ಬೆಳ್ತಂಗಡಿ: ಕರ್ನಾಟಕ ಸರಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೇ 18 ರಂದು ಸಂಜೆ ಇತ್ತಿಚೇಗಷ್ಟೇ ವಿಧಿವಶರಾದ ಮಾಜಿ ಶಾಸಕ ಕೆ. ವಸಂತ ಬಂಗೇರರ ಬೆಳ್ತಂಗಡಿಯ ಹಳೆಕೋಟೆ ಮನೆಗೆ ಭೇಟಿ ನೀಡಿ ಬಂಗೇರರ ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಕುಟುಂಬಸ್ಥರಿಗೆ ಸಂತ್ವಾನ ಹೇಳಿದರು.
ನನ್ನ ತಂದೆ ಬಂಗಾರಪ್ಪ ಅವರಂತೆ ವಸಂತ ಬಂಗೇರ ಅವರು ಕೂಡಾ ನೇರ ನಡೆನುಡಿಯ ವ್ಯಕ್ತಿಯಾಗಿದ್ದರು. ಬೆಳ್ತಂಗಡಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ರಾಜಕೀಯ ಕ್ಷೇತ್ರದಲ್ಲಿ ಬಹಳಷ್ಟು ಅನುಭವವನ್ನು ಹೊಂದಿದ್ದರು. ಅವರ ನಿಧನರಾದ ದಿನ ಅನಿವಾರ್ಯ ಕಾರಣಗಳಿಂದ ನನಗೆ ಬರಲು ಸಾಧ್ಯವಾಗಿಲ್ಲ. ನಾವು ಅವರ ಕುಟುಂಬಸ್ಥರ ಜೊತೆ ಸದಾ ಇರುತ್ತೇವೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.