ಪುತ್ತೂರು: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿಗಳಾದ ಉಳ್ಳಾಲ ಮೂಲದ ಪ್ರೀತೇಶ್ ಹಾಗೂ ಪುತ್ತೂರಿನ ಕಿರಣ್ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಬ್ಬರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದು ಇದೀಗ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದೆ. ಪ್ರಮುಖ ಆರೋಪಿ ಉಳ್ಳಾಲದ ಪ್ರೀತೇಶ್ ಶೆಟ್ಟಿ ಮತ್ತು ಸಂಪ್ಯ ಪೊಲೀಸ್ ಠಾಣೆ ಹಿಂಭಾಗದ ನಿವಾಸಿ ಕಿರಣ್ ರೈ ಶಿಕ್ಷೆಗೊಳಗಾದವರು. ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಸೆ.22ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.
ಮತ್ತೊಬ್ಬ ಆರೋಪಿ ಮಂಗಳೂರಿನ ಅತ್ತಾವರದ ಸ್ಟೀವನ್ ಮೊಂತೆರೊ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.
ಜೊತೆಗೆ ತಲಾ 3 ಲಕ್ಷ ರುಪಾಯಿ ದಂಡ ಮತ್ತು ದಂಡದ ಮೊತ್ತದಲ್ಲಿ ರೂ. 5 ಲಕ್ಷದ 90 ಸಾವಿರ ಮೊತ್ತವನ್ನು ಕಾರ್ತಿಕ್ ಮೇರ್ಲ ಅವರ ತಾಯಿಗೆ ನೀಡಲು ನ್ಯಾಯಾಲಯ ಸೂಚಿಸಿದೆ. ಪ್ರಕರಣದಲ್ಲಿ ಸರಕಾರಿ ವಕೀಲರಾದ ಜಯಂತಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.
ಹತ್ಯೆಗೀಡಾದ ಕಾರ್ತಿಕ್ ಅವರು ಸೆ.3ರಂದು ರಾತ್ರಿ ಸುಮಾರು 10 ಗಂಟೆ ತನಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದರು.ಆ ಬಳಿಕ ಅಲ್ಲಿಂದ ಬಂದವರು ತನ್ನ ಊರು ಸಂಪ್ಯದ ಗಣೇಶೋತ್ಸವದ ಶೋಭಾ ಯಾತ್ರೆಯಲ್ಲಿ ಸ್ವಲ್ಪಹೊತ್ತು ಪಾಲ್ಗೊಂಡಿದ್ದರು.ಸಂಪ್ಯದಲ್ಲಿ ಗಣೇಶನ ಶೋಭಾಯಾತ್ರೆ ಬಳಿಕ ಗಣೇಶೋತ್ಸವದ ವೇದಿಕೆಯಲ್ಲಿ ಯಕ್ಷಗಾನ ನಡೆಯುತ್ತಿತ್ತು.ಕಾರ್ತಿಕ್ ಅವರು ಯಕ್ಷಗಾನ ನೋಡಲು ಗಣೇಶೋತ್ಸವದ ಪೆಂಡಾಲ್ ಬಳಿ ಬಂದಿದ್ದರು.ಮುಖ್ಯರಸ್ತೆಯಿಂದ ಸಂಪ್ಯ ಠಾಣೆಗೆ ಹೋಗುವ ಡಾಮರುರಸ್ತೆಯಲ್ಲಿ ನಿಂತು ಯಕ್ಷಗಾನ ನೋಡುತ್ತಿದ್ದಾಗ ಅಲ್ಲಿ ಆರೋಪಿಗಳಾದ ಚರಣ್‌ರಾಜ್, ಕಿರಣ್ ಮತ್ತು ಅವರ ವಾಹನ ಚಾಲಕ ಪ್ರೀತೇಶ್ ಶೆಟ್ಟಿ ಅಲ್ಲಿಗೆ ಬಂದಿದ್ದರು.ಅದ್ಯಾವುದೋ ವಿಚಾರಕ್ಕೆ ಸಂಬಂಧಿಸಿ ಅಲ್ಲಿ ಅವರೊಳಗೆ ಮಾತಿಗೆ ಮಾತು ಬೆಳೆದು ಅದು ತಾರಕಕ್ಕೇರಿ,ಚರಣ್‌ರಾಜ್ ರೈ ಮತ್ತು ಕಿರಣ್ ರೈ ಸಹೋದರರು ಕಾರ್ತಿಕ್ ಅವರ ಕೈಯನ್ನು ಹಿಡಿದಿದ್ದರು.ಈ ವೇಳೆ ಪ್ರೀತೇಶ್ ಹರಿತವಾದ ಆಯುಧದಿಂದ ಕಾರ್ತಿಕ್ ಸುವರ್ಣ ಅವರ ಎದೆಯ ಕೆಳಭಾಗಕ್ಕೆ ತಿವಿದ ಪರಿಣಾಮವಾಗಿ ಗಾಯವಾಗಿ ರಕ್ತ ಸುರಿಯಲಾರಂಭಿಸಿ ಕಾರ್ತಿಕ್ ಅಲ್ಲೇ ಕುಸಿದು ಬಿದ್ದಿದ್ದರು.ಆ ವೇಳೆ ಸಾರ್ವಜನಿಕರು ಸೇರಿದಾಗ ಆರೋಪಿಗಳು, ಕೃತ್ಯಕ್ಕೆ ಉಪಯೋಗಿಸಿದ ಚೂರಿಯೊಂದಿಗೆ ಕೆ.ಎ.21:ಝಡ್ 234 ನಂಬ್ರದ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು.ಸಂಪ್ಯ ಪೊಲೀಸರು ಮತ್ತು ಸಾರ್ವಜನಿಕರು ಸೇರಿಕೊಂಡು ಕಾರ್ತಿಕ್ ಸುವರ್ಣರನ್ನು ಚಿಕಿತ್ಸೆಗಾಗಿ ರಿಕ್ಷಾವೊಂದರಲ್ಲಿ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

ಚರಣ್‌ರಾಜ್ ಮತ್ತು ಕಿರಣ್ ಸಹೋದರರಾಗಿದ್ದು,ಪ್ರಮುಖ ಆರೋಪಿ ಪ್ರೀತೇಶ್ ಶೆಟ್ಟಿ ಅವರ ದೂರದ ಸಂಬಂಧಿ.ಆರೋಪಿಗಳ ಪೈಕಿ ಕಿರಣ್ ರೈ ವೃತ್ತಿಯಲ್ಲಿ ಗುತ್ತಿಗೆದಾರನಾಗಿದ್ದರೆ,ತಮ್ಮ ಚರಣ್‌ರಾಜ್ ಚಿಟ್ ಫಂಡ್ ಒಂದರ ಪಾಲುದಾರನಾಗಿದ್ದನಲ್ಲದೆ ಹಣಕಾಸು ವ್ಯವಹಾರವನ್ನೂ ನಡೆಸುತ್ತಿದ್ದ.ಪ್ರೀತೇಶ್ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ಸ್ಟೇಷನಿನಲ್ಲಿ ರೌಡಿ ಶೀಟರ್ ಆಗಿದ್ದು, ಈತನ ವಿರುದ್ದ ಹಲವು ಪ್ರಕರಣಗಳು ಕೇರಳ ಠಾಣೆಯಲ್ಲಿ ಇದೆ.ಈತನೇ ಕಾರ್ತಿಕ್ ಅವರಿಗೆ ಚೂರಿಯಿಂದ ಇರಿದ ವ್ಯಕ್ತಿ ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದರು.ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರ 2 ತಂಡ ರಚನೆ ಮಾಡಲಾಗಿತ್ತು.ಕೊನೆಗೂ ನಾಲ್ವರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದರು.