ಪುತ್ತೂರು: ಬೊಳುವಾರು–ಹಾರಾಡಿ ರಸ್ತೆ ಮೂಲಕ ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಪುನರಾರಂಭ ಬೊಳುವಾರು ಮೂಲಕ KSRTC ಬಸ್ಗಳು ಪೂರ್ಣ ಪ್ರಮಾಣದಲ್ಲಿ ಯಾವ ದಿನದಿಂದ ಮತ್ತೆ ಸಂಚರಿಸುತ್ತವೆಂದು ಕಾಯುವಿಕೆಗೆ ಮುಕ್ತಿಯಾಗಿದೆ.
ಮೂರು ತಿಂಗಳಿಂದ ಸಂಚಾರವಿಲ್ಲದೆ ಈ ಭಾಗದ ಜನ ಮತ್ತು ವ್ಯಾಪಾರಸ್ಥರು ಸಂಚಾರ ಯಾವಾಗ ಸುರುವಾಗುತ್ತದೆ ಎಂದು ಅಂದು ಕೊಂಡಿದ್ದರು ಅದು ಕೊನೆಗೂ ಈಡೇರಿದೆ ಎಪಿಎಂಸಿ ಮುಕಾಂತರ ಸಂಚಾರ ಮಾಡುತಿದ್ದ ಬಸ್ ಗಳು ಪಥ ಬದಲಾವಣೆ ಮಾಡಿದೆ. 11-10-2026 ರಿಂದ ಕೆಎಸ್ಆರ್ಟಿಸಿ ಅಧಿಕಾರಿಗಳು ಹಿಂದಿನಂತೆ ಬೊಲ್ವಾರ್ ಮುಖಂತರ ಬಸ್ ಸಂಚಾರಕ್ಕೆ ಅನುಮಾತಿಸಿದ್ದು ಈ ಭಾಗದಲ್ಲಿ ಸಂಚಾರ ಮಾಡುವ ಜನ ನಿಟ್ಟುಸಿರು ಬಿಟ್ಟಿದ್ದರೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಹಾರಾಡಿ ರೈಲ್ವೆ ಸೇತುವೆಯ ಕೆಳಭಾಗದಲ್ಲಿ ಕಾಂಕ್ರೀಟೀಕರಣ ಕಾಮಗಾರಿ ನಡೆದ ಹಿನ್ನೆಲೆಯಲ್ಲಿ, ಜೂನ್ 15 ರಿಂದ ಜುಲೈ 15 ರವರೆಗೆ ಒಂದು ತಿಂಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಲೋಕೋಪಯೋಗಿ ಇಲಾಖೆ ಆದೇಶಿಸಿತ್ತು ಆದರೇ ಬಸ್ ಸಂಚಾರಕ್ಕೆ ಮೂರು ತಿಂಗಳು ಪಡೆದು ಕೊಂಡೀತು .
ಹಾರಾಡಿ ರೈಲ್ವೆ ಸೇತುವೆಯ ಕೆಳಭಾಗದಲ್ಲಿ ರಸ್ತೆಯು ಅತ್ಯಂತ ಕಿರಿದಾಗಿದ್ದು, ಚತುಷ್ಪಥ ಕಾಂಕ್ರೀಟೀಕರಣ ಕಾಮಗಾರಿ ನಡೆಯುವ ಸಂದರ್ಭದಲ್ಲಿ ದ್ವಿಮುಖ ವಾಹನ ಸಂಚಾರ ಅಸಾಧ್ಯವಾಗಿದೆ ಎಂದು . ಈ ಹಿನ್ನೆಲೆಯಲ್ಲಿ ಕಾಮಗಾರಿ ಸುಗಮವಾಗಿ ನಡೆಯಲು ಒಂದು ತಿಂಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಿ, ಪರ್ಯಾಯ ಮಾರ್ಗಗಳನ್ನು ನಿಗದಿಪಡಿಸಲಾಗಿತ್ತು . ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಬರುವ ವಾಹನಗಳು: ಉಪ್ಪಿನಂಗಡಿ ಕಡೆಯಿಂದ ಬರುವ ವಾಹನಗಳು ಕೋಟೆಚಾ ಹಾಲ್ ಮೂಲಕ ಎ.ಪಿ.ಎಂ.ಸಿ. ರಸ್ತೆಯಾಗಿ ಪುತ್ತೂರು ಮುಖ್ಯ ರಸ್ತೆಯನ್ನು ಸೇರುತ್ತಿತು.


























