ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) 121ನೇ ಸೇವಾ ಕಾರ್ಯದ ಭಾಗವಾಗಿ ಮಾರಕ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿರುವ ಕಾಸರಗೋಡು ಬಂದ್ಯೋಡು ಅಡ್ಕ ನಿವಾಸಿ ಗೌತಮಿ ಗಣೇಶ್ ಪೂಜಾರಿ ದಂಪತಿಗಳ 11 ವರ್ಷದ ಹೆಣ್ಣು ಮಗು ಶಾನ್ವಿಯ ಚಿಕಿತ್ಸೆಗೆ 70,000 ರೂಪಾಯಿ ಮತ್ತು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ಕಾವಳಪಡೂರು ಮಧ್ವ ನಿವಾಸಿ ಲಕ್ಷ್ಮೀ ಅವರ ವೈದ್ಯಕೀಯ ವೆಚ್ಚಕ್ಕೆ 20,000 ರೂಪಾಯಿಯ ನೆರವನ್ನು ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ, ಬಿ.ಸಿ. ರೋಡ್ ಇಲ್ಲಿ ಹಸ್ತಾಂತರ ಮಾಡಲಾಯಿತು. ಈ ಸಮಯದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

























