ಥಕಟ್ಟೆ ಧರ್ಮಶ್ರೀ ಕಲಾ ಸಂಘದವರು ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ.

8722552464 Astrloger

ಜಾಹೀರಾತು

ಸೆ.16ರಂದು ಬೆಳಗ್ಗೆ 10ರಿಂದ ತಿರುಪತಿ ತಿರುಮಲ ಟ್ರಸ್ಟ್ ಮಹಿಳಾ ಭಜನಾ ಮಂಡಳಿ ಬೊಳುವಾರು ಪುತ್ತೂರು ಇವರಿಂದ ಭಜನಾ ಸೇವೆ, 10.30ಕ್ಕೆ ಗಣಹೋಮ, 11-30ಕ್ಕೆ ಅಶ್ವತ್ಥ ಪೂಜೆ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 3.15ಕ್ಕೆ ವಿಸರ್ಜನಾ ಪೂಜೆ, ಸಂಜೆ 4ರಿಂದ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ರಾಜಶ್ರೀ ಭಜನಾ ಮಂಡಳಿ ಅಂಬೆಲ ನೆಕ್ಕಿಲಾಡಿ, ಮದಗಶ್ರೀ ಭಜನಾ ಮಂಡಳಿ ಪಡ್ನೂರು, ಮಹಾದೇವಿ ಭಜನಾ ಮಂಡಳಿ ಕಬಕ, ರಾಜರಾಜೇಶ್ವರಿ ಭಜನಾ ಮಂಡಳಿ ಶಿವಾರು, ಸಿದ್ಧಿವಿನಾಯಕ ಭಜನಾ ಮಂಡಳಿ ಸಿದ್ಧಿವಿನಾಯಕ ಬೆಟ್ಟ ಗೋಳಿತೊಟ್ಟು ಮತ್ತು ವೀರಮಾರುತಿ ಭಜನಾ ಮಂಡಳಿ ಪುಳುವಾರು ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ. ಧರ್ಮಶ್ರೀ ಭಜನಾ ಮಂಡಳಿ ಮತ್ತು ಧರ್ಮಶ್ರೀ ಕಲಾ ಸಂಘ ಅಶ್ವತ್ಥಕಟ್ಟೆ ಕೋಡಿಂಬಾಡಿ ಇವರು ಪ್ರಾಯೋಜಕತ್ವ ವಹಿಸಲಿದ್ದಾರೆ. ವಿವಿಧ ಕಲಾತಂಡಗಳ ಆಕರ್ಷಕ ಸ್ಥಬ್ಧಚಿತ್ರಗಳೊಂದಿಗೆ ಶ್ರೀ ಮಹಾಗಣಪತಿಯ ಶೋಭಾಯಾತ್ರೆ ಕೋಡಿಂಬಾಡಿ ಅಶ್ವತ್ಥಕಟ್ಟೆಯ ವಠಾರದಿಂದ ಹೊರಟು ಸೇಡಿಯಾಪು, ದಾರಂದಕುಕ್ಕುವರೆಗೆ ಸಾಗಿ ಮರಳಿ ಕೋಡಿಂಬಾಡಿ ವಿನಾಯಕ ನಗರದಿಂದಾಗಿ ಮಠದಬೆಟ್ಟು ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯಿಂದ ಹಿಂತಿರುಗಿ ಶ್ರೀ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದವರೆಗೆ ಸಾಗಿ ಗಣೇಶ್ ಸೇಡಿಯಾಪು ಇವರ ಎಸ್.ಎನ್. ಕ್ರೇನ್ ಮೂಲಕ ಶಾಂತಿನಗರ ಮೈದಾನದಲ್ಲಿ ಗಣೇಶನ ವಿಗ್ರಹದ ಜಲಸ್ಥಂಭನ ನಡೆಯಲಿದೆ. ಕೋಡಿಂಬಾಡಿ ಅಶ್ವತ್ಥಕಟ್ಟೆ ಶ್ರೀ ಧರ್ಮಶ್ರೀ ಕಲಾ ಸಂಘ ಮತ್ತು ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯವರು ಸಹಕರಿಸಲಿದ್ದಾರೆ. ಈ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇಡಿಯಾಪು ಒಕ್ಕೂಟದವರು ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ.

ಜಾಹೀರಾತು

SendShare3Share
Previous Post

ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

Next Post

ಎಐ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರ ಸಂಗತಿಯೇ ನಿರ್ನಾಮ-ಆಂಥ್ರೋಪಿಕ್

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಎಐ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರ ಸಂಗತಿಯೇ ನಿರ್ನಾಮ-ಆಂಥ್ರೋಪಿಕ್

ಎಐ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರ ಸಂಗತಿಯೇ ನಿರ್ನಾಮ-ಆಂಥ್ರೋಪಿಕ್

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..