ಪುತ್ತೂರು: ಕುರಿಯದಲ್ಲಿ ಅಂಗನವಾಡಿಯಿಂದ ಮಗಳನ್ನು ಕರೆದುಕೊಂಡು ಬರಲು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಸ್ಕೂಟರ್ನಲ್ಲಿ ಹಿಂಬಾಲಿಸಿಕೊಂಡು ಬಂದು ಅನುಚಿತವಾಗಿ ವರ್ತಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಇಯಾಸ್ ಪುರುಷರಕಟ್ಟೆ ಬಂಧಿತ ಆರೋಪಿ.
ಮೋಕ್ಷಿತಾ ಎಂಬವರು ಮಧ್ಯಾಹ್ನ ಮಾವಿನಕಟ್ಟೆ ಅಂಗನವಾಡಿಯಿಂದ ಮಗಳನ್ನು ಕರೆದುಕೊಂಡು ಬರಲು ಮನೆಯಿಂದ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುರಿಯ ಪ್ರಾಥಮಿಕ ಶಾಲೆಯ ಬಳಿ ತಲುಪಿದಾಗ, ಪಂಜಳ ಕಡೆಯಿಂದ ಸ್ಕೂಟರ್ನಲ್ಲಿ ಬಂದ ಯುವಕನೊಬ್ಬ ಅವರನ್ನು ಹಿಂಬಾಲಿಸಿಕೊಂಡು ಬಂದು ಪಕ್ಕದಲ್ಲಿ ಸ್ಕೂಟರ್ ನಿಲ್ಲಿಸಿದ್ದಾನೆ. ಬಳಿಕ ತನ್ನೊಂದಿಗೆ ಸ್ಕೂಟರ್ನಲ್ಲಿ ಬರುವಂತೆ ಕೇಳಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿ ಮುಂದೆ ಸಾಗಿದಾಗ ಮತ್ತೆ ಹತ್ತಿರ ಬಂದು ತನ್ನನ್ನು ಅಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಯುವಕನ ವರ್ತನೆಯಿಂದ ಭಯಗೊಂಡ ಮಹಿಳೆ ಬೊಬ್ಬೆ ಹೊಡೆದ ಪರಿಣಾಮ ಆಸುಪಾಸಿನಲ್ಲಿದ್ದವರು ಓಡಿ ಬಂದು ಆರೋಪಿಯನ್ನು ಹಿಡಿದು ವಿಚಾರಿಸಿದ್ದರು. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 139-2026, ಕಲಂ 75(2), 78(1), 79 BNS 2023. (5.5.139/2026) ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಸೂಕ್ತ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಿದೆ.

























