ಬೆಂಗಳೂರು : ರಾಜ್ಯದಲ್ಲಿ ಬಹುನಿರೀಕ್ಷಿತ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಸರ್ಕಾರವು ಕ್ಷೇತ್ರವಾರು ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಪಡಿಸಿ ಅಧಿಕೃತ ವಿಶೇಷ ರಾಜ್ಯಪತ್ರ ಅಧಿಸೂಚನೆಯನ್ನು ಪ್ರಕಟಿಸಿದೆ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮಾವಳಿಗಳ ಅನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಮಹತ್ವದ ಅಧಿಸೂಚನೆಗಳನ್ನು ಹೊರಡಿಸಿದೆ. ಸರ್ಕಾರವು ಈ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ರದ್ದುಪಡಿಸಿ, ಹೊಸದಾಗಿ ಪ್ರವರ್ಗವಾರು ಮತ್ತು ಮಹಿಳಾ ಮೀಸಲಾತಿಯನ್ನು ನಿಗದಿಪಡಿಸಿ ಈ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ ಒಟ್ಟು 31 ಜಿಲ್ಲೆಗಳ 239 ತಾಲೂಕು ಪಂಚಾಯಿತಿಗಳ 3,656 ಸದಸ್ಯ ಸ್ಥಾನಗಳಿಗೆ ಮೀಸಲಾತಿಯನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು, ಅಂದರೆ 1,905 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ರಾಜ್ಯದ ಎಲ್ಲಾ 31 ಜಿಲ್ಲಾ ಪಂಚಾಯಿತಿಗಳ ಒಟ್ಟು 1,129 ಕ್ಷೇತ್ರಗಳಿಗೆ ವರ್ಗವಾರು ಹಾಗೂ ಮಹಿಳಾ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದ ಎಲ್ಲಾ 31 ಜಿಲ್ಲಾ ಪಂಚಾಯಿತಿಗಳ ಒಟ್ಟು 1,129 ಕ್ಷೇತ್ರಗಳಿಗೆ ವರ್ಗವಾರು ಹಾಗೂ ಮಹಿಳಾ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ವರ್ಗವಾರು ಒಟ್ಟು ಸ್ಥಾನಗಳ ವಿವರ- ಎಸ್ಸಿ : ಒಟ್ಟು 225 ಸ್ಥಾನಗಳು ( 121 ಸ್ಥಾನಗಳು ಮಹಿಳೆಯರಿಗೆ) ಎಸ್ಟಿ: ಒಟ್ಟು 102 ಸ್ಥಾನಗಳು (59 ಸ್ಥಾನಗಳು ಮಹಿಳೆಯರಿಗೆ) ಹಿಂದುಳಿದ ವರ್ಗ ‘ಅ’ : ಒಟ್ಟು 183 ಸ್ಥಾನಗಳು (98 ಸ್ಥಾನಗಳು ಮಹಿಳೆಯರಿಗೆ) ಸಾಮಾನ್ಯ ವರ್ಗ : ಒಟ್ಟು 576 ಸ್ಥಾನಗಳು ( 268 ಸ್ಥಾನಗಳು ಮಹಿಳೆಯರಿಗೆ)
ತಾಲೂಕು ಪಂಚಾಯ್ತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟ: ಇನ್ನು ತಾಲೂಕು ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟವಾಗಿದ್ದು, ರಾಜ್ಯದಲ್ಲಿ ಒಟ್ಟು 3,656 ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಗಳಿವೆ. ಈ ಪೈಕಿ ಪರಿಶಿಷ್ಟ ಜಾತಿಗೆ 733, ಪರಿಶಿಷ್ಟ ಪಂಗಡಕ್ಕೆ 394 ಸ್ಥಾನ ಮೀಸಲು. ಹಾಗೇ ಹಿಂದುಳಿದ ವರ್ಗ ಎ-508, ಹಿಂದುಳಿದ ವರ್ಗ ಎ-111 ಸ್ಥಾನ, ಸಾಮಾನ್ಯ ವರ್ಗಕ್ಕೆ 1,910 ಸ್ಥಾನಗಳು ಮೀಸಲು. ಒಟ್ಟು ಒಟ್ಟು 3,656 ಸ್ಥಾನಗಳಿಗೆ ವರ್ಗವಾರು ಮೀಸಲಾತಿ ಪ್ರಕಟಿಸಲಾಗಿದೆ.
ತಾಲೂಕು ಪಂಚಾಯಿತಿ ಸ್ಥಾನಗಳ ಹಂಚಿಕೆ:
- ಎಸ್ಸಿ – 733
- ಎಸ್ಟಿ – 394
- ಹಿಂದುಳಿದ ವರ್ಗ ‘ಎ’ – 508
- ಹಿಂದುಳಿದ ವರ್ಗ ‘ಬಿ’ – 111
- ಸಾಮಾನ್ಯ – 1,910
- ಮಹಿಳೆಯರಿಗೆ – 1,905 ಸ್ಥಾನಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35 ಜಿಲ್ಲಾ ಪಂಚಾಯಿತಿ ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಮೀಸಲಾತಿ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಚುನಾವಣಾ ಆಕಾಂಕ್ಷಿಗಳ ಚಟುವಟಿಕೆಗಳು ಚುರುಕುಗೊಳ್ಳುವ ನಿರೀಕ್ಷೆಯಿದೆ. ಚುನಾವಣಾ ಪ್ರಕ್ರಿಯೆಯನ್ನು ಮುಂದಿನ ಹಂತದಲ್ಲಿ ರಾಜ್ಯ ಚುನಾವಣಾ ಆಯೋಗ ಮುಂದುವರಿಸಲಿದೆ























